ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಚುನಾವಣೆಯ ಪ್ರಮುಖ ಸಂಗತಿಗಳು ಇವು

By Manjunatha
|
Google Oneindia Kannada News

Recommended Video

Karnataka Assembly Elections 2018 : ಚುನಾವಣೆಯ ಬಗ್ಗೆ ಪ್ರಮುಖ ಸಂಗತಿಗಳು | Oneindia Kannada

ಬೆಂಗಳೂರು, ಮಾರ್ಚ್‌ 27: ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆ ಮಾಡಿದ್ದು, ಮತದಾನವು ಮೇ 12 ಮತ್ತು ಮತ ಎಣಿಕೆಯು ಮೇ 15ರಂದು ನಡೆಯಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವವರೆಷ್ಟು, ಮತಗಟ್ಟೆಗಳೆಷ್ಟು, ಚುನಾವಣೆಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಬಳಕೆ ಆಗಲಿರುವ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳೆಷ್ಟು ಇನ್ನೂ ಹತ್ತು ಹಲವು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಈ ಬಾರಿ ಚುನಾವಣೆಯಲ್ಲಿ 4,96,82,351 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕಳೆದ 2013 ರ ಚುನಾವಣೆಯಲ್ಲಿ ನೊಂದಾಯಿತ ಮತದಾರರ ಸಂಖ್ಯೆ ಇದ್ದದ್ದು, 4,36,85,739 ಐದು ವರ್ಷದಲ್ಲಿ ಮತದಾರರ ಸಂಖ್ಯೆ ಶೇ 9ರಷ್ಟು ಏರಿಕೆ ಕಂಡಿದೆ.

ನಿಮ್ಮ ನಿಮ್ಮ ಜಿಲ್ಲೆಯಲ್ಲಿನ ರಾಜ್ಯದ ಮೀಸಲು ಕ್ಷೇತ್ರಗಳ ಪಟ್ಟಿನಿಮ್ಮ ನಿಮ್ಮ ಜಿಲ್ಲೆಯಲ್ಲಿನ ರಾಜ್ಯದ ಮೀಸಲು ಕ್ಷೇತ್ರಗಳ ಪಟ್ಟಿ

2,52,05,820 ಪುರುಷ ಮತದಾರರು, 2,44,71,979 ಮಹಿಳಾ ಮತದಾರರು ಈ ಬಾರಿ ಮತದಾನ ಮಾಡಲು ಅರ್ಹರಾಗಿದ್ದಾರೆ, ಈ ಬಾರಿ ಮತಚಲಾಯಿಸಲಿರುವ ತೃತೀಯ ಲಿಂಗಿ ಮತದಾರರ ಸಂಖ್ಯೆ 4,552.

2013ಕ್ಕಿಂತ 9% ಏರಿಕೆ

2013ಕ್ಕಿಂತ 9% ಏರಿಕೆ

ಮತದಾರರಲ್ಲಿ ಆಗಿರುವ ಏರಿಕೆಯಿಂದಾಗಿ ಈ ಬಾರಿ ಮತಗಟ್ಟೆಗಳ ಸಂಖ್ಯೆ ಸಹ ಏರಿಕೆ ಆಗಿವೆ. ಈ ಬಾರಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನ ಮಾಡಿದ್ದು, ಈ ಬಾರಿ ರಾಜ್ಯದಲ್ಲಿ ಒಟ್ಟು 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 2013 ರಲ್ಲಿ ಇದ್ದ ಮತಗಟ್ಟೆಗಳ ಸಂಖ್ಯೆ 52,034.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳು

ಚುನಾವಣಾ ಸಿಬ್ಬಂದಿ ಎಷ್ಟು?

ಚುನಾವಣಾ ಸಿಬ್ಬಂದಿ ಎಷ್ಟು?

56,696 ಮತಗಟ್ಟೆಗಳಿಗೆ ಅಷ್ಟೆ ಸಂಖ್ಯೆಯ ಮತಗಟ್ಟೆ ಅಧಿಕಾರಿ (ಬಿಎಲ್‌ಓ-ಬೂತ್ ಲೆವೆಲ್ ಆಫೀಸರ್‌) ನೇಮಿಸಲಾಗುತ್ತದೆ. ಹಾಗೂ ಒಟ್ಟ 224 ಕ್ಷೇತ್ರದ ಮತಗಟ್ಟೆಗಳ ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 3,56,552 ಚುನಾವಣಾ ಸಿಬ್ಬಂದಿಯ ಅವಶ್ಯಕತೆ ಇದೆ.

ಚುನಾವಣೆ ಮೇಲೆ ಕಣ್ಗಾವಲಿಗೆ ತಂಡ

ಚುನಾವಣೆ ಮೇಲೆ ಕಣ್ಗಾವಲಿಗೆ ತಂಡ

ಚುನಾವಣಾ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿತರಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಹಾಗಾಗಿ 1361 ಮಾಡೆಲ್ ಕೋಡ್ ಆಫ್ ಕಂಡಕ್ಟ್‌ ತಂಡ. 1503 ಸ್ಥಿರ ಕಣ್ಗಾವಲು ತಂಡ, 1542 ಸಂಚಾರಿ ಸ್ಕ್ವಾಡ್ ಮತ್ತು 1097 ಚೆಕ್ ಪೋಸ್ಟ್‌ಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿದೆ.

ಚುನಾವಣಾ ಸಂಬಂಧಿ ಕೇಸುಗಳು

ಚುನಾವಣಾ ಸಂಬಂಧಿ ಕೇಸುಗಳು

ಕಾನೂನು ಸುವ್ಯವಸ್ಥೆ ಬಗ್ಗೆಯೂ ಪರಿಪೂರ್ಣ ನಿಗಾ ವಹಿಸಲು ಚಿಂತಿಸಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 7010 ಕೇಸುಗಳಲ್ಲಿ 6825 ಕೇಸುಗಳನ್ನು ಪೂರ್ಣಗೊಳಿಸಲಾಗಿದೆ. ಇವುಗಳಲ್ಲಿ 136 ಕೇಸುಗಳಷ್ಟೆ ನಿಜವಾದ ಕೇಸುಗಳಾಗಿದ್ದು, ಇನ್ನುಳಿದವು ಸುಳ್ಳು ದೂರುಗಳಾಗಿದ್ದವು.

ಆಯುಧಗಳ ವಶ

ಆಯುಧಗಳ ವಶ

ರಾಜ್ಯದಲ್ಲಿ 92,867 ಪರವಾನಗಿ ಹೊಂದಿದ ಆಯುಧಗಳಿದ್ದು, ಈಗಾಗಲೇ 31,227 ಆಯುಧಗಳನ್ನು ವಶಪಡಿಕೊಳ್ಳಲಾಗಿದೆ, 15 ಅಕ್ರಮ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಪರವಾನಗಿ ಹೊಂದಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗುವುದು.

ಮದ್ಯದ ಮೇಲೆ ಹದ್ದಿನ ಕಣ್ಣು

ಮದ್ಯದ ಮೇಲೆ ಹದ್ದಿನ ಕಣ್ಣು

ಚುನಾವಣೆಯಲ್ಲಿ ಹೆಂಡದ ಹರಿವು ಹೆಚ್ಚಾಗುವ ಗುಮಾನಿ ಇರುವುದರಿಂದ ಮದ್ಯದದಾಸ್ತಾನಿನ ಮೇಲೆ ನಿಗಾ ಇರಿಸಲಾಗಿದೆ. ಎಲ್ಲ ಬಾರುಗಳಿಂದ ದಾಸ್ತಾನು ಪಟ್ಟಿ ನಿಗದಿತವಾಗಿ ಸಂಗ್ರಹಿಸಲಾಗುತ್ತದೆ. ಈಗಾಗಲೇ ಅಬಕಾರಿ ಇಲಾಖೆ 1,292 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.

English summary
Election commission announce date of Karnataka Assembly elections 2018. Total 4,96,82,351 voters can vote in this election. Election commission setting 56,696 voting booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X