Karnataka Rain: ಮಳೆ ಅಬ್ಬರಕ್ಕೆ ತಂಪಾದ ಕರ್ನಾಟಕ & ಕನ್ನಡಿಗರು!
ಅಬ್ಬಾ, ಮತ್ತೆ ಕರ್ನಾಟಕದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇನ್ನೇನು ಈ ವರ್ಷದಲ್ಲಿ ಮಳೆ ಕಥೆ ಮುಗಿದೇ ಹೋಯಿತು. ರಾಜ್ಯಕ್ಕೆ ಬರದ ಬಿಸಿ ಪಕ್ಕಾ ಅಂತಾ ಚಿಂತೆ ಶುರುವಾಗಿ ರೈತರು ಕಣ್ಣೀರು ಹಾಕುವ ಸ್ಥಿತಿ ಇತ್ತು. ಆದರೆ ದೇವರು ಕರುಣೆ ತೋರಿ, ವರಣ ದೇವನ ಮನಸ್ಸು ಕರಗಿ ಕರ್ನಾಟಕದ ವಿವಿಧೆಡೆ ಮಳೆ ಜೋರಾಗಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆ ಮಳೆಯ ಅಬ್ಬರಕ್ಕೆ ತತ್ತರಿಸಿದೆ? ಬನ್ನಿ ತಿಳಿಯೋಣ.
ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಬೀಳದೆ ಬರ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಭಾರಿ ಆತಂಕ ಶುರುವಾಗಿತ್ತು. ಹೀಗಾಗಿ ತಕ್ಷಣ ಬರ ಪರಿಸ್ಥಿತಿ ಘೋಷಣೆ ಮಾಡುವಂತೆ ಸರ್ಕಾರಕ್ಕೂ ಒತ್ತಾಯ ಮಾಡಲಾಗುತ್ತಿತ್ತು. ಇನ್ನೇನು ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಗಿದೆ ಹೋಯಿತು ಅಂತ ಚಿಂತೆ ಶುರು ಆಗಿದ್ದಾಗಲೇ, ಕಳೆದ ಕೆಲವು ದಿನದಿಂದ ನಿರಂತರವಾಗಿ ಮಳೆ ಬೀದ್ದಿದೆ. ಹಾಗೇ ಮುಂದಿನ ಹಲವು ದಿನ ಕಾಲ ಹೀಗೆ ಭಾರಿ ಮಳೆ ಬೀಳಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ? ಹೀಗೆ ಎಷ್ಟು ದಿನ ಮಳೆ ಸುರಿಯುತ್ತೆ? ಮುಂದೆ ಓದಿ.

ಕರ್ನಾಟಕದ ಮೂಲೆ ಮೂಲೆಯಲ್ಲಿ ಮಳೆ
ಹೌದು ಈ ಬಾರಿ ಮಳೆರಾಯ ರೊಚ್ಚಿಗೆದ್ದು ಮಳೆ ಸುರಿಸುವಂತೆ ಕಾಣುತ್ತಿದೆ. ಹೀಗಾಗಿಯೇ ದಕ್ಷಿಣ ಕರ್ನಾಟಕ ಅಥವಾ ಉತ್ತರ ಕರ್ನಾಟಕ ಎಂಬ ಬೇಧ-ಭಾವ ಇಲ್ಲದೆ ಮಳೆ ರಾಜ್ಯದ ಮೂಲೆ ಮೂಲೆಯಲ್ಲೂ ಅಬ್ಬರಿಸಲು ಶುರುವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಈ ಬಾರಿ ಮಳೆಯ ಅಬ್ಬರವು ಬಲು ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿದು ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಹಾಗೇ ಮುಂದಿನ ಕೆಲವು ದಿನಗಳ ಕಾಲ ಹೀಗೆ ಮಳೆ ಸುರಿಯಲಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆಗೆ ಮಳೆ ಸುರಿಯುತ್ತೆ?
ಮಳೆ ಅಬ್ಬರಿಸುವ ಜಿಲ್ಲೆಗಳು ಇವು
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಕರಾವಳಿಯ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಮತ್ತು ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ. ಬಳ್ಳಾರಿ, ಬೆಂಗಳೂರು ನಗರದಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಾಮರಾಜನಗರ ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ಅದರಲ್ಲೂ ಕೊಡಗು ಸೇರಿ ಕಾವೇರಿ ಕೊಳ್ಳದ ಭಾಗದಲ್ಲಿ ಮುಂದಿನ ಕೆಲವು ದಿನ ಭರ್ಜರಿ ಮಳೆ ಗ್ಯಾರಂಟಿ.

ಉತ್ತರ ಕರ್ನಾಟಕದಲ್ಲೂ ಅಬ್ಬರ
ಇದೇ ರೀತಿ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಸುರಿಯುವ ಸೂಚನೆ ಇದೆ. ಇದರ ಜತೆ ಬೀದರ್, ವಿಜಯಪುರ ಜಿಲ್ಲೆಗಳಲ್ಲೂ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಮಳೆ ಇಲ್ಲವೆಂಬ ಕೊರಗಿನಲ್ಲಿ ಮುಳುಗಿದ್ದ ರೈತರಿಗೆ ನೆಮ್ಮದಿ ಸಿಕ್ಕಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಸುರಿದರೆ ಸಾಕು ರಾಜ್ಯದ ಡ್ಯಾಂಗಳು ಹಾಗೂ ಕೆರೆಗಳು ತುಂಬು ನಿರೀಕ್ಷೆ ಇದೆ.

ಒಟ್ನಲ್ಲಿ ಬರ ಆವರಿಸಿದೆ ಎಂಬ ಭಯದ ನಡುವೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ. ಹಾಗೇ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಕೇರಳದ ವಯನಾಡು ಭಾಗದಲ್ಲೂ ಮಳೆ ಪ್ರಭಾವ ಹೆಚ್ಚಿದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲ ಕಾವೇರಿ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದೆ. ಈ ಮೂಲಕ ತಮಿಳುನಾಡಿನ ನೀರಿನ ಕಿರಿಕ್‌ಗೂ ಒಂದು ಮುಕ್ತಿ ಸಿಗಬಹುದು ಎನ್ನಲಾಗುತ್ತಿದೆ. ಹಾಗೇ ಬಿತ್ತನೆ ಮಾಡಿ ಮುಗಿಲು ನೋಡುತ್ತಿದ್ದ ರೈತರಿಗೂ ಖುಷಿ ವಿಚಾರ ಸಿಕ್ಕಂತಾಗಿದೆ.












Click it and Unblock the Notifications