Karnataka Rain: ಕರಾವಳಿ-ಒಳನಾಡು ಜಿಲ್ಲೆಗಳಿಗೆ ಮತ್ತೆ ವರುಣಾರ್ಭಟ, ಭಾರೀ ಮಳೆ: ರೆಡ್ ಅಲರ್ಟ್

ಬೆಂಗಳೂರು, ಜುಲೈ 25: ಕರ್ನಾಟಕದ ಎರಡು ಭಾಗಗಳಿಗೆ ವರುಣಾಘಾತ ಎದುರಾಗಿದೆ. ಉತ್ತರ ಒಳನಾಡಿನಲ್ಲಿ ವಾರದಿಂದಲೂ ದಿನ 24 ಗಂಟೆಯೂ ಮಳೆ ಸುರಿಯುತ್ತಿದೆ. ಇನ್ನೇನು ಮಳೆ ಇಳಿಮುಖವಾಯಿತು ಎನ್ನಷ್ಟರದಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ವರುಣಾರ್ಭಟ ಹೆಚ್ಚಾಗಿದ್ದು, ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನ ವಿವಿಧ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಮುಂದವುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ಜುಲೈ 25 ರಂದು ಒಂದು ದಿನ ಭಾರೀ ಮಳೆ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ ಎರಡು ದಿನ ಆರೆಂಜ್ ಅಲರ್ಟ್ ಮತ್ತು ನಂತರದ ಒಂದು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

IMD Issued Heavy To Heavy Rain Forecast 4 Days For Coastal Karnataka, Red Alert Announced

ಈಗಾಗಲೇ ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಉಡುಪಿ ಜಿಲ್ಲೆ ವ್ಯಾಪ್ತಿಯ, ಉತ್ತರ ಕನ್ನಡದ ಅನೇಕ ಕಡೆಗಳಲ್ಲಿ ಬಿಟ್ಟು ಬಿಡದೇ ಮಳೆ ಆಗುತ್ತಿದೆ. ಇದು ಮಂಗಳವಾರ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಐಎಂಡಿ ಅಂದಾಜಿಸಿದೆ.

ದಿನವಿಡಿ ಮಳೆ: ಉತ್ತರ ಒಳನಾಡಿನ ರೈತ ಕಂಗಾಲು

ಮಳೆ ಬಾರದೇ ಕಂಗಾಲಾಗಿದ್ದ ಉತ್ತರ ಒಳನಾಡಿನ ರೈತರು ಇದೀಗ ದಿನವಿಡೀ ಸುರಿಯುತ್ತಿರುವ ಮಳೆ ನಲುಗಿದ್ದಾರೆ. ತಡವಾಗಿ ಬಂದ ಮಳೆಯಿಂದ ಬಿತ್ತನೆ ತಡವಾಗಿತ್ತು. ಬಿತ್ತನೆ ಮಾಡಿ 15-20 ದಿನವಾಗಿದ್ದು, ಪೈರು ಸಣ್ಣ ಪ್ರಮಾಣದಲ್ಲಿದ್ದು, ಕಡಿಮೆ ಅಗತ್ಯವಿತ್ತು. ಆದರೆ ಕಳೆದ ಎಂಟು ದಿನಗಳಿಂದ ದಿನದ 24ಗಂಟೆಯು ಸುರಿಯುತ್ತಿರುವ ಮಳೆಗೆ ರೈತ ಬೆಳೆ ಹಾಳಾಗುವ ಆತಂಕ ಎದುರಿಸುತ್ತಿದ್ದಾರೆ. ನದಿ ಪಾತ್ರದಲ್ಲಿರುವ ನಿವಾಸಿಗಳಲ್ಲಿ ಸಹ ಈ ಮಹಾ ಮಳೆ ಭೀತಿ ಸೃಷ್ಟಿಸಿದೆ.

IMD Issued Heavy To Heavy Rain Forecast 4 Days For Coastal Karnataka, Red Alert Announced

ಕರ್ನಾಟಕದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನ ಧಾರಾಕಾರ ಮಳೆ ಮುಂದುವರಿಯಲಿದೆ. ದಿನಪೂರ್ತಿ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಳೆ ಬೀಳಲಿದೆ. ವಾರದಿಂದಲೂ ಈ ಜಿಲ್ಲೆಗಳಲ್ಲಿ ಮಳೆ ಎದುರಿಸುತ್ತಿರುವ ಜನರು ಮನೆಯಿಂದ ಹೊರಗೇ ಬರುತ್ತಿಲ್ಲ. ಅಂತಹ ಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣದ ಜಿಲ್ಲೆಗಳಿಗೂ ಉತ್ತಮ ಮಳೆ

ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಈಗಿರುವಂತೆಯೇ ಉತ್ತಮ ಮಳೆ ಮುಂದುವರಿಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬರಲಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಕೆಲವೊಮ್ಮೆ ಜೋರು ಮಳೆ ಬರಲಿದೆ. ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಚುರುಕಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+