ಪೊಲೀಸರೇ ದೇಹದ ತೂಕ ಇಳಿಸಿಕೊಂಡರೆ ಮಾತ್ರ ವರ್ಗಾವಣೆ

Posted By:
Subscribe to Oneindia Kannada

ಚಿಕ್ಕಮಗಳೂರು, ಜನವರಿ 9: ದೇಹದ ತೂಕವನ್ನು 4-5 ಕೆಜಿ ಇಳಿಸಿಕೊಂಡರೆ ವರ್ಗಾವಣೆ ಸಾಧ್ಯ ಎಂದು ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ ಪೊಲೀಸರಿಗೆ ವಿಶೇಷ ಆಫರ್ ನೀಡಿದ್ದಾರೆ.

ಚಿಕ್ಕಮಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಅವಕಾಶವನ್ನು ನೀಡಿದರು.[ರಾಜ್ಯದ ಮೊದಲ ಪೊಲೀಸ್ ಜಾಗೃತಿ ವಾಹನ ಮಂಗಳೂರಲ್ಲಿ ಕೆಲಸ ಶುರು]

sp annamalai

ಪೊಲೀಸರು ದೈಹಿಕವಾಗಿ ಸಶಕ್ತರಾಗಿರಬೇಕು. ಬೇರೆಯವರಿಗೆ ಮಾದರಿಯಾಗಿರಬೇಕು. ದೇಹದಾರ್ಡ್ಯತೆ ನಿವೃತ್ತಿಯಾಗುವವರೆಗೂ ಒಂದೆ ರೀತಿಯಲ್ಲಿ ಕಾಪಾಡಿಕೊಂಡು ಲವಲವಿಕೆಯಿಂದ ಕೆಲಸಮಾಡಬೇಕು. ಎಷ್ಟು ಕಷ್ಟವಾದರೂ ಸಾಧ್ಯವಾದಷ್ಟು ಮಟ್ಟಿಗೆ ಇದನ್ನು ಪಾಲಿಸಬೇಕು ಎಂದು ಅಣ್ಣಾಮಲೈ ತಿಳಿಸಿದರು.

ಇನ್ನು ವರ್ಗಾವಣೆ ಬಯಸುವವರಿಗೆ ದೇಹದ ತೂಕವನ್ನು ನಾಲ್ಕರಿಂದ ಐದು ಕೇಜಿ ಇಳಿಸಿಕೊಳ್ಳಬೇಕು ಅಂತಹ ಆರಕ್ಷಕರಿಗೆ ಮುಂದಿನ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಮೂಹಿಕ ವರ್ಗಾವಣೆಯಲ್ಲಿ ಅವಕಾಶ, ಜೊತೆಗೆ ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುವುದು ಎಂದು ಘೋಷಿಸಿದರು.

ಕೇವಲ ಪೊಲೀಸ್ ಟ್ರೈನಿಂಗ್ ಮತ್ತು ಕೆಲಸವನ್ನು ಪಡೆಯುವ ವೇಳೆ ಮೈದಂಡಿಸಿ, ದೇಹವನ್ನು ದೃಢ ಮಾಡಿಕೊಂಡು, ಕೆಲಸ ಪಡೆದ ನಂತರ ಬಿಟ್ಟುಬಿಡುತ್ತಿದ್ದ ಪೊಲೀಸರಿಗೆ ಇದೊಂದು ಮಹತ್ವದ ಪಾಠ ಆಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you reduce weight , your transfer term - request shall be considered ! A unique offer by the Superintend of Police to the police personnel serving in chikkamagalur. Terms and conditions apply!
Please Wait while comments are loading...