ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಕೊಡುತ್ತೆ: ವಿನೋದ್ ಅಸೂಟಿ
ಹುಬ್ಬಳ್ಳಿ, ಏಪ್ರಿಲ್ 15: ದೇಶದ ಜನರಿಗೆ ಅಂಬೇಡ್ಕರ್ ರ ಸಂವಿಧಾನ ದಾರಿದೀಪ. ಕಾಂಗ್ರೆಸ್ ಬಸವಣ್ಣ ನವರ ಹಾದಿಯಲ್ಲಿ ನಡೆಯೋ ಪಕ್ಷ. ಸಂವಿಧಾನ ನಂಬಿ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ನನಗೊಂದು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಮನವಿ ಮಾಡಿದರು.
ಈ ಕುರಿತು ಚುನಾವಣಾ ಪ್ರಚಾರದ ವೇಳೆ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಜಾರಿಗೆ ತಂದಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಕೊಡುತ್ತೆ ಎಂದು ಹೇಳಿ, ವೇದಿಕೆಯಲ್ಲೇ ಮಂಡಿಯೂರಿ ವಿನೋದ್ ಅಸೂಟಿ ಮತಯಾಚನೆ ಮಾಡಿದ್ದಾರೆ.

ಮೋದಿ ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಸಂತೋಷ್ ಲಾಡ್
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಸುಳ್ಳುಗಳನ್ನು ಹೇಳುತ್ತಾ ಬಂದಿದ್ಧಾರೆ. ಅವರ ಸುಳ್ಳನ್ನು ಈಗ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇನ್ನಾದರೂ ಅವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಹೇಳಿದರು.
ಸ್ವೀಸ್ ಬಾಂಕಿನಿಂದ ಹಣ ತರುತ್ತೇವೆ ಅಂದರು. ಬಡವರ ಖಾತೆ ಗೆ 15 ಲಕ್ಷ ಹಣ ಹಾಕ್ತೇವೆ ಅಂದ್ರು. ಬಡತನ ಹಾಗೂ ನಿರುದ್ಯೋಗ ನಿವಾರಣೆ ಮಾಡ್ತೇವೆ ಅಂದರು. ಆದರೆ ಯಾವುದನ್ನೂ ಮಾಡಲಿಲ್ಲ. ಅವರು ಕೊಟ್ಟ ಆಶ್ವಾಸನೆಗಳು ಏನಾದವು ಎಂದು ಪ್ರಶ್ನಿಸಿದರು.
ಮಹಾದಾಯಿ ಬಗ್ಗೆ ಏಕಿಷ್ಟು ನಿರಾಸಕ್ತಿ
ಉಕ್ರೇನ್ ಯುದ್ಧ ನಿಲ್ಲಿಸುವ ಆಸಕ್ತಿ ಇರುವಷ್ಟು ನಮ್ಮ ದೇಶದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಧಾನಿ ಮೋದಿ ಅವರಿಗೆ ಏಕೆ ಇಲ್ಲ ಎಂದು ಲಾಡ್ ಪ್ರಶ್ನಿಸಿದರು. ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿ ಅವರು, ನಮ್ಮ ಭಾಗದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಡಿಸಲಿಲ್ಲ ಎಂದರು.
ಮಹಾದಾಯಿಗಾಗಿ ನಾವು ಹೋರಾಟ ಮಾಡಿದ್ದೇವೆ. ಈಗಾಗಲೇ ಟೆಂಡರ್ ಕರೆದಿದ್ದೇವೆ. ನೀವು ಅನುಮತಿ ನೀಡಿದರೆ ಎಷ್ಟು ವೆಚ್ಚವಾದರೂ ಮಾಡಿಯೇ ತೀರುತ್ತೇವೆ. ಮಹಾದಾಯಿ ಬಗ್ಗೆ ಕೇಂದ್ರದ ಸಚಿವ ಹಾಗೂ ಧಾರವಾಡದ ಸಂಸದರಾದ ಪ್ರಹ್ಲಾದ ಜೋಷಿ ಅವರು ಏಕೆ ಧ್ವನಿ ಎತ್ತಿಲ್ಲ. ಅವರಿಗೆ ಈ ಭಾಗದ ಜನರ ಸಮಸ್ಯೆ ತಿಳಿದಿಲ್ಲವೇ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಅವರದೇ ಸರ್ಕಾರ ಇದ್ದರೂ ಮಹಾದಾಯಿಗೆ ಏಕೆ ಅನುಮತಿ ಕೊಡಿಸಲಿಲ್ಲ ಎಂದರು.
ಮಹಾದಾಯಿ ಬಗ್ಗೆ ಯಾವೊಬ್ಬ ಸಂಸದರೂ ಸಂಸತ್ತಿನಲ್ಲಿ ಚಕಾರ ಎತ್ತಲಿಲ್ಲ. ಈ ಯೋಜನೆ ಜಾರಿಗೆ ನಮ್ಮ ರಾಜ್ಯ ಸರ್ಕಾರ ಸಿದ್ಧವಿದೆ. ಈ ಹಿಂದೆ ಯಡಿಯೂರಪ್ಪ ಅವರು ಸುಳ್ಳು ಹೇಳಿ ಓಟ್ ಪಡೆದರು. ನಮ್ಮ ಅಭ್ಯರ್ಥಿ ವಿನೋದ್ ಅಸೂಟಿ ಅವರನ್ನು ಗೆಲ್ಲಿಸಿದರೆ ಈ ಭಾಗದ ಎಲ್ಲಾ ಸಮಸ್ಯೆ ಪರಿಹಾರ ಮಾಡ್ತೇವೆ ಎಂದರು.
ಚುನಾವಣೆ ಬಂದಾಗ ಮುಸ್ಲಿಮರ ಬಗ್ಗೆ, ರಾಮನ ಬಗ್ಗೆ ಮಾತನಾಡಿ ಮತಯಾಚಿಸುತ್ತಾರೆ. ಮಾಡಿರುವ ಅಭಿವೃದ್ಧೀ ಕಾರ್ಯವನ್ನು ಜನರ ಮುಂದಿಡಿ. ಮುಸ್ಲಿಮರಿಗೆ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳಬೇಡಿ ಚುನಾವಣೆ ಬಂದಿದೆ ಅಂತ ಮುಸ್ಲಿಮರನ್ನು ಗುರಿ ಮಾಡಿ ಮತವನ್ನೂ ಕೇಳಬೇಡಿ. ದೇಶ ವಿಭಜನೆ ವೇಳೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗದೆ ಇದ್ದಿದ್ದರೆ ನಮ್ಮ ಭಾರತದಲ್ಲಿ ಹಿಂದೂ ಭಾವುಟ ಹಾರಾಡುತ್ತಿರಲಿಲ್ಲ ಎಂದು ವಿವರಿಸಿದರು.
70 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಅವರು ಕೇಳುತ್ತಾರೆ. ದೇಶದಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದು, ಉಳುವವನೇ ಭೂಮಿ ಒಡೆಯ ಕಾನೂನು ತಂದಿದ್ದು, ಬ್ಯಾಂಕ್‌ಗಳ ರಾಷ್ಟ್ರೀಕರಣ, ಮೀಸಲಾತಿ, ಗರೀಭಿ ಹಟಾವೊ, ಬಡವರಿಗೆ ಸಾಮಾಜಿಕ ಭದ್ರತೆ ನೀಡಿದ್ದು ಕಾಂಗ್ರೆಸ್ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಜನರ ಆರ್ಥಿಕ ಸುಧಾರಣೆ ಆಗಿದೆ. ಪಂಚ ಗ್ಯಾರಂಟಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಮೋದಿಯವರು ಒಂದೇ ಒಂದು ರೂಪಾಯಿ ನೀಡದೆ ಬರೇ ಸುಳ್ಳು ಹೇಳುತ್ತಿದ್ದಾರೆ ಎಂದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications