ಕ್ರಾಂತಿ.. ಕ್ರಾಂತಿ..ಕ್ರಾಂತಿ, ಸಿದ್ದರಾಮಯ್ಯರನ್ನು ಇಳಿಸಿದ್ರೆ ಕ್ರಾಂತಿಯಾಗುತ್ತೆ: ವಾಟಾಳ್ ನಾಗರಾಜ್
ಬೆಂಗಳೂರು, ನವೆಂಬರ್ 02: ಕ್ರಾಂತಿ.. ಕ್ರಾಂತಿ..ಕ್ರಾಂತಿ.. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಿದ್ರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವಾಟಾಳ್ ನಾಗರಾಜ್, ಧರಂಸಿಂಗ್, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್‌ರಂತೆ ನಿಮ್ಮನ್ನೂ ಇಳಿಸುವ ಛಾಯೆ ಮೂಡಿದೆ. ಆದರೆ ಎಂತಹ ಸಂದರ್ಭ ಬಂದರೂ ಸರೀ, ನೀವು ರಾಜೀನಾಮೆ ಕೊಡಬೇಡಿ ಅಂತ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಯಾರೂ ಇಲ್ಲ, ಬಿಜೆಪಿಯಲ್ಲೂ ಇಲ್ಲ, ಜೆಡಿಎಸ್‌ನಲ್ಲೂ ಇಲ್ಲ, ಕಾಂಗ್ರೆಸ್‌ನಲ್ಲೂ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಅಲ್ಲದೇ ಜೆಡಿಎಸ್‌ನಲ್ಲಿ ಸಿದ್ದರಾಮಯ್ಯರನ್ನು ತೆಗೆದಾಗ ಹೋರಾಟ ಮಾಡಿದ್ದು ನಾನು ಅಂತ ನೆನಪಿಸಿಕೊಂಡಿದ್ದಾರೆ. ಇದು ಮೋಸದ ವ್ಯವಸ್ಥೆ, ರಾಜ್ಯಪಾಲರಿಗೆ ಈ ಅಧಿಕಾರ ಇರಬಾರದು. ಲೋಕಸಭೆಯಲ್ಲಿ ಇದರ ಬಗ್ಗೆ ಸಮಗ್ರ ವಾಗಿ ಚರ್ಚೆ ಆಗಬೇಕು. ಯಾವುದೇ ಶಕ್ತಿ ನಿಮ್ಮನ್ನು ಇಳಿಸೋಕೆ ಹೋದ್ರೆ ದೊಡ್ಡ ಕ್ರಾಂತಿ ಆಗುತ್ತದೆ. ಒಂದು ಕೋಟಿ ಜನರನ್ನು ನಾನೇ ಜೈಲಿಗೆ ಕಳುಹಿಸಬೇಕಾಗುತ್ತದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಪ್ರಶ್ನೆ ಸಿದ್ದರಾಮಯ್ಯ ಪರ ಭರ್ಜರಿಯಾಗಿ ವಾಟಾಳ್ ಬ್ಯಾಟಿಂಗ್ ಬೀಡಿದ್ದಾರೆ. .
ಸಿದ್ದರಾಮಯ್ಯ ಅವರು ನಮ್ಮ ಕಾರ್ಯಕ್ರಮಕ್ಕೆ ಆರು ಬಾರಿ ಬಂದಿದ್ದಾರೆ. ಇನ್ನೂ ನಾಲ್ಕು ಬಾರಿ ಬರಲಿದ್ದಾರೆ. ನನಗೂ ಸಿದ್ದರಾಮಯ್ಯ ಅವರಿಗೂ ಅನೇಕ ವರ್ಷಗಳ ಬಾಂಧವ್ಯ. ನನಗೆ ಅವರ ಮೇಲೆ ಅಪಾರ ಗೌರವ. ಮೈಸೂರಲ್ಲಿ ನನ್ನ ಭಾಷಣ ಕೇಳಿದ್ದಾರೆ. ನನ್ನ ಭಾಷಣದ ಕುರಿತು ಅನೇಕ ಕಡೆ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದಾರೆ. ಲೋಕಸಭೆಯಲ್ಲಿ ನೆಹರೂ ಅವರು ಗೈರು ಹಾಜರಾಗಿಲ್ಲ, ಅದ್ರಂತೆ ವಾಟಳ್ ಅವರು ಕೂಡ ಒಂದು ದಿನವೂ ಗೈರಾಗಿಲ್ಲ. ಸಿದ್ದರಾಮಯ್ಯ ಅವರು ಆದರ್ಶ. ಒಂದು ಬಂದ್ ಕೂಡ ಮಾಡಬೇಡಿ ಎಂದು ಹೇಳಲಿಲ್ಲ. ಬಂದ್ ಮಾಡಲಿ ಎಂದು ಪೊಲೀಸರಿಗೆ ಸಿದ್ದರಾಮಯ್ಯ ಹೇಳಿದ್ರು. ಕನ್ನಡದ ಮೇಲೆ ಅವರಿಗೆ ಗೌರವ ಇದೆ ಎಂದರು.
ಪರ ಭಾಷೆ ಸಿನಿಮಾ ಬೇಡ, ಪರಭಾಷಿಕರು ಬೇಡ, ನೀವು ಕನ್ನಡಿಗರ ಪರ ಬಿಲ್ ತಂದು ವಾಪಸ್ ಮಾಡಿದ್ರಿ. ನಿಮಗೆ ಇರುವ ಶಕ್ತಿಗೆ ಸಿದ್ದರಾಮಯ್ಯ ಅವರೇ ನೀವು ಬಿಲ್ ವಾಪಸ್ ಕಳಿಸಬಾರದಿತ್ತು ಅಂತ ವಾಟಾಳ್ ನಾಗರಾಜ್ ಸಿಎಂಗೆ ಹೇಳಿದ್ರು. ಮೋಹನ್ ದಾಸ್ ಪೈ ಇದ್ರೆ ಕರ್ನಾಟಕದಲ್ಲಿ ಇರಲಿ. ಅವರು ಯಾರು ಎಂದು ನನಗೆ ಗೊತ್ತು ಅಂತ ಮೋಹನ್ ದಾಸ್ ಪೈ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕಿಡಿಕಾರಿದ್ದಾರೆ.
ಬೆಂಗಳೂರು ಕನ್ನಡಿಗರ ಕೈಲಿ ಉಳಿದಿಲ್ಲ. ಬೆಂಗಳೂರು ಬೇರೆಯವರ ಕೈಗೆ ಹೋಗಿದೆ. ಏನೇ ಭಾಷಣ ಮಾಡಿದ್ರೂ ನಿಮಗೆ ತಡೆಯೋಕೆ ಆಗ್ಲಿಲ್ಲ. ಕನ್ನಡಿಗರ ನೋವು ಅಪಮಾನ ತಡೆಯಲು ಆಗ್ಲಿಲ್ಲ. ಅಂದು ತಮಿಳರು, ಕೇರಳಿಗರು, ತೆಲುಗರು ನಡುಗುತ್ತಾ ಇದ್ರು. ಈಗ ಅವರ ಸಂಖ್ಯೆ ಜಾಸ್ತಿ ಆಗಿದೆ. ಮುಂದಿನ ದಿನ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇನ್ನೂ ಮುಡಾ ವಿಚಾರವಾಗಿ ಮಾತನಾಡಿ, 40 ವರ್ಷದ ರಾಜಕಾರಣದಲ್ಲಿ ಏನೂ ಸಿಕ್ಕಿಲ್ಲ. ಆದರೆ ಯಾರೋ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ವಿರೋಧ ಪಕ್ಷದವರು ಎತ್ತಿಕಟ್ಟಿ ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟಿಸ್ ಕೊಟ್ಟ ದಿನವೇ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ್ದು ನಾನು, ಕಾಂಗ್ರೆಸ್ ನವರು ಮಾಡಿಲ್ಲ. ಮೊಟ್ಟಮೊದಲ ಪ್ರತಿಭಟನೆ ಮಾಡಿದ್ದು ವಾಟಳ್ ನಾಗರಾಜ್ ಅಂತ ಹೇಳಿದರು.












Click it and Unblock the Notifications