• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಇಷ್ಟೆಲ್ಲಾ ಲಾಭಗಳು ಆಗುತ್ತವಂತೆ

By Manjunatha
|

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಒತ್ತಾಯಿಸಿ ಆಗಸ್ಟ್ 2ರಂದು ಉತ್ತರ ಕರ್ನಾಟಕ ಜಿಲ್ಲೆಗಳ ಬಂದ್‌ಗೆ ಕರೆ ನೀಡಲಾಗಿದೆ.

ಕೆಲವು ವರ್ಷಗಳಿಂದ ಗುಪ್ತಗಾಮಿನಿಯಂತಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹೊರ ಬಂದಿದ್ದು. ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಬೆಂಬಲವೂ ದೊರೆತಿರುವುದು ಹೋರಾಟಕ್ಕೆ ಬಲ ಹೆಚ್ಚಿಸಿದೆ.

ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಏನೇನು ಲಾಭಗಳಾಗುತ್ತವೆ ಎಂದು ಪತ್ಯೇಕ ರಾಜ್ಯ ಹೋರಾಟಗಾರರು ಕರಪತ್ರ ಹೊರ ತಂದಿದ್ದು, ಅವರು ನೀಡಿರುವ ಲಾಭಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ, ವಿಮರ್ಶಿಸಿ.

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್

ಈ ಬಾರಿ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಧ್ವನಿ ಕೇಳಿಬಂದಿದೆ. ಬಜೆಟ್ ನಂತರವೇ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕೆಂಬ ಹೊರಾಟ ತೀವ್ರವಾಗಿದೆ. ಒಂದು ವೇಳೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅದಕ್ಕೆ ಪ್ರತ್ಯೇಕ ಬಜೆಟ್ ದೊರಕಲಿದೆ. ಕೇಂದ್ರವು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಿದೆ.

ಪ್ರತ್ಯೇಕ ರಾಜ್ಯ: ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಬಂದ್‌

ರಾಜಧಾನಿ ಸಮೀಪ

ರಾಜಧಾನಿ ಸಮೀಪ

ಉತ್ತರ ಕರ್ನಾಟಕದ ಜನರ ಪ್ರಮುಖ ದೂರೆಂದರೆ ರಾಜ್ಯ ರಾಜಧಾನಿಯಿಂದ ಬಹಳ ದೂರ ಉಳಿದಿರುವುದು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ವರ್ಷಕ್ಕೊಮ್ಮೆ ಆಡಳಿತವನ್ನು ಬೆಳಗಾವಿಗೆ ವರ್ಗಾಯಿಸಿದರೂ ಕೂಡ ಅದು ತಾತ್ಕಾಲಿಕವಷ್ಟೆ. ರಾಜಧಾನಿಗೆ ಹತ್ತಿರವಿರುವ ಜಿಲ್ಲೆಗಳು ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತವೆ ಆದರೆ ದೂರ ಇರುವವ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತವೆ. ಉ.ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ರಾಜಧಾನಿ ಹತ್ತಿರದಲ್ಲೇ ದೊರಕುತ್ತದೆ ಎಂಬುದು ಪ್ರತ್ಯೇಕತಾವಾದಿಗಳ ಕೂಗು.

ಪ್ರತ್ಯೇಕ ರಾಜ್ಯ ಬಂದ್‌ಗೆ ಕರೆ ನೀಡಿದವರು ಚರ್ಚೆಗೆ ಬರಲಿ: ಸಿಎಂ

ಚಿಕ್ಕ ರಾಜ್ಯ-ಚೊಕ್ಕ ಆಡಳಿತ

ಚಿಕ್ಕ ರಾಜ್ಯ-ಚೊಕ್ಕ ಆಡಳಿತ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಚಿಕ್ಕದಾದ ರಾಜ್ಯ ನಿರ್ಮಾಣವಾಗುತ್ತದೆ. ಆಗ ಆಡಳಿತ ಸುಲಭವಾಗುತ್ತದೆ ಹಾಗೂ ಸುಗಮವಾಗುತ್ತದೆ. ಚಿಕ್ಕ ರಾಜ್ಯದ ಆಡಳಿತವನ್ನು ಚೊಕ್ಕವಾಗಿ ಮಾಡಬಹುದು ಎಂಬುದು ಅವರ ವಾದ. ಇದಕ್ಕೆ ಅಂಬೇಡ್ಕರ್ ಅವರು ಹೇಳಿದ್ದ ಚಿಕ್ಕ-ಚಿಕ್ಕ ರಾಜ್ಯಗಳ ನಿರ್ಮಾಣದ ಅವಶ್ಯಕತೆಯನ್ನು ಉದಾಹರಣೆಯಾಗಿ ನೀಡುತ್ತಾರೆ.

ನಮ್ಮ ತೆರಿಗೆ-ನಮ್ಮ ಅಭಿವೃದ್ಧಿ

ನಮ್ಮ ತೆರಿಗೆ-ನಮ್ಮ ಅಭಿವೃದ್ಧಿ

ಉ.ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಆ ರಾಜ್ಯಕ್ಕೆ ಒಳಪಡುವ 13 ಜಿಲ್ಲೆಗಳಲ್ಲಿ ಕ್ರೂಡೀಕೃತವಾಗುವ ತೆರಿಗೆ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬಹುದು ಎಂಬ ವಾದವನ್ನು ಪ್ರತ್ಯೇಕ ರಾಜ್ಯ ಕೂಗಿನ ನಾಯಕರು ಮುಂದಿಟ್ಟಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಬೆಂಗಳೂರು, ಮೈಸೂರು ಅಭಿವೃದ್ಧಿ ಆಗುವುದು ಬೇಡ ಎಂಬುದು ಅವರ ವಾದ.

ಪ್ರಾದೇಶಿಕ ಸ್ವಾತಂತ್ರ್ಯತೆ

ಪ್ರಾದೇಶಿಕ ಸ್ವಾತಂತ್ರ್ಯತೆ

ಪ್ರತ್ಯೇಕ ರಾಜ್ಯವಾದರೆ ಪ್ರಾದೇಶಿಕ ಸ್ವಾತಂತ್ರ್ಯತೆ ದೊರಕುತ್ತದೆ. ಅಭಿವೃದ್ಧಿ ಬಗ್ಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ದಕ್ಷಿಣದಿಂದ ಉತ್ತರಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬಹುದು. ಅಲ್ಲದೆ ಒಂದೇ ಭಾಷೆಯ ಎರಡು ರಾಜ್ಯಗಳ ಉಗಮ ಸಹ ಆಗುತ್ತದೆ ಎನ್ನುತ್ತಾರೆ ಹೊರಾಟಗಾರರು.

ರಾಜಕೀಯ ಬಲವರ್ಧನೆ

ರಾಜಕೀಯ ಬಲವರ್ಧನೆ

ಉತ್ತರ ಕರ್ನಾಟಕದ ರಾಜಕಾರಣಿಗಳು ದಕ್ಷಿಣ ಕರ್ನಾಟಕ ಪ್ರಬಲ ರಾಜಕಾರಣಿಗಳ ಪ್ರಭಾವದಿಂದ ಹೊರಬಂದು ತಮ್ಮದೇ ಅಸ್ಥಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಭಾಗದ ಬೇಕು ಬೇಡಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಮತ್ತೊಬ್ಬರ ಮರ್ಜಿ ಕೇಳುವ ಅವಶ್ಯಕತೆ ಇರುವುದಿಲ್ಲ.

ಉದ್ಯೋಗ ಸೃಷ್ಠಿ

ಉದ್ಯೋಗ ಸೃಷ್ಠಿ

ಉತ್ತರ ಕರ್ನಾಟಕ ಭಾಗದಲ್ಲಿಯೂ ಸಹ ಐಐಟಿಗಳ ಸ್ಥಾಪನೆ ಮಾಡಬಹುದು, ಐಟಿ, ಬಿಟಿ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಮ್ಮ ಯುವಕರು ದಕ್ಷಿಣಕ್ಕೆ ವಲಸೆ ಹೋಗುವುದನ್ನು ತಡೆಯಬಹುದು. ನಮ್ಮ ಯುವಕರಿಗೆ ಇಲ್ಲಿಯೇ ಉದ್ಯೋಗ ಒದಗಿಸಬಹುದು ಎಂದು ಹೇಳುತ್ತಾರೆ ಪ್ರತ್ಯೇಕ ರಾಜ್ಯ ಹೋರಾಟಗಾರರು.

English summary
Activists who demanding for North Karnataka to be declared as sepprate state released a list of what will be the benifits if North Karnataka will become seprate state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more