ನಿಮ್ಮ ಇತಿಹಾಸ ನಾ ಕೆದಕಿದರೆ ಮರ್ಯಾದೆ ಏನಾಗುತ್ತೆ ಕುಮಾರಣ್ಣ? ಸೋಮಣ್ಣ ತಿರುಗೇಟು
Recommended Video
ಚಿಕ್ಕಬಳ್ಳಾಪುರ, ನ 29: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ಗುರುತರ ಆರೋಪಕ್ಕೆ, ವಸತಿ ಸಚಿವ ವಿ.ಸೋಮಣ್ಣ ಭರ್ಜರಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಸೋಮಣ್ಣ, "ನಾನು ಜನತಾ ಬಜಾರಿನಲ್ಲಿ ಬಟ್ಟೆ ಕದ್ದಿದ್ದನ್ನು ಕುಮಾರಸ್ವಾಮಿ ರುಜುವಾತು ಪಡಿಸಿದರೆ, ನೇಣು ಹಾಕಿಕೊಳ್ಳುತ್ತೇನೆ" ಎಂದು ಸವಾಲು ಎಸೆದಿದ್ದಾರೆ.
"ನಾನು ದೇವೇಗೌಡರ ಪಾದಮುಟ್ಟಿ ನಮಸ್ಕರಿಸಿದ್ದು ನಿಜ. ಅವರು ರಾಷ್ಟ್ರಮಟ್ಟದ ನಾಯಕರು, ಅವರ ಮಾರ್ಗದರ್ಶನ ಎಲ್ಲರಿಗೂ ಬೇಕು. ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವುದಿದ್ದರೆ ನೂರು ಇದೆ" ಎಂದು ವಿ.ಸೋಮಣ್ಣ, ಗೌಡ್ರನ್ನು ಹೊಗಳುತ್ತಾ, ಎಚ್ಡಿಕೆಯನ್ನು ಟೀಕಿಸಿದ್ದಾರೆ.

"ಕುಮಾರಸ್ವಾಮಿಯವರೇ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಿ. ನಾನೇನಾದರೂ ನಿಮ್ಮ ಬಗ್ಗೆ ಹೇಳಿದರೆ ನಿಮ್ಮ ಗೌರವ ಏನಾಗುತ್ತೆ ಎಂದು ಮೊದಲು ತಿಳಿದುಕೊಳ್ಳಿ" ಎಂದು ಕುಮಾರಸ್ವಾಮಿಗೆ, ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.
"ಕುಮಾರಸ್ವಾಮಿಯವರದ್ದು ಸಂಸ್ಕಾರ ಇಲ್ಲದ ನಾಲಿಗೆ. ಅವರ ನಾಲಿಗೆಗೆ ಹಿಡಿತವಿಲ್ಲ, ನನ್ನ ಜೀವನದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಏನೋ ಹೇಳಿಕೆ ನೀಡಿ, ಪಲಾಯನವಾದ ಮಾಡುವುದಲ್ಲ. ಹೇಳಿದ್ದನ್ನು ರುಜುವಾತು ಪಡಿಸಲಿ" ಎಂದು ಸೋಮಣ್ಣ, ಕುಮಾರಸ್ವಾಮಿಗೆ ಚಾಲೆಂಜ್ ಮಾಡಿದ್ದಾರೆ.
"ನಿಮ್ಮ ದಿಕ್ಕುದೆಸೆಯಿಲ್ಲದ ಈ ಕೀಳು ಹೇಳಿಕೆಯನ್ನು ಧೃಡಪಡಿಸಲು ನಿಮ್ಮಿಂದ ಸಾಧ್ಯವಾಗದೇ ಇದ್ದಲ್ಲಿ, ನಿಮ್ಮನ್ನು ಏನು ಮಾಡಬೇಕೆಂದು ನೀವೇ ನಿರ್ಧರಿಸಿ" ಎಂದು ವಿ.ಸೋಮಣ್ಣ ಹೇಳಿದ್ದಾರೆ.
"ವಿ.ಸೋಮಣ್ಣ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಯಾರ್ಯಾರಿಗೆ, ಯಾವಾಗೆಲ್ಲಾ ಕಾಲಿಗೆ ಬಿದ್ದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ' ಎಂದು ಕುಮಾರಸ್ವಾಮಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು.












Click it and Unblock the Notifications