ಸಿದ್ದರಾಮಯ್ಯ, ಮಹದೇವಪ್ಪ ಪುತ್ರರು ಕಾಶ್ಮೀರಕ್ಕೆ ಹೋದ್ರೆ ಗುಂಡು ಹೊಡಿತಿದ್ರು, ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ : ಯತ್ನಾಳ್
ಬೀದರ್ , ಏಪ್ರಿಲ್ 28: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಜನ ಬಲಿಯಾಗಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಅನಿವಾರ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಶ್ಮೀರಕ್ಕೆ ಸಿದ್ದರಾಮಯ್ಯ ಮಗ, ಎಚ್ ಸಿ ಮಹಾದೇವಪ್ಪ ಮಗ, ಜಮೀರ ಅಹಮ್ಮದ್ ಮಗ ಏನಾದ್ರೂ ಕಾಶ್ಮೀರ್ ಹೋಗಿದ್ರೆ, ಜಮೀರ್ ಮಗ ಮಾತ್ರ ವಾಪಸ್ ಬರ್ತಿದ್ದ ಎಂದು ಹೇಳಿದ್ದಾರೆ.
ಈ ಕುರಿತು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಶ್ಮೀರದಲ್ಲಿ ಯಾವ ಧರ್ಮದವರು ಎಂದು ಹೇಳಿ ಗುಂಡು ಹಾರಿಸಿದ್ದಾರೆ. ಹಾಗಾಗಿ ಇದೀಗ ಎಲ್ಲ ಹಿಂದೂಗಳು ಒಂದಾಗುವ ಸಮಯ ಬಂದಿದೆ. ಕಾಶ್ಮೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಸಚಿವರಾದ ಮಹದೇವಪ್ಪ ಪುತ್ರ, ಜಮೀರ್ ಪುತ್ರ ಹೋಗಿದ್ರೆ ಜಮೀರ್ ಪುತ್ರ ಮಾತ್ರ ವಾಪಸ್ ಬರ್ತಿದ್ದ. ಸಿಎಂ ಸಿದ್ದರಾಮಯ್ಯ ಮಾದೇವಪ್ಪ ಪುತ್ರರಿಗೆ ಗುಂಡು ಹೊಡೆಯುತ್ತಿದ್ದರು.

ಯಾಕಂದ್ರೆ ಸಿದ್ದರಾಮಯ್ಯ ಮಹಾದೇವಪ್ಪ ಮಕ್ಕಳು ಹಿಂದೂಗಳು. ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ. ಪಾಕಿಸ್ತಾನ ಏಜೆಂಟರಂತೆ ವರ್ತಿಸುತ್ತಾರೆ. ಯುದ್ಧ ಬೇಕಾಗಿಲ್ಲ ಎಂದು ಹೇಳೋಕೆ ಸಿದ್ದರಾಮಯ್ಯ ಯಾರು? ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ? ಪಾಕಿಸ್ತಾನದ ಒಂದು ರಾಜ್ಯದ ಮುಖ್ಯಮಂತ್ರಿಯೋ? ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು. ಇಂತಹ ನಾಲಯಕರನ್ನ ಹಿಂದೂಗಳು ಹೀನಾಯವಾಗಿ ಸೋಲಿಸಬೇಕು, ಆವಾಗ ಬುದ್ದಿ ಬರುತ್ತೆ. ಪಾಕಿಸ್ತಾನದ ಪರ ಮಾತನಾಡುವವರು, ಸಿದ್ದರಾಮಯ್ಯಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ.ಪಾಕಿಸ್ತಾನಕ್ಕೆ ಹುಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ತೀವ್ರ ವಾಗ್ದಾಳಿಯನ್ನ ನಡೆಸಿದರು.
ದೇಶದಲ್ಲಿ ಎಲ್ಲಿಯವರೆಗೆ ಹಿಂದೂಗಳು ಒಗ್ಗಟ್ಟು ಆಗುವುದಿಲ್ಲವೋ ಇಂತಹ ನಾಯಕರನ್ನು ಸೋಲಿಸುವವರಿಗೆ ಹೀಗೆ ಮಾಡುತ್ತಾರೆ. ಕಾಂಗ್ರೆಸ್ನವರು ಮೊದಲು ಮಸೀದಿಗೆ ಹೋಗುತ್ತಿದ್ದರು. ಕಾಂಗ್ರೆಸ್ನವರು ಇತ್ತೀಚಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ನಾವು ನಮ್ಮ ದೇಶದ ಪರವಾಗಿ ಮಾತನಾಡಬೇಕು. ಪಾಕಿಸ್ತಾನದ ಏಜೆಂಟರಂತೆ ಮಾತನಾಡಿದರೆ ಬೇರೆ ಅರ್ಥ ಬರುತ್ತದೆ. ಮೋದಿಗೆ ಮುಸ್ಲಿಂ ದೇಶಗಳಿಂದ ಬೆಂಬಲ ಸಿಗುತ್ತಿದೆ ನಕಲಿ ಮುಸ್ಲಿಮರಿಂದಲ್ಲ ಎಂದು ಹೇಳಿಕೆ ನೀಡಿದರು.
ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದಕ್ಕೆ ಕೈ ನಾಯಕರ ಆಕ್ರೋಶ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಪ್ರಧಾನಿ ಮೋದಿ ಅವರೇ ಸಭೆಗೆ ಹಾಜರಾಗಬೇಕು ಅಂತ ಏನು ಇಲ್ಲ. ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಆಗಿದ್ದು, ದೇಶ ಬಿಟ್ಟು ತೊಲಗಲಿ. ಪಾಕಿಸ್ತಾನದಲ್ಲೇ ಹೋಗಿ ಸಿದ್ದರಾಮಯ್ಯ ಪಿಎಂ ಆಗಲಿ. ಕಾಶ್ಮೀರದಲ್ಲಿ ಭಯೋತ್ಪಾದಕರು, ಹಿಂದೂಗಳನ್ನು ಹುಡುಕಿ ಕೊಂದಿದ್ದಾರೆ. ದೇಶದಲ್ಲಿ ಹಿಂದೂಗಳೂ ಒಂದಾಗಿ ಇರಬೇಕು, ಜಾತಿ ಜಾತಿ ಅಂತ ಕಿತ್ತಾಡಬಾರದು ಎಂದು ಯತ್ನಾಳ್ ಅವರು ಹೇಳಿದರು.
ಅಂಬೇಡ್ಕರ್ ಅವರೇ ದೇಶದಲ್ಲಿ ಇಸ್ಲಾಂ ಇದ್ದರೇ ಶಾಂತಿ ಇರಲ್ಲಾ ಎಂದಿದ್ರು. ಮಹಾತ್ಮಾ ಗಾಂಧಿಗೂ ರಾಷ್ಟ್ರಪಿತ ಅಂತಾ ಕರೆಯಬೇಡಿ ಎಂದಿದ್ರು. ದೇಶ ಇಬ್ಬಾಗ ಅಗೋದಾದ್ರೆ ಕಟ್ಟಕಡೆಯ ಹಿಂದೂ ಭಾರತಕ್ಕೆ ಬರಲಿ, ಭಾರತದಲ್ಲಿರುವ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ರು ಎಂದು ಬೀದರ್‌ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಹಾಗು ಕೈ ನಾಯಕರ ವಿರುದ್ದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.












Click it and Unblock the Notifications