ಗುರುತಿನ ಚೀಟಿ ಇಲ್ಲದಿದ್ದರೆ ಮತದಾನ ಮಾಡಬಹುದೆ?

Posted By:
Subscribe to Oneindia Kannada

ಬೆಂಗಳೂರು, ಏ.16 : ಗುರುವಾರ ಮತದಾನ ಮಾಡಲು ಜನರು ಸಿದ್ಧರಾಗುತ್ತಿದ್ದಾರೆ. ಮತದಾರರ ಗುರುತಿನ ಪತ್ರ ವಿಲ್ಲದವರು ಆಯೋಗ ಸೂಚಿಸಿರುವ ಇತರ ದಾಖಲೆಗಳನ್ನು ಸಲ್ಲಿಸಿ ಮತದಾನ ಮಾಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಗುರುತು ದೃಢೀಕರಿಸಲು ಆಯೋಗ ಸೂಚಿಸಿರುವ ಪರ್ಯಾಯ ದಾಖಲೆಗಳನ್ನು ನೀಡಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರಿಗೆ ಗುರುತಿನ ಚೀಟಿಯನ್ನು ಚುನಾವಣಾ ಆಯೋಗ ನೀಡಿದೆ. ಒಂದು ವೇಳೆ ನಿಮಗೆ ಗುರುತಿನ ಚೀಟಿ ತಲುಪಿಲ್ಲದಿದ್ದರೆ, ಏ.17ರ ಗುರುವಾರ ಚುನಾವಣಾ ಆಯೋಗ ಸೂಚಿಸಿರುವ ಈ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

 Voting

ಯಾವ ದಾಖಲೆಗಳು ಬೇಕು
* ಆಧಾರ್ ಕಾರ್ಡ್ [ಮತಟ್ಟೆ ಮಾಹಿತಿ ಪಡೆಯುವುದು ಹೇಗೆ?]
* ಪಾಸ್ ಪೋರ್ಟ್
* ಚಾಲಾನಾ ಪರವಾನಿಗೆ
* ಪಾನ್ ಕಾರ್ಡ್
* ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ವಿತರಿಸಿರುವ ಭಾವಚಿತ್ರವಿರುವ ಗುರುತಿನ ಚೀಟಿ
* ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ, ಕಿಸಾನ್ ಪಾಸ್ ಬುಕ್
* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ಗುರುತಿನ ಪತ್ರ
* ಭಾವಚಿತ್ರ ಸಹಿತಿ ಆಸ್ತಿ ದಾಖಲೆ
* ಸ್ವಾತಂತ್ರ್ಯ ಯೋಧರ ಗುರುತಿನ ಪತ್ರ
* ಸಂಧ್ಯಾ ಸುರಕ್ಷಾ ಯೋಜನೆ ಕಾರ್ಡ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2014 : The Election Commission has directed that the electors who do not have EPIC shall have to produce any one of the following photo documents for establishing their identity before casting their votes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ