ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನೆಲೆ ನಾಶ : ಸೇನೆಗೆ ಸೆಲ್ಯೂಟ್‌ ಎಂದ ಕರ್ನಾಟಕದ ನಾಯಕರು

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ಮಂಗಳವಾರ ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ದಾಳಿ ಮಾಡಿದ್ದ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರವನ್ನು ನಾಶ ಮಾಡಲಾಗಿದೆ.

ಗಡಿನಿಯಂತ್ರಣ ರೇಖೆಯಾಚೆ ಇರುವ ಬಾಲಾಕೋಟ್, ಚಕೋತಿ ಮತ್ತು ಮುಜಾಫರಾಬಾದ್‌ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ದೇಶಾದ್ಯಂತ ಭಾರತೀಯ ವಾಯುಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿ

ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ನಾಯಕರು ಭಾರತೀಯ ವಾಯುಪಡೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪಾಕಿಸ್ತಾನಕ್ಕೆ ಇದೊಂದು ತಕ್ಕಪಾಠವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೈನ್ಯದ ಸಾಹಸವನ್ನು ಕೊಂಡಾಡುತ್ತಿದ್ದಾರೆ. ಯಾರು, ಏನು ಹೇಳಿದರು ಎಂದು ಚಿತ್ರಗಳಲ್ಲಿ ನೋಡಿ...

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೆಹಬೂಬಾಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೆಹಬೂಬಾ

ವಾಯುಪಡೆಗೆ ಸೆಲ್ಯೂಟ್‌ ಎಂದ ಸಿಎಂ

ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿದ ಭಾರತೀಯ ವಾಯುಪಡೆಗೆ ಸೆಲ್ಯೂಟ್ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಜೈ ಜವಾನ್, ಜೈ ಹಿಂದ್ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಇದು ಪಾಠ

'ಭಾರತೀಯ ವಾಯುಪಡೆಗೆ ಸೆಲ್ಯೂಟ್ ಎಂದಿರುವ ಸಿದ್ದರಾಮಯ್ಯ ಅವರು, ಈ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಪಾಠವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

Array

ಯೋಧರಿಗೆ ನಮನ ಸಲ್ಲಿಸಿ

ಶೌರ್ಯ, ಸಾಹಸ ಮೆರೆದ ಯೋಧರಿಗೆ ಸೆಲ್ಯೂಟ್ ಎಂದು ಹೇಳಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೌ ಈಸ್ ದಿ ಜೋಷ್ ಎಂದು ಕೇಳಿದ್ದಾರೆ.

ಭಾರತದ ದಿಟ್ಟ ಹೆಜ್ಜೆ

ಉಗ್ರರ ಶಿಬಿರಗಳನ್ನು ನಾಶ ಮಾಡಿದ್ದು ಭಾರತದ ದಿಟ್ಟ ಹೆಜ್ಜೆಯನ್ನು ತೋರಿಸುತ್ತದೆ ಎಂದು ಧಾರವಾಡ ಸಂಸದ ಮತ್ತು ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಉಗ್ರರ ನೆಲೆ ನಾಶ

Tremendous strike by our ಐಎಎಫ್ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. ಪೈಲೆಟ್‌ಗಳ ಸಾಹಸವನ್ನು ಅವರು ಹೊಗಳಿದ್ದಾರೆ.

ದೇಶಕ್ಕಾಗಿ ಪೈಲೆಟ್‌ಗಳ ಸಾಹಸ

ನಮ್ಮ ಬಲವೇನು ಎಂದು ತೋರಿಸಿದ್ದಕ್ಕಾಗಿ ಭಾರತೀಯ ವಾಯುಪಡೆಗೆ ಸೆಲ್ಯೂಟ್ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಟ್ವೀಟ್ ಮಾಡಿದ್ದಾರೆ. ದೇಶಕ್ಕಾಗಿ ಪೈಪೆಟ್‌ಗಳು ತೆಗೆದುಕೊಂಡ ರಿಸ್ಕ್‌ಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಉಗ್ರವಾದದ ವಿರುದ್ಧ ನಾವೆಲ್ಲರೂ ಒಂದೇ

ನಟ ಪ್ರಕಾಶ್ ರಾಜ್ ಅವರು ಉಗ್ರರ ಶಿಬಿರವನ್ನು ನಾಶ ಮಾಡಿದ ಬಗ್ಗೆ ಟ್ವೀಟ್ ಮಾಡಿದ್ದು ನಮ್ಮ ಯೋಧರಿಗೆ ಸೆಲ್ಯೂಟ್, ದೇಶದ ಜನರಾಗಿ ಉಗ್ರವಾದದ ವಿರುದ್ಧ ಎಲ್ಲರೂ ಒಂದು ಎಂದು ಹೇಳಿದ್ದಾರೆ.

English summary
Karnataka political leaders salute the Indian air force for air strike in Pakistan. Chief Minister H.D.Kumaraswamy and other leaders tweeted about this. Who said what about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X