Prajwal Revanna Case: ಆ ಪೆನ್ ಡ್ರೈವ್ ಬಿಟ್ಟವ್ರು ಯಾರು.. ಯಾಕೆ? ಸತ್ಯ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ

ಶಿವಮೊಗ್ಗ, ಏಪ್ರಿಲ್‌ 29: ಹಾಸನದಲ್ಲಿ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಸದ್ಯ ತಲೆಮರೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ ಎಂದು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ, ಮತದಾನಕ್ಕೆ ಕೇವಲ ಮೂರು ದಿನ ಬಾಕಿಯಿರುವಾಗ ಪೆನ್ ಡ್ತೈವ್ ಗಳನ್ನು ಬಿಡುಗಡೆ ಮಾಡಿರುವ ಹಿಂದೆ ಕುತಂತ್ರ ಕಾಣಿಸುತ್ತಿದೆ, ಅವುಗಳನ್ನು ಬಿಡುಗಡೆ ಮಾಡಿದ್ದು ಯಾರು? ಬಿಡಯಗಡೆ ಮಾಡುವುದೇ ಅವರ ಉದ್ದೇಶವಾಗಿದ್ದರೆ ಮೊದಲ್ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ ಐಟಿ ಯನ್ನು ರಚನೆ ಮಾಡಿದೆ, ತನಿಖೆ ನಡೆಯಲಿ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಿ. ಪ್ರಜ್ವಲ್ ಈಗ ಎಲ್ಲಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಸಿಡುಕಿದ ಕುಮಾರಸ್ವಾಮಿ, ಅದು ತನಗೆ ಹೇಗೆ ಗೊತ್ತಾಗುತ್ತದೆ ಎಂದರು. ಪ್ರಜ್ವಲ್ ತಪ್ಪಿತಸ್ಥರಾಗಿದ್ದರೆ ಪಕ್ಷ ಸಹ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.

I Smell Conspiracy In Releasing Pen Drives Just 3 Days Before Voting HD Kumaraswamy

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ ಎಂದು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತಾನಾಡಿದ ಅವರು ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ, ನಿನ್ನೆಯೇ ಈ ಬಗ್ಗೆ ತೀರ್ಮಾನ ಆಗಿತ್ತು. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಉಚ್ಚಾಟನೆ ಬಗ್ಗೆ ತೀರ್ಮಾನ ಆಗಬೇಕಿತ್ತು ಎಂದು ಹೇಳಿದರು.

ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು, ಈ ಪ್ರಕರಣದಲ್ಲಿ ದೇವೇಗೌಡರನ್ನ, ನನ್ನನ್ನ ಯಾಕೆ ತರ್ತೀರಾ, ಬಿಜೆಪಿ ಗೂ ಈ ಪ್ರಕರಣ ಕ್ಕೂ ಸಂಬಂಧವಿಲ್ಲ, ಈಗಾಗಲೇ ನಾವು ಬೇರೆ ಆಗಿದ್ದೇವೆ, ನಮ್ಮ ವ್ಯವಹಾರ ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತೆ, ರಾಜ್ಯದ ಹೆಣ್ಣು ಮಕ್ಕಳ ಧ್ವನಿಯಾಗಿ ನಾನು ಧ್ವನಿ ಎತ್ತುತ್ತೇನೆ, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ತಪ್ಪು ಆಗಿದ್ರೆ ಈ ನೆಲ್ಲದಲ್ಲಿ ಶಿಕ್ಷೆ ಆಗಬೇಕು, ಈ ನಿಟ್ಟಿನಲ್ಲಿ ನನ್ನ ಸ್ಟಾಂಡ್ ಮುಂದುವರೆದಿದೆ, ಕಾನೂನು ಉಲ್ಲಂಘನೆ ಆಗಿದ್ರೆ, ಬಲವಂತ ಆಗಿದ್ರೆ ಕಾನೂನು ರೀತಿಯ ಕ್ರಮ ಆಗಲಿ ಎಂದು ಹೇಳಿದರು.

ಚುನಾವಣೆ ಸಮಯದಲ್ಲಿ ಪೆನ್ ಡ್ರೈ ಹಂಚಿರುವುದು ಕೂಡ ತನಿಖೆ ಯಾಗಬೇಕು, ಯಾರಿಂದ ಹೊರಬಂದಿದೆ, ಯಾರು ಲಕ್ಷಾಂತರ ಪೆನ್ ಡ್ರೈ ಹಂಚಿದವರು ಯಾರು ಅಂತಾ ತಿಳಿಯಬೇಕು, ಪೆನ್ ಡ್ರೈ ಹಂಚಿದ್ದು ದೊಡ್ಡ ಅಪರಾಧ, ಈ ಪ್ರಕರಣ ಸಮಗ್ರ ತನಿಖೆ ಆಗಬೇಕು ಎಂದರು.

ಇನ್ನು ಪ್ರಿಯಾಂಕಾ ಖರ್ಗೆ ಟ್ವಿಟ್ ವಿಚಾರವಾಗಿ ಮಾತಾನಾಡಿದ ಅವರು ಪ್ರಧಾನಿಗಳಿಗೂ ಈ ವಿಚಾರಕ್ಕೂ ಸಂಬಂಧ ಇಲ್ಲ, ಮೋದಿ,ಬಿಜೆಪಿ, ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ, 2012 ರ ಪ್ರಕರಣ ಅಂದ ಮೇಲೆ ಇಷ್ಟು ವರ್ಷ ಏನ್ ಮಾಡುತ್ತಿದ್ದರು, ನನ್ನ ಹಾಗೂ ನನ್ನ ತಂದೆಯರು ಯಾರು ಸಂಶಯ ಪಡಬೇಡಿ ಎಂದು ಕುಮಾರಸ್ವಾಮಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+