ನಾನೊಬ್ಬ ಗೃಹ ಸಚಿವನಾಗಿ ಬೆಟ್ಟಿಂಗ್ ಮಾಡುವುದಕ್ಕೆ ಹೋಗ್ತೀನಾ..?: ಜಿ. ಪರಮೇಶ್ವರ್
ಗೃಹ ಸಚಿವ ಜಿ. ಅವರು ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ನಿರ್ಬಂಧ ಸೇರಿದಂತೆ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಅವರು ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾದ ವಿಚಾರವಾಗಿಯೂ ರಿಯಾಕ್ಟ್ ಮಾಡಿದ್ದಾರೆ.
RSS ಪಥ ಸಂಚಲನಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಈಗ ಹೊರಡಿಸಿರುವ ತುರ್ತು ಆದೇಶದಲ್ಲಿ ಸ್ಪಷ್ಟನೆ ಇದೆ. ಇನ್ನೊಂದಷ್ಟು ನಿರ್ದಿಷ್ಟವಾಗಿ ಹೇಳುವ ವಿಚಾರವನ್ನು ಇಲಾಖೆ ಅಧಿಕೃತವಾಗಿ ಆದೇಶ ಮಾಡಲಿದೆ. ಈಗ ತೀರ್ಮಾನವನ್ನ ತೆಗೆದುಕೊಳ್ಳಬೇಕಾಗಿರುವುದು ಜಿಲ್ಲಾಡಳಿತ, ಇನ್ನು ಚಿತ್ತಾಪುರದ ವಿಚಾರದಲ್ಲಿ ಒಟ್ಟಿಗೆ ಅನುಮತಿ ಕೇಳಿದ್ದಾರೆ. ಅಲ್ಲದೇ ಬೇರೆ ಬೇರೆ ಸಂಘಟನೆಗಳು ಕೂಡ ಕೇಳಿದ್ದಾರೆ. ಅದರ ತೀರ್ಮಾನ ಜಿಲ್ಲಾ ಆಡಳಿತ ಕೈಗೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರು ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವು ಆ ಸುತ್ತೋಲೆಯನ್ನು ಹೊರಡಿಸಿದ್ದೇವೆ. ಆ ಸುತ್ತೋಲೆ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನಮ್ಮ ಸರ್ಕಾರ ಹೊರಡಿಸಿರುವ ಸುತ್ತೋಲೆಯು ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಮಾಡಿದ್ದಲ್ಲ. ಅದರಲ್ಲಿ ಎಲ್ಲಾದರೂ Rss ಎನ್ನುವ ಪದಬಳಕೆಯಾಗಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಸುಮ್ಮನೆ ಅನಾವಶ್ಯಕವಾಗಿ Rssಗೆ ಮಾಡಿದ್ದಾರೆ ಅಂತ ಹೇಳೋದು ಸರಿಯಲ್ಲ. ಅಲ್ಲದೇ ನಾವು ಆರ್ಎಸ್‌ಎಸ್ ನವರಿಗೆ ಮಾತ್ರ ಮಾಡಿಲ್ಲ. ನಾವು ಎಲ್ಲರಿಗೂ ಅನ್ವಯ ಆಗುವಂತೆ ಮಾಡಿದ್ದೇವೆ. ಇದನ್ನು ನಾವು ಸಂಘರ್ಷ ಆಗಬಾರದು ಶಾಂತಿಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಮಾಡಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಶಾಲಾ ಕಾಲೇಜಿನಲ್ಲಿ ಈ ಮಾದರಿ ಅವಕಾಶ ಕೊಡಬಾರದು ಅಂತಲೇ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಯಾವುದಾರೂ ನಿರ್ದಿಷ್ಟ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಕಂಡು ಕೊಳ್ಳಬೇಕಾಲ್ಲವೇ ಇದಕ್ಕಾಗಿಯೇ ಸರ್ಕಾರ ಇರುವುದು. ಈಗ ಸಮಸ್ಯೆ ಸೃಷ್ಟಿಯಾಗಿದೆ ಆರ್‌ಎಸ್‌ಎಸ್ ದೃಷ್ಟಿ ಯಿಂದಲೇ ಬಂತು ಎಂದಾದರೆ, ಆ ಸಮಸ್ಯೆ ಬಂದಾಗ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೇ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಾನು ಬೆಟ್ಟಿಂಗ್ ಕಟ್ಟುತ್ತೀನಾ ?
ಇನ್ನು ಈಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಬೆಟ್ಟಿಂಗ್ ಕಟ್ಟಿದ್ದರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, 31 ಜಿಲ್ಲೆಯಿಂದ ಮಕ್ಕಳು ಬಂದಿದ್ದರು. ಜೂನಿಯರ್ ಕಾಲೇಜ್‌ನಲ್ಲಿ ಕಬ್ಬಡ್ಡಿ ಆಯೋಜನೆ ಮಾಡಲಾಗಿತ್ತು. ಆಗ ಯಾರು ಗೆಲ್ಲುತ್ತಾರೆ ಹೇಳಿ ನೋಡೋಣ ಅಂತ ಮಾತನಾಡುತ್ತಿದ್ದರು. ನಾನು ಆಗ ಇವರು ಗೆಲ್ಲಬಹುದು ಎಂದು ಹೇಳಿದೆ ಅಷ್ಟೇ. ನೋಡ್ರಿ ಇವರು ಗೆಲ್ಲುತ್ತಾರೆ ಅಂತ ಹೇಳಿಲ್ವಾ ಅಂತ ನಾವು ತಮಾಷೆ ಮಾಡ್ಕೊಂಡ್ವಿ ನನಗೆ ಅಷ್ಟು ಬುದ್ಧಿ ಇಲ್ವಾ.. ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಾನೊಬ್ಬ ಗೃಹ ಸಚಿವನಾಗಿ ಬೆಟ್ಟಿಂಗ್ ಮಾಡುವುದಕ್ಕೆ ಹೋಗ್ತೀನಾ ಎಂದೂ ಅವರು ಕೇಳಿದ್ದಾರೆ.
ಅಷ್ಟು ಕನಿಷ್ಠ ಜ್ಞಾನ ಇಲ್ಲ ಎಂದರೆ ಏನು ಎಂದೇಳಿ. ಸುಮ್ಮನೆ ಅದನ್ನು ಅನಾವಶ್ಯಕವಾಗಿ ಬೇಡವಾದ ರೀತಿಯಲ್ಲಿ ಏನೇನು ಮಾತನಾಡುತ್ತಿದ್ದಾರೆ. ಅವರಿಗೆ ಖುಷಿಯಾಗುವುದಾದರೆ ಮಾಡಲಿ. ಆದರೆ ಅದು ಯಾವುದು ಬೆಟ್ಟಿಂಗ್ ಅಲ್ಲ. ನಾನು ಕ್ರೀಡಾಪಟುವಾಗಿ ಗೃಹ ಸಚಿವನಾಗಿ ಬೆಟ್ಟಿಂಗ್ ಮಾಡುತ್ತೀನೇ ಎನ್ನುವ ಕನಿಷ್ಠ ಜ್ಞಾನ ಇಲ್ಲವೇ ಎಂದು ಅವರು ಬೆಟ್ಟಿಂಗ್ ಸಂಬಂಧಿಸಿದ ಟೀಕೆಗಳಿಗೆ ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications