ಸಿ ಪಿ ಯೋಗೇಶ್ವರ್‌ ರಾಜೀನಾಮೆ; ಚನ್ನಪಟ್ಟಣದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಾ?

ಬೆಂಗಳೂರು, ಅಕ್ಟೋಬರ್‌ 21: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತೀವ್ರ ರಂಗೇರುತ್ತಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್‌ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಿಂದ ಎನ್‌ ಡಿ ಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಬೇಡಿಕೆ ಇಟ್ಟಿದ್ರು ಇದೀಗ ಎನ್‌ ಡಿ ಎ ಟಿಕೆಟ್‌ ಯೋಗೇಶ್ವರ್‌ ಗೆ ಸಿಗುವುದು ಡೌಟ್‌ ಎನ್ನಲಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.

I have not said that I will contest from Channapatna Says Nikhil kumaraswamy

ಈ ಕುರಿತು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಯಾವತ್ತೂ ವೈಯಕ್ತಿಕವಾಗಿ ಹೇಳಿಲ್ಲ. ಸಾಧಕ ಬಾಧಕ ನೋಡಿಕೊಂಡು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಹೆಚ್.ಡಿ ಕುಮಾರಸ್ವಾಮಿ ನಾವು ಸ್ವಾತಂತ್ರವಾಗಿ ಇದ್ದಾಗಿಯೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಲು ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ ಎಂದು ಹೇಳಿದರು.

ಈ ಲೋಕಸಭೆಯಲ್ಲಿ ಮೈತ್ರಿಕೂಟದ ಭಾಗವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬೆಳೆದಿದೆ. ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಯಾವುದೇ ತೀರ್ಮಾನ ಕೈಗೊಳ್ಳುವ ಉದ್ವೇಗಕ್ಕೆ ಒಳಗಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ನಾನು ಎಂದು ಕೂಡ ಅಭ್ಯರ್ಥಿ ಆಗುತ್ತೇನೆ, ನಾನು ಆಕಾಂಕ್ಷಿ ಎಂದು ಇಲ್ಲಿಯವರೆಗೆ ವ್ಯಕ್ತಪಡಿಸಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣ ಅವರು ಸ್ಪರ್ಧೆ ಮಾಡಿರುತ್ತಾರೆ. ಜನತಾದಳ ಪಕ್ಷದ ಪರವಾಗಿ ಚನ್ನಪಟ್ಟಣ ಮತದಾರರು ಆಶೀರ್ವಾದ ಮಾಡಿದ್ದಾರೆ. ಕುಮಾರಣ್ಣನ ಸ್ವಕ್ಷೇತ್ರ ಆಗಿರುವುದರಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ನೋಡಿದ್ದೇವೆ. ನಾನು ನಿಲ್ತೇನೆ ಅಂತ ಹೇಳಿಲ್ಲ. ಇದು ಕುಮಾರಣ್ಣ ಅವರ ಸ್ವಕ್ಷೇತ್ರ ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ತೀರ್ಮಾನ ತಗೊಳ್ಳಿ ಅಂತ ಹೇಳಿದ್ದಾರೆ. ಆದರೂ ಮೈತ್ರಿಗೆ ತೊಂದರೆ ಆಗಬಾರದು ಅಂತ ನಾವಿದೀವಿ ಎಂದರು

ನಮ್ಮ ತೀರ್ಮಾನ ಏನೇ ಇದ್ರೂ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತಗೋತೀವಿ.ನಮಗೆ ಸ್ವಾತಂತ್ರ್ಯ ಇದ್ದಾಗಿಯೂ ನಾವು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು ಅಂತ.ಒಬ್ಬ ವ್ಯಕ್ತಿಯ ನಡವಳಿಕೆ ನೋಡಿ ನಾವು ಯಾವುದೇ ರೀತಿಯ ಆತುರದ ನಿರ್ಧಾರ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇವೇಗೌಡರು, ಕುಮಾರಣ್ಣ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀವಿ. ನಾನು ಅಭ್ಯರ್ಥಿ ಅಂತ ಎಂದೂ ವೈಯಕ್ತಿಕವಾಗಿ ಹೇಳಿಲ್ಲ. ನನ್ನ ಜವಾಬ್ದಾರಿ ನಿಭಾಯಿಸ್ತಿದ್ದೇನೆ ಕ್ಷೇತ್ರದಲ್ಲಿ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ಮಾಡ್ತೀವಿ.ಎರಡು ಮೂರು ದಿನಗಳ ಹಿಂದೆ ಯೋಗೀಶ್ವರ್ ಜತೆ ನಮ್ಮ ಹಿರಿಯ ಮುಖಂಡರು ಚರ್ಚೆ ಮಾಡಿದ್ರು. ಜೆಡಿಎಸ್ ಚಿನ್ಹೆಯಡಿಯೂ ಸ್ಪರ್ಧೆಗೆ ಆಫರ್ ಕೊಟ್ರು. ಈ ಆಫರ್ ಗೆ ಅವರು ಕುಮಾರಸ್ವಾಮಿ ಅವರನ್ನೂ ಕೇಳಿರಲಿಲ್ಲ. ಇದನ್ನು ನಮ್ಮ ಮುಖಂಡರೇ ನನಗೆ ಹೇಳಿದ್ದರು ಎಂದು ತಿಳಿಸಿದರು.

ನಾವು ಯೋಗೀಶ್ವರ್ ವಿಚಾರದಲ್ಲಿ ದೊಡ್ಡ ಔದಾರ್ಯತೆ ತೋರಿದ್ದೇವೆ. ನಮ್ಮ ನಾಯಕರು ಯೋಗೇಶ್ವರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ ಇನ್ನೇನು ಮಾಡಬೇಕು?ಯಾವುದೇ ತೀರ್ಮಾನ ಕೈಗೊಳ್ಳಲು ಬಿಜೆಪಿಯ ವರಿಷ್ಠರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೂ ಮೈತ್ರಿಗೆ ಯಾವುದೇ ರೀತಿಯ ಅಗೌರವ ತೋರಬಾರದು ಅದಕ್ಕಾಗಿ ನಮ್ಮ ನಡೆ ಏನೇ ಇದ್ದರೂ ಪಕ್ಷದ ಚೌಕಟ್ಟಿನ ಒಳಗೆ ಆಗಬೇಕು ಎಂದು ತಿಳಿಸಿದರು. ಸಿಪಿ ಯೋಗೇಶ್ವರ್ ಬಹಳ ಹಿರಿಯರು, ಅನುಭವಸ್ತರು ಇದ್ದಾರೆ ನಾನು ಈ MLA, ಎಂಪಿ ಆಗಬೇಕಿದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಏನು ನಡೆಯಿತು ಎಂದು ಸಾಕ್ಷಿ ಇದೆ. ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕು ಎಂದು ಕೆಲಸ ಮಾಡುತ್ತಿದ್ದೇನೆ.

ಸಿಪಿ ಯೋಗೇಶ್ವರ್ ಹೇಳಿಕೆಗೆ ಮಾತನಾಡಿದ ಅವರು,ಸುಮ್ನನೇ ಅನುಕಂಪ ಗಿಟ್ಟಿಸಿ ಕೊಳ್ಳಬೇಕೆಂದು ಕುಮಾರಸ್ವಾಮಿ ಅವರು ಅವರ ಮಗನನ್ನ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುವುದನ್ನ ಬಿಟ್ಟು ಅವರ ಕೆಲಸ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸಿಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೆ ವಿಚಾರಕ್ಕೆ ಮಾತನಾಡಿದ ಅವರು. ಅವರ ನಡೆ ಅವರಿಗೆ ಜೆಡಿಎಸ್ ಅಂದರೆ NDA ನಡೆ.ಜೆಡಿಎಸ್ ಒಂದೇ ತೀರ್ಮಾನ ಮಾಡುವುದಕ್ಕೆ ಆಗಲ್ಲ ಜೆಡಿಎಸ್ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+