ಟೆಂಟ್‌ನಲ್ಲಿ ಬ್ಲೂಫಿಲಂ ತೋರಿಸಿ ಬಂದವನಲ್ಲ ನಾನು: ವಿಧಾನಸೌಧದಲ್ಲಿ ಗುಡುಗಿದ ಕುಮಾರಸ್ವಾಮಿ

ಬೆಂಗಳೂರು, ಜುಲೈ 5: ರಾಜ್ಯದ ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ನಾನು ಬ್ಲೂಫಿಲಂ ತೋರಿಸಿ ಬಂದವನಲ್ಲ ನಾನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಮೇಲೆ ವರ್ಗಾವಣೆ ದಂಧೆ ಆರೋಪ ಮಾಡಿದ ಅವರು ಸುದ್ದಿಗಾರರಿಗೆ ಪೆನ್‌ ಡ್ರೈವ್‌ ತೋರಿಸಿ ನಾನು ರಾಜಕಾರಣಕ್ಕೆ ಬರುವ ಮುಂಚೆ ರೌಡಿಗಳಿಗೆ ಬಾಟಲ್‌ ತಂದುಕೊಡುತ್ತಿದ್ದವನಲ್ಲ, ನಾವು ಕಷ್ಟಬಿದ್ದು ಇಲ್ಲಿ ಬಂದಿದ್ದೇವೆ. ನನ್ನ ಬಗ್ಗೆ ಮಾತನಾಡ ಮುಂಚೆ ಎಚ್ಚರಿಕೆ ಇರಲಿ. ಮಂಡ್ಯ ಡಿಎಚ್‌ಒ ಬಗ್ಗೆ ಸುದ್ದಿ ಬರುತ್ತಿದೆ. ಲಂಚಾವತಾರ ಬಗ್ಗೆ ಚರ್ಚೆ ಆಗುತ್ತಿದೆ. ಇವರು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

I Am came here to Not the one who showed blue film in the tent: HD Kumaraswamy

ಲಾಟರಿ ದಂಧೆ ನಡೆಸಲು ಬಂದವರನ್ನು ನಾನು ಮನೆಯಿಂದ ಆಚೆ ಕಳಿಸಿದವನು ನಾನು. ಚುನಾವಣೆ ನಡೆಸಲು ಹಲವರು ಸಹಾಯ ಮಾಡುತ್ತಾರೆ. ನನ್ನ ಮನೆ ದುಡ್ಡಿನಿಂದ ಇವತ್ತಿನ ಚುನಾವಣೆ ನಡೆಸಲು ಆಗುತ್ತದೆಯೇ. ತಾಜ್‌ವೆಸ್ಟೆಂಡ್‌ನಲ್ಲಿ ಇಂದಿಗೂ ನನ್ನ ರೂಂ ಇದೆ. ಈಗಲೂ ನನ್ನ ಅಡ್ಡ ಆಗಿದೆಯಾ ಇದು, ಇವರಿಗೆ ಅರ್ಜಿ ಹಾಕಿ ರೆಸ್ಟ್‌ ರೂಂಗೆ ಹೋಗಬೇಕು. ಕಾಂಗ್ರೆಸ್‌ನವರು ಮೊದಲು ಅವರ ಯೋಗ್ಯತೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ನನ್ನಲ್ಲೂ ಸಾಕ್ಷ್ಯಾಧಾರಗಳಿವೆ, ಎಲ್ಲವನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೇನೆ. ನಮ್ಮ ಬಳಿ ಬೆಳೆದವರೆ ಈಗ ಅಲ್ಲಿ ಹೋಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಪೆನ್‌ಡ್ರೈವ್‌ ತೋರಿಸಿದ ಅವರು ಇದರಲ್ಲಿ ಆಡಿಯೋ ಇದೆ. ಅವರು ಕೇಳಿದ್ದಕ್ಕೆ ಇಲ್ಲಿ ತಂದಿದ್ದೇನೆ. ನನ್ನ ಆಡಳಿತದ ಕೆಎಸ್‌ಟಿ ಸೆಂಟರ್ ಇಟ್ಟಿರಲಿಲ್ಲ ನಾನು, ತಾಜ್‌ ವೆಸ್ಟೇಂಡ್‌ ಬಿಲ್‌ ಕಟ್ಟಿಲ್ಲ ಎಂದು ಕಾಂಗ್ರೆಸ್‌ನವರಿಗೆ ಬಿಲ್‌ ಕಳಿಸಿದ್ದಾರಂತ. ನಾನೇನು ಮೈ ಪರಚಿಕೊಳ್ಳುತ್ತಿಲ್ಲ. ನಾನೇನು ಬೀದಿಲಿ ಹೋಗುವ ದಾಸಯ್ಯನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಆಡಳಿತ ಮುಕ್ತವಾಗಿತ್ತು. ಯಾರು ಬೇಕಾದರೂ ಪರಿಶೀಲನೆ ಮಾಡಬಹುದಿತ್ತು. ನನಗೆ 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ಇಲ್ಲವಾ ನನಗೆ. ನನ್ನ ಬಗ್ಗೆ ಮಾತನಾಡಲು ಇತಿಮಿತಿ ಇರಲಿ. ಮಂಡ್ಯದಲ್ಲಿ ಗುಮಾಸ್ತನ ನೇಮಕಾತಿ ಬಗ್ಗೆ ವೈದ್ಯರ ಲಂಚದ ಸುದ್ದಿ ಬರುತ್ತಿದೆ. ಮೊದಲು ಅವರ ಯೋಗ್ಯತೆ ನೋಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.

I Am came here to Not the one who showed blue film in the tent: HD Kumaraswamy

ದಿನೇಶ್‌ ಗುಂಡೂರಾವ್‌ ಹೆಸರೇಳಿದ ಕುಮಾರಸ್ವಾಮಿ ನಾನೇನು ಅಧಿಕಾರ ಇಲ್ಲ ಅಂತ ಮೈ ಪರಚಿಕೊಳ್ಳುತ್ತಿಲ್ಲ. ನನಗಲ್ಲ ಅವರಿಗೆ ಈಗ ರಾಜಕೀಯ ತುರಿಕೆ ಆರಂಭವಾಗಿದೆ. ಚುನಾವಣೆಯಿಂದ ಸೋತು ನಾನೇನು ನಿರಾಸೆ ಆಗಿಲ್ಲ. ಅಧಿಕಾರ ಇದ್ದಾಗಲೂ ಇಲ್ಲದಾಗಲೂ ನಾವು ಒಂದೇ ರೀತಿ ಇದ್ದೇವೆ. ನಾವೇನು ಅಧಿಕಾರ ಇದೆ ಅಂತ ಎಲ್ಲೂ ಮೆರೆದಾಡಿಲ್ಲ. ಆಗಲೂ ಈಗಲೂ ಜನರ ಕಷ್ಟಕ್ಕಾಗಿ ಹೋರಾಟ ಮಾಡಿದ್ದೇವೆ. ಈಗ ಅವರದ್ದೇ ಸರ್ಕಾರವಿದೆ. ನನ್ನ ಆಸ್ತಿ ಬಗ್ಗೆ ತನಿಖೆ ಮಾಡಲಿ ಎಂದರು.

ನಮ್ಮ ಕಾಲದ ವರ್ಗಾವಣೆ ಬಗ್ಗೆಯೂ ಮಾಡಲಿ. ಇಂಧನ ಇಲಾಖೆಯಲ್ಲಿ ನಿನ್ನೆ ಎರಡು ವರ್ಗಾವಣೆ ಆಗಿದ್ದು, ಅದು 10 ಕೋಟಿ ವ್ಯವಹಾರ ನಡೆದಿದೆ. ವರ್ಗಾ ಮಾಡಿಸಿಕೊಂಡು ಹೋದವನ ದಿನದ ಆದಾಯ 50 ಲಕ್ಷ ರೂಪಾಯಿ. ಆಡಳಿತ ನಾನೂ ನೋಡಿ ಬಂದವನು. ಬಾಯಿ ಚಪಲಕ್ಕೆ ಮಾತನಾಡುವವನಲ್ಲ ನಾನು. 1991 ನಂತರ ಹಣದ ಕೊರತೆ ಇಲ್ಲ. ಹಣ ಸ್ವೇಚ್ಚಾರವಾಗಿ ಹರಿದಾಡುತ್ತಿದೆ. ಆದರೆ ಹಣದ ಸಂಗ್ರಹ ಮಾಡಿ ಲೂಟಿ ಮಾಡಿ ಮಜಾ ಮಾಡುವ ಬೇರೆಂದು ವರ್ಗ ಇದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+