ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ V/S ಕರ್ನಾಟಕ: ಕೆಟಿಆರ್-ಡಿಕೆಶಿ ಉದ್ಯೋಗದ ಸವಾಲು

|
Google Oneindia Kannada News

ಬೆಂಗಳೂರು, ಏಪ್ರಿಲ್‌ 04: ಕರ್ನಾಟಕ ಹಾಗೂ ಹೈದಾರಾಬಾದ್ ನಡುವೆ ಉದ್ಯೋಗದ ಸವಾಲು ಎದ್ದಿದೆ. ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವರ್ಸಸ್ ತೆಲಂಗಾಣ ಸಚಿವ ಕೆಟಿ ರಾಮ್‌ ರಾವ್‌ ಪರಸ್ಪರ ಉದ್ಯೋಗದ ಸವಾಲು ಹಾಕಿಕೊಂಡಿದ್ದಾರೆ.

ತೆಲಂಗಾಣ ಸಚಿವ ಕೆಟಿ ರಾಮ್‌ ರಾವ್‌ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "ನಿಮ್ಮ ಬ್ಯಾಂಗ್ ಅನ್ನು ಪ್ಯಾಕ್‌ ಮಾಡಿ. ಹೈದರಾಬಾದ್‌ಗೆ ಬನ್ನಿ. ನಮ್ಮಲ್ಲಿ ಉತ್ತಮ ಮೂಲಭೂತ ಸೌಕರ್ಯಗಳು ಇದೆ," ಎಂದು ಕೆಟಿಆರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಹಲಾಲ್ ಕಟ್ ಬಗ್ಗೆ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಸಂದೇಶಕರ್ನಾಟಕದಲ್ಲಿ ಹಲಾಲ್ ಕಟ್ ಬಗ್ಗೆ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಸಂದೇಶ

ಹಾಗೆಯೇ "ನಮ್ಮ ವಿಮಾನ ನಿಲ್ದಾಣ ಉತ್ತಮವಾದ ವಿಮಾನ ನಿಲ್ದಾಣವಾಗಿದೆ. ಮುಖ್ಯವಾಗಿ ನಮ್ಮ ಸರ್ಕಾರವು ಮೂರು ಮಂತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಅದು ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ," ಎಂದು ಕೆಟಿಆರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Hyderabad vs Bengaluru Employment challenge

ಕೆಟಿಆರ್ ಟ್ವೀಟ್ ಗೆ ಡಿಕೆ ಶಿವಕುಮಾರ್‌ ತಿರುಗೇಟು

ಕೆಟಿಆರ್ ಟ್ವೀಟ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟಿ ನೀಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, "ನನ್ನ ಸ್ನೇಹಿತ, ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ," ಎಂದಿದ್ದಾರೆ. "2023ರೊಳಗೆ ಕಾಂಗ್ರೆಸ್‌ ಮತ್ತೆ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಲಿದೆ. ಆ ಸಂದರ್ಭದಲ್ಲಿ ನಾವು ಬೆಂಗಳೂರನ್ನು ಭಾರತದ ಉತ್ತಮ ನಗರವನ್ನಾಗಿ ಪರಿವರ್ತನೆ ಮಾಡುತ್ತೇವೆ," ಎಂದಿದ್ದಾರೆ.

ಇನ್ನು ಈ ಪ್ರತಿಕ್ರಿಯೆಗೆ ಮ್ತತೆ ಉತ್ತರಿಸಿದ ಕೆಟಿಆರ್, "ಪ್ರೀತಿಯ ಡಿಕೆ ಶಿವಕುಮಾರ್ ಅಣ್ಣ, ಕರ್ನಾಟಕ ರಾಜಕೀಯದ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ. ಯಾರು ಜಯ ಗಳಿಸಲಿದ್ದಾರೆ ಎಂದು ಕೂಡಾ ನನಗೆ ತಿಳಿದಿಲ್ಲ. ಆದರೆ ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ," ಎಂದು ಹೇಳಿದ್ದಾರೆ. "ನಮ್ಮ ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡುವ ವಿಚಾರದಲ್ಲಿ ಹಾಗೂ ನಮ್ಮ ರಾಷ್ಟ್ರಕ್ಕೆ ಸಮೃದ್ಧಿಯನ್ನು ತರುವ ನಿಟ್ಟಿನಲ್ಲಿ ಆರೋಗ್ಯಕರವಾಗಿ ಬೆಂಗಳೂರು ಹಾಗೂ ಹೈದರಾಬಾದ್ ಸ್ಪರ್ಧಿಸಲಿ. ಹಲಾಲ್ ಹಿಜಾಬ್ ಅಲ್ಲ ನಾವು ಮೂಲಭೂತ ಸೌಕರ್ಯ, ಐಟಿ-ಬಿಟಿಗೆ ಗಮನ ಹರಿಸೋಣ," ಎಂದಿದ್ದಾರೆ.

ಮೋದಿ ಸರ್ಕಾರದ ದುರಾಸೆಯಿಂದ ತೈಲ ಬೆಲೆ ಏರಿಕೆ; ಕಾಂಗ್ರೆಸ್ ಮೋದಿ ಸರ್ಕಾರದ ದುರಾಸೆಯಿಂದ ತೈಲ ಬೆಲೆ ಏರಿಕೆ; ಕಾಂಗ್ರೆಸ್

ಕರ್ನಾಟಕ ಸಚಿವ ಅಶ್ವಥ್‌ ನಾರಾಯಣ ಹೇಳುವುದು ಏನು?

ಇನ್ನು ಈ ಟ್ವೀಟ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಸಚಿವ ಅಶ್ವಥ್ ನಾರಾಯಣ, "ಈ ಟ್ವೀಟ್ ಗಳು ಉತ್ತಮ ಅಭಿರುಚಿಯಲ್ಲಿ ಇರಲಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಈ ರೀತಿಯಾಗಿ ವರ್ತನೆ ತೋರಬಾರದು. ಪರಸ್ಪರರ ಕಾಲುಗಳನ್ನು ಎಳೆಯಲು ಪ್ರಯತ್ನಿಸುವುದು ಯಾವುದೇ ಸರ್ಕಾರಕ್ಕೆ ಒಳ್ಳೆಯದಲ್ಲ. ನಾವು ಭಾರತೀಯರು, ಇಡೀ ಪ್ರಪಂಚದೊಂದಿಗೆ ಸ್ಪರ್ಧಿಸಬೇಕಾಗಿದೆ. ಇದು ಖಂಡನೀಯ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Hyderabad vs Bengaluru: KT Rama Rao and DK Shivakumar take the employment challenge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X