'ಸ್ನೇಹಿತ ಕೊಟ್ಟ ಊಬ್ಲೋ ವಾಚ್ ಅಫಿಡೆವಿಟ್ ಕೊಡಿ'

Posted By:
Subscribe to Oneindia Kannada

ಬೆಂಗಳೂರು ಮಾರ್ಚ್ 02 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ ಕೇಂದ್ರಿಯ ತನಿಖಾ ಸಂಸ್ಥೆಗಳಿಂದ ತನಿಖೆಯಾಗಬೇಕು' ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು. 'ವಾಚ್ ವಿವಾದದಲ್ಲಿ ತಾವೇ ತೋಡಿಕೊಂಡ ಗುಂಡಿಗೆ ಸಿಎಂ ಬಿದ್ದಿದ್ದಾರೆ' ಎಂದು ಎಚ್ಡಿಕೆ ವ್ಯಂಗ್ಯವಾಡಿದರು. [ಸಿದ್ದರಾಮಯ್ಯ ವಾಚ್ ಇನ್ನು ಸರ್ಕಾರದ ಆಸ್ತಿ]

ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ವಾಚ್ ವಿವಾದದಲ್ಲಿ ವಿಪಕ್ಷಗಳು ಸಿದ್ದರಾಮಯ್ಯ ಅವರ ತೇಜೋವಧೆ ಮಾಡುತ್ತಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ತೇಜೋವಧೆ ಮಾಡಿಕೊಳ್ಳುತ್ತಿದ್ದಾರೆ' ಎಂದರು. [ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?]

hd kumaraswmy

'ವಾಚ್ ವಿಚಾರದ ಕುರಿತು ಚರ್ಚೆ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ' ಎಂದು ಹೇಳಿದ ಕುಮಾರಸ್ವಾಮಿ ಅವರು,
'ಮುಖ್ಯಮಂತ್ರಿಗಳು ಹೇಳುವಂತೆ ಡಾ.ಗಿರೀಶ್ ಚಂದ್ರ ವರ್ಮಾ ಅವರೇ ವಾಚ್ ನೀಡಿದ್ದರೆ. ಅದನ್ನು ಮೊದಲೇ ಹೇಳಬಹುದಿತ್ತು. ಸ್ಪಷ್ಟನೆ ನೀಡಲು 23 ದಿನ ತೆಗೆದುಕೊಂಡಿದ್ದು ಏಕೆ?' ಎಂದು ಪ್ರಶ್ನಿಸಿದರು. [ಉಭಯ ಸದನಗಳ ಕಲಾಪ ನುಂಗಿದ ವಜ್ರದ ವಾಚ್]

'ವಾಚ್ ಎಲ್ಲಿಂದ ಬಂತು ಎಂಬ ಬಗ್ಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ತನಿಖೆಯಾಗಬೇಕು. ಮೊದಲು ಲಾಯರ್ ಕೊಟ್ಟರು, ನಂತರ ವೈದ್ಯರು ಕೊಟ್ಟರು ಎಂದು ಗೊಂದಲದ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಆದ್ದರಿಂದ ಸಿಬಿಐ ಅಥವ ಬೇರೆ ಯಾವುದೇ ಕೇಂದ್ರಿಯ ಸಂಸ್ಥೆಗಳಿಂದ ವಾಚ್‌ನ ಮೂಲದ ಬಗ್ಗೆ ತನಿಖೆಯಾಗಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS president HD Kumaraswamy on Wednesday demanded for central agency probe on Karnataka Chief Minister Siddaramaiah Hublot watch issue.
Please Wait while comments are loading...