ಸರ್ಕಾರದ ಅನುಮತಿಯಿಲ್ಲದೆ ಎದ್ದೇಳುತ್ತಿದೆ ಕೋರ್ಟ್ ಕಟ್ಟಡ
ಹುಬ್ಬಳ್ಳಿ, ನವೆಂಬರ್, 07: ನ್ಯಾಯಾಲಯದ ಸಂಕೀರ್ಣ ಕಟ್ಟಡಕ್ಕೆ ಖಾಸಗಿ ಭೂಮಿಯನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ನ್ಯಾಯಾಲಯವು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿದೆ.
ನ್ಯಾಯಾಲಯಕ್ಕೆ ಬಂದಿರುವ ಆರೋಪದ ವಿಚಾರವಾಗಿ ಗುರುವಾರ ಮಾಹಿತಿ ನೀಡಿದ ಅವಿನಾಶ ಕುಲಕರ್ಣಿ, ಮೃತ್ಯುಂಜಯ ಸಿಂಧೂ, ಹುಬ್ಬಳ್ಳಿ ಧಾರವಾಡದಿಂದಲೂ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಪಡೆದಿಲ್ಲ. ಈ ಸಂಕೀರ್ಣದ ಪಕ್ಕದಲ್ಲಿ ಖಾಸಗಿಯವರ ಜಾಗ ಇದ್ದು ಅದನ್ನು ರಸ್ತೆಯಾಗಿ ಪರಿವರ್ತಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.[ಐಐಟಿ ವಿವಾದ: ಮಗು ಚಿವುಟಿ, ತೊಟ್ಟಿಲು ತೂಗುತ್ತಿರುವವರು ಯಾರು?]

ಕಟ್ಟಡ ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಮಗೆ ಬೇಕಾದಂತೆ ನಕ್ಷೆ ತಯಾರಿಸಿ ಹೊಸ ರಸ್ತೆ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಯೋಜಿಸಲಾಗಿದ್ದ 18 ಮೀ. ಅಗಲದ ರಸ್ತೆಯಲ್ಲಿಯೇ ಕಟ್ಟಡ ನಿರ್ಮಿಸಲಾಗುತ್ತಿದೆ. ಆ ರಸ್ತೆಯನ್ನು ಬದಲಾಯಿಸಲು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ವಿದ್ಯಾನಗರ ನಾಗರಿಕರ ಪರವಾಗಿ ಆಪಾದಿಸಿದ್ದಾರೆ.[ನ.11 ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ]
ನ್ಯಾಯಾಲಯ ನಿರ್ಮಾಣಕ್ಕೆ ಹುಬ್ಬಳ್ಳಿ ಧಾರವಾಡ ನಗರ ಯೋಜನೆ ಉಪನಿರ್ದೇಶಕ ಹಿರೇಮಠ ಕೂಡ ಕಟ್ಟಡ ಕಾಮಗಾರಿಗೆ ಪಾಲಿಕೆಯ ಮಂಜೂರಾತಿ ತೆಗೆದುಕೊಂಡಿಲ್ಲ. ಯಾವುದೇ ಅನುಮತಿ ಇಲ್ಲದೇ ಕಟ್ಟಡ ಕಟ್ಟುತ್ತಿರುವುದಲ್ಲದೇ ನಮ್ಮ ಖಾಸಗಿ ಜಮೀನು ಬಿಟ್ಟುಕೊಡಲು ನೋಟಿಸ್ ಕೂಡ ಕೊಡಲಾಗುತ್ತದೆ. ಈ ಕುರಿತು ನ್ಯಾ.ಎಚ್.ಎಲ್.ದತ್ತು ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೆ.ಎಂ.ಶೀಗಿಹಳ್ಳಿ, ಗೋಪಿನಾಥ ಹಾಜರಿದ್ದರು.












Click it and Unblock the Notifications