'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಬೇಡವೆಂದ ಎಚ್.ಎಸ್.ದೊರೆಸ್ವಾಮಿ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 29 : 'ಆಳ್ವಾಸ್ ನುಡಿಸಿರಿ 2017' ಪ್ರಶಸ್ತಿ ಸ್ವೀಕರಿಸಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನಿರಾಕರಿಸಿದ್ದಾರೆ. ಡಿಸೆಂಬರ್ 1ರಿಂದ 3ರ ತನಕ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ.

15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ

ಈ ಕುರಿತು ಎಚ್.ಎಸ್.ದೊರೆಸ್ವಾಮಿ ಅವರು ಮಾತನಾಡಿದ್ದು, 'ಆಳ್ವಾಸ್ ನುಡಿಸಿರಿ ಆಯೋಜಕರ ಜೊತೆಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಪ್ರಶಸ್ತಿ ಸ್ವೀಕಾರ ಮಾಡುವುದಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದು ಹೇಳಿದರು.

HS Doreswamy says no to Alvas Nudisiri 2017 award

ಮೂಡಬಿದಿರೆಯಲ್ಲಿ ಡಿಸೆಂಬರ್ 1ರಿಂದ 3ರ ತನಕ 2017ನೇ ಸಾಲಿನ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ 15 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆ

ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ, ಎಚ್.ಎಸ್.ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ, ವಿಮರ್ಶಕ ಡಾ.ಸಿದ್ದಲಿಂಗ ಪಟ್ಟಣ ಶೆಟ್ಟಿ ಸೇರಿದಂತೆ 15 ಸಾಧಕರಿಗೆ ಈ ಬಾರಿಯ ನುಡಿಸಿರಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

14ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಡಿಸೆಂಬರ್ 1ರಂದು ಚಾಲನೆ ಸಿಗಲಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Freedom fighter H.S. Doreswamy will not participating in the 14th edition of Alva’s Nudisiri 2017 and receiving the award for ideological differences with the organiser.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ