ಭೂಗಳ್ಳರ ಕುರಿತು ಸಿದ್ದರಾಮಯ್ಯಗೆ ದೊರೆಸ್ವಾಮಿ ಪತ್ರ
ಬೆಂಗಳೂರು, ಸೆ. 22 : ಎ.ಟಿ.ರಾಮಸ್ವಾಮಿ ವರದಿಯ ಅನ್ವಯ ಭೂ ಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಭೂಗಳ್ಳರಿಂದ ಭೂಮಿಯನ್ನು ವಶಪಡಿಸಿಕೊಂಡಿದ್ದರೆ, ಅವರ ಹೆಸರು ಮತ್ತು ಜಮೀನಿನ ವಿವರಗಳನ್ನು ಪತ್ರಿಕೆಗಳ ಮೂಲಕ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಏನಿದು ಎ.ಟಿ.ರಾಮಸ್ವಾಮಿ ವರದಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾವಿ ವ್ಯಕ್ತಿಗಳು ಕಬಳಿಕೆ ಮಾಡಿರುವ ಕುರಿತು 2006ರಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು ಎ.ಟಿ.ರಾಮಸ್ವಾಮಿ ನೇತೃತ್ವದ 17 ಮಂದಿಯ ಸಮಿತಿಯನ್ನು ಸ್ಪೀಕರ್ ರಚಿಸಿದ್ದರು. ಎಲ್ಲಾ ಪಕ್ಷಗಳ ಸದಸ್ಯರು ಈ ಸಮಿತಿಯಲ್ಲಿದ್ದರು. ಭೂ ಕಬಳಿಕೆ ಬಗ್ಗೆ ಈ ಸಮಿತಿ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿತ್ತು.

ಪತ್ರದ ಸಾರಾಂಶ : ಎ.ಟಿ. ರಾಮಸ್ವಾಮಿ ವರದಿಯಲ್ಲಿ ಗುರುತಿಸಲಾಗಿರುವ 34 ಸಾವಿರ ಎಕರೆ ಸರ್ಕಾರಿ ಜಮೀನಿನ ಪೈಕಿ ತೆರವುಗೊಳಿಸಲು ಬಾಕಿ ಇರುವುದು ಕೇವಲ ಐದು ಸಾವಿರ ಎಕರೆ ಮಾತ್ರ ಎಂದು ಪ್ರಕಟಣೆ ನೀಡಿರುವ ಸರ್ಕಾರದ ಕ್ರಮವನ್ನು ಪತ್ರದಲ್ಲಿ ಖಂಡಿಸಿರುವ ದೊರೆಸ್ವಾಮಿ ಅವರು, ವರದಿಯಲ್ಲಿ ಪ್ರಸ್ತಾಪಿಸಿರುವ ಭೂಗಳ್ಳರ ವಶದಲ್ಲಿರುವ ಎಲ್ಲ ಭೂಮಿಯನ್ನೂ ಹಿಂಪಡೆದಿದ್ದರೆ ಅವರ ಹೆಸರು, ಹಿಂಪಡೆದ ಜಮೀನಿನ ವಿವರ, ಭೂಹಗರಣ ನಡೆಸಿದವರಿಗೆ ಆಗಿರುವ ಶಿಕ್ಷೆ, ಅವರಿಗೆ ನೆರವಾದ ಅಧಿಕಾರಿಗಳು, ಶಾಸಕರು ಮುಂತಾದ ವಿವರಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಈ ವಿವರಗಳನ್ನು ನೀಡದಿದ್ದರೆ ಈ ಪ್ರಕರಣಗಳನ್ನು ಮುಚ್ಚಿ ಹಾಕಿ, ಸತ್ಯಕ್ಕೆ ದೂರವಾದ ಹೇಳಿಕೆ ನೀಡುತ್ತಿರುವುದಾಗಿ ಜನರು ಭಾವಿಸುತ್ತಾರೆ. ಆದ್ದರಿಂದ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿ ಜನರನ್ನು ಮರುಳುಗೊಳಿಸುವ ಬದಲು, ನಿಜಸ್ಥಿತಿಯನ್ನು ಜನತೆಗೆ ತಿಳಿಸಿ. ಪಟ್ಟಭದ್ರ ಭೂಗಳ್ಳರನ್ನು ರಕ್ಷಿಸುವ ಬದಲು, ಅವರ ಕೃತ್ಯಗಳನ್ನು ಬಯಲುಗೊಳಿಸಿರುವ ಎ.ಟಿ. ರಾಮಸ್ವಾಮಿ ವರದಿ ಜಾರಿಗೊಳಿಸಿ ಎಂದು ದೊರೆಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ. [ದೊರೆಸ್ವಾಮಿ ಧರಣಿಗೆ ಮಣಿದ ಸರ್ಕಾರ]
ಇಂತಹ ವಿವರಗಳನ್ನು ನೀಡದಿದ್ದರೆ ನಿಮ್ಹಾನ್ಸ್‌ಗೆ ಸೇರಿದ ಜಮೀನಿನಲ್ಲಿ ಬಹುಮಹಡಿ ಕಟ್ಟಡ ಕಟ್ಟಿಕೊಂಡವರಿಗೆ, ಕೆರೆಗಳನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲಪಡೆದು, ಬ್ಯಾಂಕಿಗೆ ಪಂಗನಾಮ ಹಾಕಿದವರಿಗೆ, ಕೆರೆ ಅಂಗಳವನ್ನು ಹರಾಜಿಗೆ ಇಟ್ಟ ಬ್ಯಾಂಕ್ ಮುಖ್ಯಸ್ಥರಿಗೆ, ಕೆರೆ ಜಾಗಕ್ಕೆ ಸಾಲ ನೀಡಿದ ಮೂರ್ಖ ಬ್ಯಾಂಕಿಗೆ, ಪ್ರಕರಣದಲ್ಲಿ ಭೂಗಳ್ಳರಿಗೆ ನೆರವಾದ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಿದ್ದೀರಿ ಎಂಬ ಪ್ರಶ್ನೆ ಹುಟ್ಟಿ ಕೊಳ್ಳುತ್ತದೆ ಎಂದು ಪತ್ರದಲ್ಲಿ ದೊರೆಸ್ವಾಮಿ ಉಲ್ಲೇಖಿಸಿದ್ದಾರೆ.
ಇಂತಹ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡುವ ತನಕ ಸತ್ಯಾಗ್ರಹವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ದೊರೆಸ್ವಾಮಿ ಅವರು, ಪತ್ರಕ್ಕೆ ಸರ್ಕಾರ ಕೂಡಲೇ ಉತ್ತರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications