• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇಕಾರರು 2 ಸಾವಿರ ರೂ. ಪರಿಹಾರ ಧನ ಪಡೆಯುವುದು ಹೇಗೆ?

|

ಬೆಂಗಳೂರು, ಜೂನ್ 22 : ಲಾಕ್‍ ಡೌನ್ ಜಾರಿಗೊಳಿಸಿದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೈಮಗ್ಗ ನೇಕಾರರಿಗೆ ನೇಕಾರರ ಸಮ್ಮಾನ ಯೋಜನೆಯಡಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಕರ್ನಾಟಕ ಸರ್ಕಾರ 2,000 ರೂ. ಗಳ ಆರ್ಥಿಕ ನೆರವನ್ನು ನೀಡುತ್ತಿದೆ.

   Galwan Faceoff : ಭಾರತ ಸೇನೆಗೆ ಬಂತು ಸೂಪರ್ ಪವರ್ | Full power For IAF & Army | Oneindia Kannadda

   ಕರ್ನಾಟಕ ಸರ್ಕಾರ ನೀಡುವ ಪರಿಹಾರ ಧನವನ್ನು ಪಡೆಯಲು ಅರ್ಹ ಕೈಮಗ್ಗ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನ್ 26ರ ಬಳಿಕ ಬಂದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ.

   40 ಸಾವಿರ ಆಟೋ, ಟ್ಯಾಕ್ಸಿ ಚಾಲಕರಿಗೆ ಮೊದಲ ಹಂತದಲ್ಲಿ ಪರಿಹಾರ

   ಅರ್ಜಿಗಳನ್ನು ಸಲ್ಲಿಸುವ ಕೈಮಗ್ಗ ನೇಕಾರರು ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿರಬೇಕು. 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯಲ್ಲಿ ಹೆಸರು ನೊಂದಾಯಿಸಿರಬೇಕು. ನೇಕಾರರಿಗೆ 2,000 ರೂ.ಗಳ ಅರ್ಥಿಕ ನೆರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುವುದರಿಂದ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರವನ್ನು ಕಡ್ಡಾಯವಾಗಿ ನೀಡಬೇಕು.

   ನುಡಿದಂತೆ ನಡೆದ ಸಿಎಂ; ಆಟೋ, ಟ್ಯಾಕ್ಸಿ ಚಾಲಕರಿಗೆ ಸಿಕ್ತು 10 ಸಾವಿರ ರೂ.

   ಕೈಮಗ್ಗ ನೇಕಾರರು ಕೈಮಗ್ಗ ನೇಕಾರರ ಸಹಕಾರ ಸಂಘದಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಫಲಾನುಭವಿಯ ಆಧಾರ್ ಕಾರ್ಡನ ಪ್ರತಿ, ರೇಷನ್ ಕಾರ್ಡ್ ಪ್ರತಿ, ಆಧಾರ್ ಲಿಂಕ್ ಮಾಡಿರುವ ವೈಯಕ್ತಿಕ ನೇಕಾರರ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್‍ಪೋರ್ಟ ಸೈಜ್ ಅಳತೆಯ ಫೋಟೊ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.

   ಹೂವು ಬೆಳೆಗಾರರು 25 ಸಾವಿರ ಪರಿಹಾರ ಪಡೆಯುವುದು ಹೇಗೆ?

   ದಾಖಲಾತಿಗಳನ್ನು ಪರಿಶೀಲಿಸಿ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅಳವಡಿಸಲಾಗುತ್ತದೆ. ಪರಿಹಾರ ಧನವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

   English summary
   Karnataka government announced 2000 Rs compensation for the weavers who suffered loss during the time of lock down. How to get compensation?.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X