ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಮೇ 04 : ಕರ್ನಾಟಕ ಸರ್ಕಾರ ಲಾಕ್ ಡೌನ್ ನಿಯಮದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ರೆಡ್ ಝೋನ್ ಹೊರತುಪಡಿಸಿ ಉಳಿದ ಕಡೆ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಆದರೆ, ಅಂತರ ಜಿಲ್ಲೆ, ರಾಜ್ಯಗಳ ಸಂಚಾರಕ್ಕೆ ಷರತ್ತುಗಳನ್ನು ವಿಧಿಸಲಾಗಿದೆ.

ಕೇಂದ್ರ ಗೃಹ ಇಲಾಖೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯತ್ರಾರ್ಥಿಗಳು, ಪ್ರವಾಸಿಗರು ಮಾತ್ರ ಅಂತರರಾಜ್ಯ ಸಂಚಾರವನ್ನು ನಡೆಸಬಹುದಾಗಿದೆ ಎಂದು ಹೇಳಿದೆ. ಬೆಂಗಳೂರಿನಿಂದ ಕಾರ್ಮಮಿಕರನ್ನು ಹೊತ್ತ ಬಸ್‌ಗಳು ಬೇರೆ ಜಿಲ್ಲೆಗಳಿಗೆ ಸಂಚಾರ ನಡೆಸುತ್ತಿವೆ.

ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!

ಕಾರ್ಮಿಕರು ಮಾತ್ರ ಈ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ. ಉಳಿದಂತೆ ಜನರು ಬೇರೆ ಜಿಲ್ಲೆ, ರಾಜ್ಯಕ್ಕೆ ತುರ್ತು ಸಂದರ್ಭದಲ್ಲಿ ಪ್ರಯಾಣ ಮಾಡಬೇಕಾದರೆ ಆನ್‌ಲೈನ್ ಮೂಲಕ ಪಾಸುಗಳನ್ನು ಪಡೆಯಬೇಕಿದೆ. ಪಾಸು ಇಲ್ಲದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ

ಬೆಂಗಳೂರು ನಗರದಲ್ಲಿ ಬೆಳಗ್ಗೆ 7ರಿಂದ ಸಂಜೆ 7ಗಂಟೆಯ ತನಕ ಸಂಚಾರ ನಡೆಸಲು ಯಾವುದೇ ಪಾಸಿನ ಅಗತ್ಯವಿಲ್ಲ. ಆದರೆ, ಸಂಜೆಯ ಮೇಲೆ ತುರ್ತು ವಾಹನ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು

ಒಂದು ಕಡೆಯ ಪಾಸು ಇದು

ಒಂದು ಕಡೆಯ ಪಾಸು ಇದು

ಅಂತರ ಜಿಲ್ಲಾ ಸಂಚಾರಕ್ಕೆ ಪೊಲೀಸರು ನೀಡುವ ಪಾಸ್ ಆನ್‌ಲೈನ್ ಮೂಲಕ ಪಡೆಯಬಹುದು. ಇದು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್ ಆಗಿರುತ್ತದೆ. ವೆಬ್‌ಸೈಟ್‌ಗೆ ಭೇಟಿ ನೀಡುವ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಲಾಗಿನ್ ಆಗಬೇಕು. ಆಗ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ.

ವಿವರಗಳನ್ನು ಭರ್ತಿ ಮಾಡಬೇಕು

ವಿವರಗಳನ್ನು ಭರ್ತಿ ಮಾಡಬೇಕು

ಲಾಗಿನ್ ಆದ ಬಳಿಕ ಜನರು ತಮ್ಮ ಹೆಸರು, ವಿಳಾಸ, ಪಿನ್ ಕೋಡ್, ವಾಹನದ ಸಂಖ್ಯೆ ನಮೂದು ಮಾಡಬೇಕು. ಸರ್ಕಾರಿ ಗುರುತಿನ ಚೀಟಿಯಲ್ಲಿ ಇರುವಂತೆಯೇ ಹೆಸರು ನಮೂದಿಸಬೇಕು ಎಂದು ವೆಬ್ ಸೈಟ್‌ನಲ್ಲಿ ತಿಳಿಸಲಾಗಿದೆ. ವೆಬ್ ಸೈಟ್ ವಿಳಾಸ https://kspclearpass.idp.mygate.com/address

ಮುಂದಿನ ಹಂತ

ಮುಂದಿನ ಹಂತ

ಅಗತ್ಯ ವಿವರಗಳನ್ನು ಸಲ್ಲಿಕೆ ಮಾಡಿದ ಮೇಲೆ ಮುಂದಿನ ಹಂತಕ್ಕೆ ಹೋಗುತ್ತದೆ. ಅಲ್ಲಿಯೂ ಅಗತ್ಯ ವಿವರಗಳನ್ನು ಜನರು ನೀಡಿ ಪಾಸುಗಳನ್ನು ಪಡೆಯಬಹುದಾಗಿದೆ. ಜನರು ಮೊಬೈಲ್ ನಂಬರ್ ನಮೂದಿಸುವುದು ಅಗತ್ಯವಾಗಿದೆ. ಸ್ವಂತ ವಾಹನದಲ್ಲಿ ಹೋಗುವವರು ಮಾತ್ರ ಈ ಪಾಸು ಪಡೆಯಬಹುದು.

ಅಂತರ ರಾಜ್ಯ ಸಂಚಾರ

ಅಂತರ ರಾಜ್ಯ ಸಂಚಾರ

ಅಂತರರಾಜ್ಯಕ್ಕೆ ಸಂಚಾರ ನಡೆಸುವ ಕಾರ್ಮಿಕರ ನೋಂದಣಿಗೆ ಸಹ ವೆಬ್ ಸೈಟ್ ಆರಂಭಿಸಲಾಗಿದೆ. ಅಂತರರಾಜ್ಯಕ್ಕೆ ಸದ್ಯ ಸರ್ಕಾರದಿಂದಲೇ ಬಸ್, ರೈಲಿನ ವ್ಯವಸ್ಥೆ ಮಾಡುತ್ತಿದ್ದು, ಅದರಲ್ಲಿ ಸಂಚಾರವನ್ನು ನಡೆಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಪೊಲೀಸರು ನೀಡುವ ಪಾಸು ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ.

ಕರ್ನಾಟಕ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಹೋಗಲು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ sevasindhu.Karnataka.gov.in/sevasindhu/English

English summary
Karnataka government announced relaxation in lockdown rules. But people should get a pass for the inter-district and inter-state movement. How to get a pass here are the guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X