ಕರ್ನಾಟಕದಲ್ಲಿ ಹೆಸರು ಬದಲಾಯಿಸುವುದು ಹೇಗೆ?
ಹಿರಿಯರು ಪ್ರೀತಿಯಿಂದ ಇಟ್ಟ ಹೆಸರಿನ ಬಗ್ಗೆ ನಮಗೆ ಅಪಾರವಾದ ಪ್ರೀತಿ. ಆದರೂ ಕೆಲವೊಂದು ಬಾರಿ ಅನಿವಾರ್ಯವಾಗಿ ಹೆಸರು ಬದಲಾಯಿಸಿಕೊಳ್ಳಲೇಬೇಕಾಗುತ್ತದೆ. ಯಡಿಯೂರಪ್ಪ ತಮ್ಮ ಹೆಸರು ಬದಲಿಸಿಕೊಳ್ಳಲಿಲ್ಲವಾ? ನಂತರವೇ ಅವರು ಮುಖ್ಯಮಂತ್ರಿಯಾಗಿದ್ದು.
ಹುಟ್ಟಿದಾಗ ನಿಮ್ಮ ಸೋದರತ್ತೆ ಇಂಟರ್ನೆಟ್ಟನ್ನು ಜಾಲಾಡಿ ನಿಮಗೆ ಮುದ್ದಾದ ಹೆಸರಿಟ್ಟಿರುತ್ತಾರೆ, ಆದರೆ ನಶೀಬು ಖುಲಾಯಿಸಿರುವುದಿಲ್ಲ. ಅಥವಾ ಅದೃಷ್ಟಕ್ಕೇನೂ ಕೊರತೆಯಿರುವುದಿಲ್ಲ, ಜೀವನವೂ ಸೂಪರಾಗಿರುತ್ತದೆ, ಆದರೆ ಇಟ್ಟಿರುವ ಹೆಸರು ಸಮಾಜದಲ್ಲಿ ಇರುಸುಮುರುಸು ತಂದಿರುತ್ತದೆ.
ಆಗ ನಿಮಗೆ ಹೊಳೆಯುವುದೇ ನನ್ನ ಹೆಸರು ಬದಲಾಯಿಸಿಕೊಂಡರೆ ಹೇಗೆ? ಕೆಲವರು ಸಂಖ್ಯಾಶಾಸ್ತ್ರದ ಹಿಂದೆಬಿದ್ದು ತಮ್ಮ ನಾಮಧೇಯವನ್ನು ಬದಲಾಯಿಸಿಕೊಳ್ಳುತ್ತಾರೆ. ಇನ್ನು ಮದುವೆಯಾದ ಹಿಂದೂ ಮಹಿಳೆಯರ ಹೆಸರು ಗಂಟುಕಟ್ಟುವಾಗ ಬದಲಾಯಿಸಿರುತ್ತಾನೆ ಗಂಡ.
ಹೆಸರೇ ನಮ್ಮ ಹೆಗ್ಗುರುತು ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಿರಿಯರು ಪ್ರೀತಿಯಿಂದ ಇಟ್ಟ ಹೆಸರಿನ ಬಗ್ಗೆ ನಮಗೆ ಅಪಾರವಾದ ಪ್ರೀತಿ. ಆದರೂ ಕೆಲವೊಂದು ಬಾರಿ ಅನಿವಾರ್ಯವಾಗಿ ಹೆಸರು ಬದಲಾಯಿಸಿಕೊಳ್ಳಲೇಬೇಕಾಗುತ್ತದೆ. ಯಡಿಯೂರಪ್ಪ ತಮ್ಮ ಹೆಸರು ಬದಲಿಸಿಕೊಳ್ಳಲಿಲ್ಲವಾ? ನಂತರವೇ ಅವರು ಮುಖ್ಯಮಂತ್ರಿಯಾಗಿದ್ದು.
ಹೀಗೆ ಹೆಸರು ಬದಲಿಸಿಕೊಳ್ಳಲು ಕಾರಣಗಳು ಹಲವಾರು. ಆದರೆ, ಹೆಸರು ಬದಲಾಯಿಸಿಕೊಳ್ಳುವುದು ಹೇಗೆ? ಕರ್ನಾಟಕದಲ್ಲಿ ಹುಟ್ಟಿದವರ ಅಥವಾ ಇಲ್ಲಿ ನೆಲೆಸಿರುವ ಅನ್ಯ ರಾಜ್ಯದವರಾಗಲಿ ತಮ್ಮ ಹೆಸರನ್ನು ಹೇಗೆ ಬದಲಿಸಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿ ಸರಳವಾದ ವಿವರಗಳಿವೆ. [ಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ]

ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವ ಕರ್ನಾಟಕದಲ್ಲಿ ಇತರ ರಾಜ್ಯಗಳಿಗಿಂತ ಸರಳವಾದ ವಿಧಾನವಿದೆ. ಕರ್ನಾಟಕ ರಾಜ್ಯ ಪತ್ರಾಗಾರ(ಗೆಜೆಟ್) ಇಲಾಖೆಯ ಪ್ರಿಂಟಿಂಗ್, ಸ್ಟೇಷನರಿ ಮತ್ತು ಪಬ್ಲಿಕೇಷನ್ ವಿಭಾಗದಲ್ಲಿ ಬದಲಾಯಿಸಬೇಕಾದ ಹೆಸರನ್ನು ದಾಖಲಿಸಿದರೆ ಆಯಿತು.
ಇತರ ರಾಜ್ಯಗಳಂತೆ ಕರ್ನಾಟಕದಲ್ಲಿ ಬದಲಾಯಿಸಿದ ಹೆಸರಿನ ಜಾಹೀರಾತನ್ನು ಪತ್ರಿಕೆಗಳಲ್ಲಿ ನೀಡುವ ಅಗತ್ಯವಿಲ್ಲ. ಒಟ್ಟು 5 ಸರಳವಾದ ಹಂತಗಳಲ್ಲಿ ಹೆಸರಿನ ಬದಲಾವಣೆ ಮಾಡಬಹುದು. [ಪಾಸ್ ಪೋರ್ಟ್ ಅರ್ಜಿಗೆ ತಂದೆ ಹೆಸರು ಕಡ್ಡಾಯವಲ್ಲ]
ಹಂತ 1) ನಿಗದಿತ ಫಾರ್ಮ್ಯಾಟಿನಲ್ಲಿ ಅಫಿಡವಿಟ್ ಮಾಡಿಸಿಕೊಳ್ಳಬೇಕು. ಇಲ್ಲಿ ಕೂಡ ಮೂರು ವಿಭಾಗಗಳಿವೆ. ಅಪ್ರಾಪ್ತ ವಯಸ್ಕ, ವಯಸ್ಕ ಮತ್ತು ಮದುವೆಯಾದ ನಂತರ ಮಾಡಿಸಬಹುದಾಗ ಹೆಸರಿನ ಬದಲಾವಣೆಗೆ ಅಫಿಡವಿಟ್.
ಅ) ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ

ಮಗನಾಗಲಿ ಮಗಳಾಗಲಿ ಹೆಸರು ಬದಲಾಯಿಸಬೇಕಿದ್ದರೆ ಮೇಲಿನ ಫಾರ್ಮ್ಯಾಟಿನಲ್ಲಿ ಅಫಿಡವಿಟ್ ನೀಡಬೇಕಾಗುತ್ತದೆ. ಅಲ್ಲದೆ, ಇಲ್ಲಿ ಹೆಸರು ಬದಲಾಯಿಸಲು ಕಾರಣವನ್ನು ಕೂಡ ನೀಡಬಹುದು.
ಬ) ಪ್ರಾಪ್ತ ವಯಸ್ಸಿನ ಮಕ್ಕಳಿಗೆ

ನಿಮ್ಮ ಮಕ್ಕಳು 18 ವಯಸ್ಸಿನವರಿಗಿಂತ ಮೇಲಿನವರಾಗಿದ್ದರೆ ಮೇಲಿನ ಫಾರ್ಮ್ಯಾಟಿನಲ್ಲಿ ಅಫಿಡವಿಟ್ ನೀಡಬೇಕಾಗುತ್ತದೆ. ಇಲ್ಲಿ ಕೂಡ ಮಕ್ಕಳ ಹೆಸರು ಬದಲಾಯಿಸಲು ಕಾರಣವನ್ನು ಕೂಡ ನೀಡಬಹುದು.
ಕ) ಮದುವೆಯಾದ ನಂತರ

ಸೀತಾ ಇದ್ದವಳು ಮದುವೆಯ ನಂತರ ಗೀತಾ ಆಗಿರುತ್ತಾಳೆ. ವಾಣಿ ಇದ್ದವಳು ಲಗ್ನದ ನಂತರ ಗಿರ್ವಾಣಿ ಆಗಿರುತ್ತಾಳೆ. ಬ್ಯಾಂಕ್ ಅಥವಾ ಮತ್ತೊಂದು ವಹಿವಾಟಿಗಾಗಿ, ಅಥವಾ ಮತ್ತಾವುದೋ ದಾಖಲೆಗಾಗಿ ಹೆಸರು ಬದಲಾಯಿಸಬೇಕಿದ್ದರೆ ಮೇಲಿನ ಫಾರ್ಮ್ಯಾಟಿನಲ್ಲಿ ಅಫಿಡವಿಟ್ ಸಲ್ಲಿಸಬೇಕು.
ಹಂತ 2) : ಡಿಮ್ಯಾಂಡ್ ಡ್ರಾಫ್ಟ್
COMPILER, GOVERNMENT CENTRAL PRESS, BANGALORE ಹೆಸರಿನಲ್ಲಿ 100 ರುಪಾಯಿಗೆ (ಮೇ 2017ರಂತೆ) ಡಿಮ್ಯಾಂಡ್ ಡ್ರಾಫ್ಟ್ ನೀಡಬೇಕು.
ಹಂತ 3) : ಕೆಳಗಿನ ದಾಖಲೆಗಳ ಫೋಟೋಕಾಪಿ ನೀಡಬೇಕು
1) ಜನನ ಪ್ರಮಾಣಪತ್ರ (ಅಪ್ರಾಪ್ತರ ಹೆಸರು ಬದಲಾವಣೆಗಾಗಿ)
2) ಮದುವೆ ಪ್ರಮಾಣಪತ್ರ (ಮದುವೆಯ ನಂತರದ ಹೆಸರು ಬದಲಾವಣೆಗಾಗಿ)
3) ಶಾಲೆ ಪ್ರಮಾಣಪತ್ರ (ನಿಮ್ಮ ಹೆಸರು ಬದಲಾಯಿಸಬೇಕಿದ್ದರೆ)
4) ಕರ್ನಾಟಕದಲ್ಲಿನ ವಿಳಾಸದ ದಾಖಲೆ
ಹಂತ 4) : ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಿಗೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಪತ್ರ ಬರೆಯಬೇಕು. ಇದಕ್ಕೆ ಯಾವುದೇ ಫಾರ್ಮ್ಯಾಟ್ ಇರುವುದಿಲ್ಲ.
ಹಂತ 5) : ಅರ್ಜಿಯ ಮೂಲ ಪ್ರತಿ, ಡಿಮ್ಯಾಂಡ್ ಡ್ರಾಫ್ಟ್, ಮತ್ತು ಇತರ ದಾಖಲಾತಿಗಳ ಫೋಟೋಕಾಪಿಯನ್ನು ಗೆಜೆಟ್ ಇಲಾಖೆಗೆ ಸಲ್ಲಿಸಬೇಕು.
ಇದರ ವಿಳಾಸ ಹೀಗಿದೆ : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಪ್ರಿಂಟಿಂಗ್, ಸ್ಟೇಷನರಿ ಮತ್ತು ಪಬ್ಲಿಕೇಷನ್ ವಿಭಾಗ, 8ನೇ ಮೈಲಿ, ಆರ್ ವಿ ಕಾಲೇಜು ಪೋಸ್ಟ್, ಮೈಸೂರು ರಸ್ತೆ, ಬೆಂಗಳೂರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಬಳಿ.
ಅರ್ಜಿಯನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸಬಹುದು. ಯಾವುದಕ್ಕೂ 080 28483133 ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ. ಅರ್ಜಿ ಸ್ವೀಕೃತವಾದನಂತರ 15ರಿಂದ20 ದಿನಗಳಲ್ಲಿ ಗೆಜೆಟ್ ನೋಟಿಫಿಕೇಷನ್ ಪತ್ರವನ್ನು ನಿಮ್ಮ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ ತಲುಪಿಸಲಾಗುತ್ತದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನಿಮ್ಮ ಹೆಸರು ಸರಕಾರಿ ಗೆಜೆಟ್ ನಲ್ಲಿ ನೋಂದಾಯಿತವಾಗುವುದಿಲ್ಲ. ಸರಕಾರಿ ಉದ್ಯೋಗಿಗಳ ಹೆಸರು ಮಾತ್ರ ನೋಂದಾಯಿತವಾಗುತ್ತದೆ. ಹೀಗಾಗಿ, ಮುಂದಿನ ವಹಿವಾಟುಗಳಿಗಾಗಿ ಪತ್ರಾಗಾರ ಕಳಿಸುವ ನೋಟಿಫಿಕೇಷನ್ ಪತ್ರವೇ ಸಾಕು.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ












Click it and Unblock the Notifications