ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಹೇಗೆ?

By Mahesh
|
Google Oneindia Kannada News

ಕರ್ನಾಟಕದಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರವು ಮಾನ್ಯತೆ ನೀಡಿದೆ. ಇಲ್ಲಿ ತನಕ ವಿವಿಧ ಜಾತಿ, ಮತಗಳಲ್ಲಿ ಹಂಚಿ ಹೋಗಿರುವ ಲಿಂಗಾಯತ, ವೀರಶೈವ ಸಮುದಾಯದವರು ಇನ್ಮುಂದೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕರೆ ಜಾತಿ ಪ್ರಮಾಣ ಪತ್ರ ಮಾಡಿಸಬೇಕಾಗುತ್ತದೆ.

ಹತ್ತಾರು ಬಾರಿ ಕಚೇರಿಗಳಿಗೆ ಅಲೆದಾಡಿದರೂ ಜಾತಿ ಪ್ರಮಾಣ ಪತ್ರ ಮಾಡಿಸಲಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ. ಜಾತಿ ಪ್ರಮಾಣಪತ್ರಗಳನ್ನು ಪಡೆಯಬೇಕೆಂದರೆ ಲಂಚ ಕೊಡಬೇಕಾಗುತ್ತದೆ. ಸಕಾಲ ಯೋಜನೆ ಕೂಡಾ ಈಗ ಜಾರಿಯಲ್ಲಿಲ್ಲ ಎಂದು ಗೋಳಾಡುವವರಿಗೆ ಇಲ್ಲಿದೆ ಉಪಾಯ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ

ಹಿಂದುಳಿದ ವರ್ಗ(2ಎ,2ಬಿ,3ಎ,3ಬಿ) ಅಭ್ಯರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರ (ನಮೂನೆ ಎಫ್) ಬಳಸಬೇಕಾಗುತ್ತದೆ. ಪ್ರತಿಯೊಂದು ಪ್ರವರ್ಗಕ್ಕೂ ಪ್ರತ್ಯೇಕ ನಮೂನೆಗಳಿರುತ್ತದೆ. ಸೂಕ್ತ ಅರ್ಜಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈಗಾಗಲೇ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಈ ಬಗ್ಗೆ ಹಂತ ಹಂತದ ಮಾಹಿತಿ ಇಲ್ಲಿದೆ.

ನಾಡ ಕಚೇರಿಯಲ್ಲಿ ಪ್ರಮಾಣ ಪತ್ರ

ನಾಡ ಕಚೇರಿಯಲ್ಲಿ ಪ್ರಮಾಣ ಪತ್ರ

ಕರ್ನಾಟಕದಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರಕ್ಕೆ ಮಾನ್ಯತೆ ನೀಡಿದೆ. ಇಲ್ಲಿ ತನಕ ವಿವಿಧ ಜಾತಿ, ಮತಗಳಲ್ಲಿ ಹಂಚಿ ಹೋಗಿರುವ ಲಿಂಗಾಯತ, ವೀರಶೈವ ಸಮುದಾಯದವರು ಇನ್ಮುಂದೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕರೆ ಜಾತಿ ಪ್ರಮಾಣ ಪತ್ರ ಮಾಡಿಸಬೇಕಾಗುತ್ತದೆ.

ನಾಡ ಕಚೇರಿಗಳಿಗೆ ತೆರಳಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈಗಾಗಲೇ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಈ ಬಗ್ಗೆ ಹಂತ ಹಂತದ ಮಾಹಿತಿ ಇಲ್ಲಿದೆ. ಆನ್ ಲೈನ್ ನಲ್ಲಿ ಸುಲಭವಾಗಿ ಪತ್ರ ಗಳಿಸಬಹುದು

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ

* ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಯ್ಕೆ ಮಾಡಿ. ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ [http://www.nadakacheri.karnataka.gov.in/] ಗೆ ಪ್ರವೇಶಿಸಿ.
* ಮುಂದಿನ ಹಂತದಲ್ಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕು.
* ನ್ಯೂ ರಿಕ್ವೆಸ್ಟ್ (New Request) ಮೇಲೆ ಕ್ಲಿಕ್ ಮಾಡಿದ ನಂತರ ಹಲವಾರು ಸೇವೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಕನ್ನಡದಲ್ಲೇ ಪ್ರಮಾಣ ಪತ್ರ ಪಡೆಯಿರಿ

ಕನ್ನಡದಲ್ಲೇ ಪ್ರಮಾಣ ಪತ್ರ ಪಡೆಯಿರಿ

* ನಿಮಗೆ ಜಾತಿ ಪ್ರಮಾಣ ಪತ್ರ ಬೇಕಿದ್ದರೆ caste Certificate ಮೇಲೆ ಕ್ಲಿಕ್ ಮಾಡಿ.

* ನಿಮಗೆ ಕನ್ನಡದಲ್ಲಿ ಬೇಕಿದ್ದರೆ Kannada ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಜಾತಿ ಪ್ರಮಾಣಪತ್ರವನ್ನು ಆಯ್ಕೆ ಮಾಡಿ.
* ಈ ಹಂತದಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಮುಂದಿನ ಹಂತಕ್ಕೆ ಹೋಗಬೇಕು

ಆನ್ ಲೈನ್ ನಲ್ಲೇ ಶುಲ್ಕ ಪಾವತಿಸಿ

ಆನ್ ಲೈನ್ ನಲ್ಲೇ ಶುಲ್ಕ ಪಾವತಿಸಿ

* ಆನ್ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು.
* ನಾಡ ಕಚೇರಿ ವೆಬ್ಸೈಟ್ ಗೆ ಪ್ರವೇಶಿಸುವ ಮೊದಲ ಹಂತದಲ್ಲಿ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಬೇಕು. ಅಂದರೆ Proceed ಮೇಲೆ ಕ್ಲಿಕ್ ಮಾಡಬೇಕು.

English summary
Here are the step by step procedure how to get Caste Certificate in Karnataka. A Caste Certificate is the proof of one's belonging to a particular caste, in case one belongs to any of SC, ST and Backward Class as specified in the Indian Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X