ಎಸ್ಸೆಮ್ಮೆಸ್ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ತಿಳಿಯೋದು ಹೀಗೆ...

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 15: ನಾಳೆಯಿಂದ ಅಂದರೆ ಜೂನ್ 16ರಿಂದ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ನ ಬೆಲೆ ಆಯಾ ದಿನವೇ ಪರಿಷ್ಕರಣೆ ಆಗುತ್ತದೆ.

ತೈಲ ಕಂಪೆನಿಗಳು ಹಾಗೂ ಪೆಟ್ರೋಲ್ ಮಾರಾಟಗಾರರು ಆಯಾ ದಿನದ ತೈಲ ಬೆಲೆ, ಅದೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೇಗೆ ಬದಲಾಗುತ್ತದೋ ಅದರಂತೆ ಪೆಟ್ರೋಲ್ ಬಂಕ್ ಗಳಿಗೆ ಹಾಗೂ ಆ ಮೂಲಕ ಗ್ರಾಹಕರಿಗೆ ತಲುಪಿಸುತ್ತಾರೆ.

How to check for latest Petrol, Diesel price via SMS

ಗ್ರಾಹಕರಿಗೆ ಅನುಕೂಲವಾಗಲಿ, ಎಷ್ಟು ಉತ್ತಮ ಬೆಲೆಗೆ ಒದಗಿಸಲು ಸಾಧ್ಯವೋ ಅಷ್ಟಕ್ಕೆ ನೀಡುವುದಕ್ಕೆ ಮತ್ತು ಬೆಲೆ ನಿಗದಿಯಲ್ಲಿ ಪಾರದರ್ಶಕತೆ ತರುವ ಕಾರಣಕ್ಕೆ ಪ್ರತಿ ದಿನ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ.

ವಾಹನ ಸವಾರರು ನಿರಾಳ, ಜೂನ್ 16ರಂದು ನೋ ಕಿರಿಕಿರಿ!

ಪೆಟ್ರೋಲ್ ಬಂಕ್ ಗಳಿಗೆ ತೆರಳಿದ ವೇಳೆ ಆಯಾ ದಿನದ ಬೆಲೆ ಗ್ರಾಹಕರಿಗೆ ತಿಳಿಯುತ್ತದೆ. ಆದರೆ ಕೆಲ ಅನುಕೂಲ ದಾರಿಗಳಿವೆ, ಆ ಮೂಲಕ ಕೂಡ ಪರಿಷ್ಲೃತ ಬೆಲೆಯನ್ನು ತಿಳಿದುಕೊಳ್ಳಬಹುದು. ಎಸ್ಸೆಮ್ಮೆಸ್ ಹಾಗೂ ಐಒಸಿಎಲ್ ನ ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ದರವನ್ನು ತಿಳಿದುಕೊಳ್ಳಬಹುದು.

ಎಸ್ಸೆಮ್ಮೆಸ್ ಮೂಲಕ ಪೆಟ್ರೋಲ್-ಡೀಸೆಲ್ ದರ ತಿಳಿಯುವುದು ಹೇಗೆ?

* ಪ್ರತಿ ದಿನದ ಪರಿಷ್ಕೃತ ಡೀಸೆಲ್ ಹಾಗೂ ಪೆಟ್ರೋಲ್ ದರವು ಇಂಡಿಯನ್ ಆಯಿಲ್ ನವರ ಮೊಬೈಲ್ ಅಪ್ಲಿಕೇಷನ್ Fuel@IOC ಮೂಲಕ ತಿಳಿಯಬಹುದು.

* ನಿಮ್ಮ ನಗರದಲ್ಲಿಅನ್ವಯವಾಗುವ ದರವನ್ನು ತಿಲಿಯುವುದಕ್ಕೆ RSP< SPACE >ಡೀಲರ್ ಕೋಡ್ ಹಾಕಿ 92249-92249ಗೆ ಎಸ್ಸೆಮ್ಮೆಸ್ ಕಳಿಸಿ.

* ಡೀಲರ್ ಕೋಡ್ ಅನ್ನು ಪೆಟ್ರೋಲ್ ಬಂಕ್ ನ ಆವರಣದಲ್ಲಿ ಪ್ರದರ್ಶಿಸಿರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Customers can find the revised petrol and diesel prices daily when they visit the petrol pumps. However there are more convenient options to find out the revised date. Customers can also find out the dynamic rates via sms and IOCL's mobile app.
Please Wait while comments are loading...