ಇಂಟರ್ನೆಟ್ ಮೂಲಕವೂ ಗ್ಯಾಸ್ ಬುಕ್ ಮಾಡಿಸಬಹುದು
ಬೆಂಗಳೂರು, ನ.11: ಅಡುಗೆ ಅನಿಲ ಬುಲ್ ಮಾಡಿಸುವುದು ಈಗ ಮೊದಲಿಗಿಂತಲೂ ಸುಲಭ/ ಸರಳವಾಗಿದೆ. ಮೊದಲಾಗಿದ್ದರೆ ನಾಲ್ಕಾರು ಸಲ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ, ಪರಿ ಪರಿಯಾಗಿ ಕೇಳಿಕೊಳ್ಳಬೇಕಿತ್ತು. ಆದರೂ ಸಿಲಿಂಡರ್ ಸಕಾಲಕ್ಕೆ ತಲುಪುತ್ತಿರಲಿಲ್ಲ.
ಏಷ್ಟೋ ಬಾರಿ ಕರೆ ಮಾಡಿರುವುದಕ್ಕೂ ದಾಖಲೆ ಸಿಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಮೊಬೈಲ್ ಎಸ್ಎಂಎಸ್ ಮೂಲಕ ಗ್ಯಾಸ್ ಬುಕ್ ಮಾಡಿಸುವುದು ಎಂದಾಯಿತು. ಅದರಿಂದ ಎಸ್ಎಂಎಸ್ ಗೆ ಒಂದೆರಡು ರೂಪಾಯಿ ಖರ್ಚಾದರೂ ಅದು ಸರಿಯಾಗಿ ದಾಖಲೆಯಾಗಿ ನಿಗದಿತ ಅವಧಿಯೊಳಗೆ ನಿಮ್ಮ ಮನೆಯ ಬಾಗಿಲಿಗೆ ಸಿಲಿಂಡರ್ ಬರುತ್ತಿತ್ತು.

Online Refill booking: ಈಗ ತೈಲ ಕಂಪನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ. ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಕಂಪನಿಗಳು ಅಂರ್ಜಾಲದ ಮೂಲಕವೇ ಬುಕ್ಕಿಂಗ್ ಮಾಡಿಸುವ ಸೌಲಭ್ಯವನ್ನೊದಗಿಸುತ್ತಿವೆ.
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಉದಾಹರಣೆಗೆ ಇಂಡೇನ್ ಕಂಪನಿಯ ಗ್ಯಾಸ್ ಬುಕ್ ಮಾಡಿಸಬೇಕು ಎಂದರೆ ಕಂಪನಿಯ ವೆಬ್ ಸೈಟಿಗೆ ಭೇಟಿ ನೀಡಿ. ಮೊದಲು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಅದಾದ ನಂತರ ನಿಮಗೆ ಪ್ರತ್ಯೇಕ ಪಾಸ್ ವರ್ಡ್ ನೀಡಲಾಗುತ್ತದೆ. ಅದೆಲ್ಲಾ ಆಗುತ್ತಿದ್ದಂತೆ ಕಂಪನಿ ವೆಬ್ ಸೈಟಿಗೆ ನೀಡಿ ಯಾವಾಗ ಬೇಕಾದರೂ ಬುಕ್ ಮಾಡಿಸಬಹುದು.
ಕಂಪನಿ ವೆಬ್ ಸೈಟ್ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: indane












Click it and Unblock the Notifications