ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಾಲಯಗಳ ಆನ್‌ಲೈನ್ ಸೇವೆ ಬುಕ್ ಮಾಡುವುದು ಹೇಗೆ?

|
Google Oneindia Kannada News

ಮೈಸೂರಿನ ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ, ಮಲೆಮಹದೇಶ್ವರ ಸೇರಿದಂತೆ ರಾಜ್ಯದ 11 ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸೇವೆ ಮತ್ತು ವಸತಿ ವ್ಯವಸ್ಥೆಯನ್ನು ಆನ್‌ಲೈನ್ ಮೂಲಕ ಬುಕ್ ಮಾಡುವ ಸೇವೆಗೆ ಚಾಲನೆ ನೀಡಲಾಗಿದೆ. ಸೇವೆ ಬುಕ್ ಮಾಡಲು ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು.

ಮಜುರಾಯಿ ಇಲಾಖೆ ಈ ಸೇವೆಗೆ ಚಾಲನೆ ನೀಡಿದ್ದು, ವಾರ್ಷಿಕ 5 ಕೋಟಿಗಿಂತ ಹೆಚ್ಚಿನ ಆದಾಯವಿರುವ ದೇವಾಲಯಗಳನ್ನು ಆನ್‌ಲೈನ್ ವ್ಯವಸ್ಥೆಗೆ ತರಲಾಗಿದೆ. ದೇವಾಲಯಕ್ಕೆ ತೆರಳುವ ಭಕ್ತರು ಬೆಂಗಳೂರು ಒನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ದೇವಾಲಯಗಳಲ್ಲಿರುವ ಸೇವೆ, ದೇವರ ದರ್ಶನ ಮತ್ತು ಕೊಠಡಿಗಳನ್ನು ಆನ್‌ಲೈನ್‌ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.[ಕುಕ್ಕೆ ಸುಬ್ರಮಣ್ಯದ ದೇವಾಲಯದ ಸೇವೆಗೆ ಕ್ಲಿಕ್ಕಿಸಿ]

ರಾಜ್ಯದ ದೇವಾಲಯಗಳು ಮಾತ್ರವಲ್ಲದೇ, ತಿರುಮಲದಲ್ಲಿರುವ ಕರ್ನಾಟಕ ರಾಜ್ಯದ ಛತ್ರದಲ್ಲಿಯೂ ಕೊಠಡಿಗಳನ್ನು ಬುಕ್ ಮಾಡಬಹುದಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,563 ದೇವಾಲಯಗಳಿವೆ. ಈ ಪೈಕಿ 15 ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಊಟ, ವಸತಿ ವ್ಯವಸ್ಥೆ ಇದೆ. ಬೆಂಗಳೂರು ಒನ್ ವಿಳಾಸ

ಯಾವ-ಯಾವ ದೇವಾಲಯಗಳು

ಯಾವ-ಯಾವ ದೇವಾಲಯಗಳು

ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಮಣ್ಯ, ಮಲೆಮಹದೇಶ್ವರ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ, ಕೊಪ್ಪಳದ ಹುಲಿಗೆಮ್ಮ ದೇವಿ, ಸವದತ್ತಿ ರೇಣುಕಾ ಯಲ್ಲಮ್ಮ, ಕಟೀಲು ದುರ್ಗಾಪರಮೇಶ್ವರಿ, ಮಂದಾರ್ತಿ ದುರ್ಗಾಪರಮೇಶ್ವರಿ ಹಾಗೂ ಬೆಂಗಳೂರಿನ ಬನಶಂಕರಿ ದೇವಾಲಯಗಳು.

ಬುಕ್ಕಿಂಗ್ ಮಾಡುವುದು ಹೇಗೆ?

ಬುಕ್ಕಿಂಗ್ ಮಾಡುವುದು ಹೇಗೆ?

ಭಕ್ತಾದಿಗಳು ಬೆಂಗಳೂರು ಒನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ. www.bangaloreone.gov.in ಗೆ ಭೇಟಿನೀಡಿ ನೋಂದಣಿ ಮಾಡಿಕೊಂಡು ಲಾಗಿನ್‌ ಆಗಬೇಕು. ಅಲ್ಲಿ ಲಭ್ಯವಿರುವ ಸೇವೆಗಳ ಪಟ್ಟಿ ಇರುತ್ತದೆ. ಅದರಲ್ಲಿ Book Temple Seva ಮೇಲೆ ಕ್ಲಿಕ್‌ ಮಾಡಿದರೆ ವೆಬ್‌ ಪುಟ ತೆರೆದುಕೊಳ್ಳುತ್ತದೆ. ಕೇಳಿರುವ ಮಾಹಿತಿ, ಯಾವ ದೇವಾಲಯ, ಸೇವೆ ಮುಂತಾದ ಅಂಶಗಳನ್ನು ಭರ್ತಿ ಮಾಡಬೇಕು.

ಮೊಬೈಲ್‌ಗೆ ಸಂದೇಶ ಬರುತ್ತದೆ

ಮೊಬೈಲ್‌ಗೆ ಸಂದೇಶ ಬರುತ್ತದೆ

ಸೇವೆ, ದೇವರ ದರ್ಶನ ಮತ್ತು ವಸತಿ ವ್ಯವಸ್ಥೆಗೆ ನಿಗದಿಪಡಿಸಿದ ಮೊತ್ತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಿದರೆ ರಶೀದಿ ಸಿಗುತ್ತದೆ. ಮೊಬೈಲ್‌ಗೆ ಎಸ್‌ಎಂಎಸ್‌ ಸಹ ಬರುತ್ತದೆ. ಈ ರಸೀದಿಯೊಂದಿಗೆ ನಿಗದಿತ ದಿನ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ಗುರುತಿನ ಚೀಟಿ ಕಡ್ಡಾಯ

ಗುರುತಿನ ಚೀಟಿ ಕಡ್ಡಾಯ

ಆನ್‌ಲೈನ್‌ ಮೂಲಕ ಬುಕ್‌ ಮಾಡಲು ಗುರುತಿನ ಚೀಟಿ ಕಡ್ಡಾಯ. ಒಂದು ಗುರುತಿನ ಚೀಟಿಗೆ ಎರಡು ಕೊಠಡಿಗಳನ್ನು ಕೇವಲ 2 ದಿನಗಳ ಅವಧಿಗೆ ಮಾತ್ರ ಮುಂಗಡ ಕಾಯ್ದಿರಿಸಬಹುದಾಗಿದೆ.

ಪ್ರಸಾದ ಮನೆಗೆ ಬರುತ್ತದೆ

ಪ್ರಸಾದ ಮನೆಗೆ ಬರುತ್ತದೆ

ಆನ್‌ಲೈನ್‌ ಮೂಲಕ ಸೇವೆ ಬುಕ್ ಮಾಡಿ ಅನಿವಾರ್ಯ ಕಾರಣದಿಂದ ನೀವು ತೆರಳಲು ಸಾಧ್ಯವಾಗದಿದ್ದರೆ ಅಂಚೆ ಮೂಲಕ ಮನೆ ಬಾಗಿಲಿಗೆ ಪ್ರಸಾದ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ, 50 ರೂ.ಗಿಂತ ಹೆಚ್ಚು ಮೊತ್ತದ ಸೇವೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.

English summary
Devotees can book rooms, sevas through online in 11 Muzrai Department temples in Karnataka. Devotees can log on to www.bangaloreone.gov.in and book temple services online. How o book sevas here is a guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X