ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸದಾಗಿ ಎಲ್‌ಪಿಜಿ ಸಂಪರ್ಕ ಪಡೆಯುವುದು ಹೇಗೆ?

|
Google Oneindia Kannada News

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಬಳಕೆ ಹೆಚ್ಚಾಗುತ್ತಿದೆ. ಹಾಗೆಯೇ ಹೊಸದಾಗಿ ಎಲ್‌ಪಿಜಿ ಸಂಪರ್ಕ ಪಡೆಯುವುದು ಹೇಗೆ? ಎಂಬ ಪ್ರಶ್ನೆಯ ಹಲವಾರು ಜನರನ್ನು ಕಾಡುತ್ತಿದೆ. ಸರಳವಾಗಿ ಗ್ಯಾಸ್ ಸಂಪರ್ಕ ಪಡೆಯುವ ವಿಧಾನಗಳು ಮತ್ತು ಅಗತ್ಯವಾದ ದಾಖಲೆಗಳ ಬಗ್ಗೆ ವಿವಿರಗಳು ಇಲ್ಲಿವೆ.

ಮೊದಲು ಏಜೆನ್ಸಿ ಪತ್ತೆ ಹಚ್ಚಿ : ಮೊದಲು ನೀವು ವಾಸಿಸುವ ಬಡಾವಣೆಯಲ್ಲಿರುವ ಗ್ಯಾಸ್ ವಿತರಕರ ಏಜೆನ್ಸಿ ಕಚೇರಿಯನ್ನು ಹುಡುಕಿ. ಅಲ್ಲಿ ಹೊಸ ಸಂಪರ್ಕ ಪಡೆಯಲು ಬೇಕಾಗುವ ಅರ್ಜಿಯನ್ನು ಪಡೆಯಿರಿ ಮತ್ತು ಅಗತ್ಯವಿರುವ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಕೆ ಮಾಡಿ.

ನಿಮ್ಮ ಅರ್ಜಿಯನ್ನು ಸ್ವೀಕರಿಸಿದ ಏಜೆನ್ಸಿಯವರು ಅಂದಿನ ದಿನಾಂಕದ ಮತ್ತು ನೋಂದಣಿ ಸಂಖ್ಯೆಯುಳ್ಳ ರಶೀದಿಯನ್ನು ನಿಮಗೆ ನೀಡುತ್ತಾರೆ. ನಿಮ್ಮ ಬುಕ್ಕಿಂಗ್ ನಂಬರ್‌ ಏಜೆನ್ಸಿಗೆ ತಲುಪಿದ ನಂತರ ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ.

LPG

ನೀವು ಪುನಃ ಏಜೆನ್ಸಿಗೆ ಹೋಗುವಾಗ ಏಜೆನ್ಸಿ ಅವರು ನೀಡಿದ ರಶೀದಿ ತೆಗೆದುಕೊಂಡು ಹೋಗಬೇಕು. ಜೊತೆಗೆ ಸಿಲಿಂಡರ್, ರೆಗ್ಯುಲೇಟರ್ ಮತ್ತು ಸ್ಟವ್‌ಗೆ ಮುಂಗಡ ಹಣ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಹಣವನ್ನು ತೆಗೆದುಕೊಂಡು ಹೋಗಿ.

ಯಾವ ದಾಖಲೆಗಳು ಬೇಕು : ನೀವು ಎಲ್‌ಪಿಜಿ ಸಂಪರ್ಕ ಪಡೆಯಲು ವೋಟರ್ ಐಡಿ, ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್, ಪಾನ್ ಕಾರ್ಡ್ ಸೇರಿದಂತೆ ರಾಜ್ಯ ಸರ್ಕಾರ ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ ಇವುಗಳಲ್ಲಿ ಒಂದನ್ನು ಹಾಜರುಪಡಿಸಬೇಕಾಗುತ್ತದೆ.

ವಿಳಾಸ ದೃಡೀಕರಣ : ವೋಟರ್ ಐಡಿ, ರೇಷನ್ ಕಾರ್ಡ್, ವಿದ್ಯುತ್ ಬಿಲ್ ( ಕಳೆದ ಎರಡು ತಿಂಗಳಿನದು ), ದೂರವಾಣಿ ಬಿಲ್ (ಕಳೆದ ಎರಡು ತಿಂಗಳಿನದು ), ಮನೆ ಅಗ್ರಿಮೆಂಟ್ ಪ್ರತಿ ಅಥವ ಆಧಾರ್ ಕಾರ್ಡ್ ಇವುಗಳಲ್ಲಿ ಒಂದನ್ನು ಸಲ್ಲಿಸಬೇಕಾಗುತ್ತದೆ.

ಎಷ್ಟು ಹಣ ಪಾವತಿ ಮಾಡಬೇಕು : ಎಲ್‌ಪಿಜಿ ಖಾಲಿ ಸಿಲಿಂಡರ್ ಪಡೆಯಲು 1450 ರೂ. ಹಣ ಪಾವತಿ ಮಾಡಬೇಕು. ತುಂಬಿದ 14.2 ಕೆಜಿ ಸಿಲಿಂಡರ್ ಬೆಲೆ ಸ್ಥಳೀಯ ದರಕ್ಕೆ ಅನ್ವಯವಾಗಿರುತ್ತದೆ. ಉದಾಹರಣೆಗೆ ದೆಹಲಿ, ಬೆಂಗಳೂರಿನಲ್ಲಿ ಇವುಗಳ ದರದಲ್ಲಿ ವ್ಯತ್ಯಾಸವಿರುತ್ತದೆ.

ರೆಗ್ಯುಲೇಟರ್‌ಗಾಗಿ 150 ರೂ., ಗ್ಯಾಸ್ ಪಾಸ್‌ ಬುಕ್‌ಗಾಗಿ 25 ರೂ., ಗ್ಯಾಸ್ ಸ್ಟಾವ್‌ಗಾಗಿ ಶುಲ್ಕ ಪಾವತಿ ಮಾಡಬೇಕು. ಗ್ಯಾಸ್ ಸ್ಟಾಮ್ ಯಾವ ಮಾದರಿಯದ್ದು ಎಂಬುದರ ಮೇಲೆ ಅದರ ದರ ನಿಗದಿಯಾಗಿರುತ್ತದೆ.

ಎಲ್‌ಪಿಜಿ ಪೂರೈಕೆ ಮಾಡುವ ಮುಖ್ಯ ಕಂಪನಿಗಳು : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಭರತ್ ಗ್ಯಾಸ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ ಪಿ), ಇಂಡಿಯನ್ ಕಾರ್ಪೊರೇಷನ್ ಲಿ.(ಇಂಡಿಯನ್). ನಗರ ಅಥವ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಒಂದು ಕುಟುಂಬ ಮೂರರಲ್ಲಿ ಒಂದು ಗ್ಯಾಸ್ ಸಂಪರ್ಕ ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಯಾವ ಮಾದರಿ ಸಿಲಿಂಡರ್‌ಗಳು : ಗೃಹ ಬಳಕೆಗಾಗಿ 14.5 ಮತ್ತು 5 ಕೆಜಿ ಸಿಲಿಂಡರ್ ಮತ್ತು ವಾಣಿಜ್ಯ ಬಳಕೆಗಾಗಿ 19 ಕೆಜಿ ಮತ್ತು 47.5 ಕೆಜಿ ಸಿಲಿಂಡರ್ ನೀಡಲಾಗುತ್ತದೆ. 14.2 ಕೆಜಿ ಸಿಲಿಂಡರ್ ಜೊತೆಗೆ ಒಂದು ರೆಗ್ಯುಲೇಟರ್, ಪೈಪ್, ಗ್ಯಾಸ್ ಸ್ಟವ್ ಮತ್ತು ಪಾಸ್ ಬುಕ್ ಅನ್ನು ನೀಡಲಾಗುತ್ತದೆ.

ಬುಕ್ ಮಾಡುವುದು ಹೇಗೆ : ಸಿಲಿಂಡರ್ ಖಾಲಿ ಆದರೆ ನಿಮಗೆ ಕೊಟ್ಟಿರುವ ಗ್ರಾಹಕರ ಸಂಖ್ಯೆ ಮೂಲಕ ಹೊಸ ಸಿಲಿಂಡರ್ ಬುಕ್ ಮಾಡಬಹುದು. ಪೋನ್ ಮೂಲಕ ಮತ್ತು ಆನ್‌ಲೈನ್‌ ಮೂಲಕವೂ ಬುಕ್ ಮಾಡಬಹುದಾಗಿದೆ.

English summary
To get a new LPG connection is one of the main concerns for many people. Here is your complete guide to get a new gas connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X