ಡಿಕೆಶಿ ಗೆಲ್ಲಲ್ಲ ಎಂದಿದ್ದ ಬಿಜೆಪಿ, ಡಿಸಿಎಂ ಪಟ್ಟ ಸಿಕ್ಕೇಬಿಡ್ತು!
ಬೆಂಗಳೂರು: ರಾಜಕೀಯವೇ ಹಾಗೆ, ಲೆಕ್ಕಾಚಾರ ಮಕಾಡೆ ಮಲಗಿಸುವ ಶಕ್ತಿ ಮತದಾರ ಪ್ರಭು ಬೆರಳ ತುದಿಯಲ್ಲೇ ಇರುತ್ತೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಗೆಲುವು ಕೂಡ ಬಿಜೆಪಿಗೆ ದೊಡ್ಡ ಪಾಠ ಕಲಿಸಿದೆ. ಡಿಕೆಶಿ ಕನಕಪುರದಲ್ಲಿ ಈ ಬಾರಿ ಗೆಲ್ಲಲ್ಲ ಅಂತಾ ಚಾಲೆಂಜ್ ಮಾಡಿದ್ದ ಬಿಜೆಪಿಗೆ ಶಾಕ್ ಸಿಕ್ಕಿದೆ. ತಮ್ಮ ಅಭ್ಯರ್ಥಿ ಠೇವಣಿ ಉಳಿಸಿಕೊಳ್ಳಲೂ ಆಗದ ಕಮಲ ಪಡೆ ನಾಯಕರು, ಈಗ ಡಿಕೆಶಿ ಡಿಸಿಎಂ ಆಗೋದನ್ನ ಕಣ್ತುಂಬಿಕೊಳ್ಳಬೇಕಿದೆ.
2-3 ತಿಂಗಳ ಹಿಂದಿನ ಮಾತು, ಬಿಜೆಪಿ ನಾಯಕರು ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚಿಸುವ ಹುಮ್ಮಸ್ಸು ಹೊಂದಿದ್ದರು. ಆಗ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಈ ಬಾರಿ ಇವರು ಗೆಲ್ಲಲ್ಲ ಅಂತಾ ಚುನಾವಣೆಗೆ ಮೊದಲೇ ಭವಿಷ್ಯ ಹೇಳಿದ್ರು. ಅದ್ರಲ್ಲೂ ಕೇಂದ್ರದ ಬಿಜೆಪಿ ಲೀಡರ್ಸ್ ವಿರುದ್ಧ ಮಾತಾಡಿದ ಕಾರಣಕ್ಕೆ ಡಿಕೆ ಬ್ರದರ್ಸ್ ಮೊದಲ ಟಾರ್ಗೆಟ್ ಆಗಿದ್ರು ಅನ್ನೋ ಆರೋಪ ಇತ್ತು. ಎಲ್ಲಾ ಆರೋಪ, ಪ್ರತ್ಯಾರೋಪ ಓಡಾಡುವಾಗಲೇ ಡಿ.ಕೆ. ಶಿವಕುಮಾರ್ ಭರ್ಜರಿ ವಿಜಯ ಸಾಧಿಸಿ ಇದೀಗ ಡಿಸಿಎಂ ಪಟ್ಟಕ್ಕೂ ಆಯ್ಕೆಯಾಗಿದ್ದಾರೆ. ಹಾಗಾದರೆ ಡಿಕೆ ಶಿವಕುಮಾರ್‌ಗೆ ಐತಿಹಾಸಿಕ ಗೆಲುವು ಸಿಕ್ಕಿದ್ದು ಹೇಗೆ, ತಿಳಿಯೋಣ ಬನ್ನಿ.

7 ಗೆಲುವಿನ ಸರದಾರನಿಗೆ 8ನೇ ದಿಗ್ವಿಜಯ!
ಕನಕಪುರದಲ್ಲಿ ಸತತ 7 ಗೆಲುವು ಸಾಧಿಸಿದ್ದ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ತೊಡೆತಟ್ಟಿ ನಿಂತಿದ್ದರು. ಹೀಗಾಗಿ ಆರ್.ಅಶೋಕ್ ಅವರಂಥ ಪ್ರಬಲ ಅಭ್ಯರ್ಥಿಯನ್ನ ಈ ಕ್ಷೇತ್ರಕ್ಕೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಒಕ್ಕಲಿಗ ಅಭ್ಯರ್ಥಿ VS ಒಕ್ಕಲಿಗ ಅಭ್ಯರ್ಥಿ ಸ್ಟ್ರಾಟಜಿ ಮೂಲಕ ಡಿಕೆ ಶಿವಕುಮಾರ್‌ಗೆ ಸೋಲಿನ ರುಚಿ ತೋರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು ಬಿಜೆಪಿ ನಾಯಕರು. ಆದರೆ ಆ ಎಲ್ಲಾ ತಂತ್ರ, ರಣತಂತ್ರ ಠುಸ್ ಪಟಾಕಿ ಆಗಿ, ಡಿ.ಕೆ. ಶಿವಕುಮಾರ್ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದರು.
ಹಳೇ ಮೈಸೂರಿನ ಮೇಲೆ ಕಣ್ಣಿಟ್ಟಿದ್ದ ಕಮಲ!
ಕನಕಪುರದಲ್ಲಿ ಕೇವಲ ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವಿಗೆ ಬಿಜೆಪಿ ರಣತಂತ್ರ ರೂಪಿಸಿರಲಿಲ್ಲ. ಇದರ ಜೊತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ತಂತ್ರ ಕೂಡ ಇತ್ತು. ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಿದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ಬರುವ ಲೆಕ್ಕಾಚಾರವಿತ್ತು ಎನ್ನಲಾಗಿತ್ತು. ಹೀಗಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕನಕಪುರದಲ್ಲಿ ಭಾರಿ ಪ್ರಚಾರ ನಡೆಸಿದ್ದರು. ಅಲ್ಲದೆ ರಾಹುಲ್, ಸೋನಿಯಾ ಗಾಂಧಿ ಕುಟುಂಬಕ್ಕೆ ಹೋಲಿಸಿ, ಡಿಕೆಶಿ ಸೋಲಿಸಿ ಎಂದು ಕರೆನೀಡಿದ್ದೂ ಆಗಿತ್ತು. ಆದ್ರೆ ರಿಸಲ್ಟ್ ಬಂದಾಗ? ಎಲ್ಲವೂ ಉಲ್ಟಾ ಆಗೋಗಿತ್ತು!
ಅಣ್ಣನ ಪರ ತಮ್ಮನ ಹೋರಾಟ
ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಉತ್ತಮ ಒಡನಾಟವಿದೆ. ಅಣ್ಣ-ತಮ್ಮನ ಬಾಂಧವ್ಯ ಅಷ್ಟು ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಅಣ್ಣನಿಗೆ ಏನೇ ಕಷ್ಟ ಬಂದರೂ ತಮ್ಮ ಡಿ.ಕೆ. ಸುರೇಶ್ ಬಂಡೆ ರೀತಿ ನಿಲ್ಲುವುದು ಮಾಮೂಲು. ಈ ಬಾರಿ ಕೂಡ ಅಂತಹದ್ದೇ ಸ್ಥಿತಿ ಎದುರಾಗಿತ್ತು. ಡಿಕೆಶಿ ಎದುರು ಅಶೋಕ್ ಸ್ಪರ್ಧಗೆ ಇಳಿದಾಗ ಹಗಲು-ರಾತ್ರಿ ಓಡಾಡಿದ್ದು ಡಿ.ಕೆ. ಸುರೇಶ್. ಯಾಕಂದ್ರೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಹಿನ್ನೆಲೆ ರಾಜ್ಯದ ತುಂಬಾ ಓಡಾಡಿ ಪ್ರಚಾರ ಮಾಡಿದ್ದರು. ಹೀಗಾಗಿ ಕನಕಪುರದಲ್ಲಿ ಡಿ.ಕೆ.ಸುರೇಶ್ ಅಣ್ಣನ ಪರ ಮತ ಕೇಳಿ ಗಟ್ಟಿಯಾಗಿ ನಿಂತರು. ಈಗ ಡಿಕೆ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆಗುತ್ತಿದ್ದಾರೆ.

ಡಿ.ಕೆ. ಸುರೇಶ್‌ಗೆ ಆಳವಾದ ಹಿಡಿತ!
ಕನಕಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನುವ ಜೊತೆಗೆ, ಡಿ.ಕೆ.ಶಿವಕುಮಾರ್‌ಗೆ ಇರುವಷ್ಟೇ ವರ್ಚಸ್ಸು ಡಿ.ಕೆ. ಸುರೇಶ್‌ಗೂ ಇದೆ. ಆ ಪ್ರಕಾರ ನೋಡುವುದಾದರೆ ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಡಿ.ಕೆ.ಶಿವಕುಮಾರ್‌ಗಿಂತ ಡಿ.ಕೆ.ಸುರೇಶ್‌ಗೆ ಹಿಡಿತ ಜಾಸ್ತಿ. ಏಕೆಂದರೆ ಅಣ್ಣ ಶಾಸಕನಾಗಿ, ಮಂತ್ರಿಯಾಗುವ ತನಕ ಡಿಕೆಶಿ ತಮ್ಮ ಡಿ.ಕೆ. ಸುರೇಶ್ ತಳಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದು ಗೊತ್ತೇ ಇದೆ. ಹೀಗಾಗಿ ತಮ್ಮನ ಓಡಾಟ ಕನಕಪುರದಲ್ಲಿ ಅಣ್ಣ ಡಿಕೆಶಿಗೆ ಬಲ ಕೊಟ್ಟಿರುವುದು ನಿಜ. ಈಗ ಮತ್ತೆ ಡಿಕೆ ಶಿವಕುಮಾರ್ ಪ್ರಬಲ ಸ್ಥಾನಮಾನ ಪಡೆಯುತ್ತಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಮಂಕು?
ಕನಕಪುರ ಎಂದರೆ ಒಂದೋ ಜೆಡಿಎಸ್ ಅಥವಾ ಮತ್ತೊಂದು ಕಾಂಗ್ರೆಸ್ ಎಂಬ ಮಟ್ಟಿಗೆ ಜನ ಅಲ್ಲಿ ಫಿಕ್ಸ್ ಆಗಿದ್ಧಾರೆ. ಕಳೆದ ಹಲವು ದಶಕಗಳಿಂದ ಇದು ಕಾಂಗ್ರೆಸ್ ಭದ್ರಕೋಟೆ ಆಗಿದೆ. ಹೀಗಾಗಿ ಕನಕಪುರದಲ್ಲಿ BJP ಪ್ರಯೋಗಕ್ಕೆ ಕೈಹಾಕಿತ್ತು. ದಿಲ್ಲಿಯಿಂದ ಹಳ್ಳಿ ತನಕ ಬಿಜೆಪಿ ವರಿಷ್ಠರು ಕನಕಪುರ ಕೋಟೆ ಗೆಲ್ಲಲು ತಂತ್ರ ರೂಪಿಸಿದ್ದರೂ ವ್ಯರ್ಥ ಆಗೋಯ್ತು. ಅದ್ರಲ್ಲೂ ಸಿಟಿ ರವಿ ಹೊಡದಿದ್ದ ಡೈಲಾಗ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುವ ಜೊತೆಗೆ, ಬಿಜೆಪಿ ನಾಯಕರಿಗೆ ಉಲ್ಟಾ ಪೆಟ್ಟು ಕೊಟ್ಟಿದೆಯಾ? ಎಂಬ ಆರೋಪ ಕೇಳಿಬರುತ್ತಿದೆ.
ಏನ್ ಹೇಳಿದ್ರು ಸಿಟಿ ರವಿ?
ಚುನಾವಣೆಗೆ ಮೊದಲು ಪ್ರಚಾರಕ್ಕೆ ಅಂತಾ ಕನಕಪುರ ಕ್ಷೇತ್ರಕ್ಕೆ ಬಂದಾಗ, ಅಮೇಥಿಯನ್ನೇ ಬಿಟ್ಟಿಲ್ಲ ಇನ್ನು ಕನಕಪುರ ಬಿಡ್ತೀವಾ? ಅಂತಾ ಡೈಲಾಗ್ ಬೇರೆ ಹೊಡೆದಿದ್ದರು. ಆದ್ರೆ ಅದು ಬರೀ ಡೈಲಾಗ್ ಆಗಿಯೇ ಉಳಿದು ಹೋಯ್ತು. ಜೊತೆ ತಮ್ಮ ಕ್ಷೇತ್ರದಲ್ಲೇ ಸಿಟಿ ರವಿ ಈ ಬಾರಿ ಗೆಲ್ಲಲು ಆಗಲೇ ಇಲ್ಲ, ಸತತವಾಗಿ ಗೆದ್ದಿದ್ದ ಕ್ಷೇತ್ರ ಸಿಟಿ ರವಿ ಕೈಬಿಟ್ಟು ಹೋಗಿದೆ. ಒಂದು ಕಾಲದ ಸಿಟಿ ರವಿ ಆಪ್ತ ವ್ಯಕ್ತಿಯೇ ಸಿಟಿ ರವಿಗೆ ಈ ಬಾರಿ ಸೋಲನ್ನ ಕರುಣಿಸಿದ್ದರು.
ಕನಕಪುರ ಬಿಟ್ಟು ಕದಲದ ಅಶೋಕ್!
ಆರ್.ಅಶೋಕ್ ದಿಲ್ಲಿ ವರಿಷ್ಠರ ಮಾತಿಗೆ ಅದೆಷ್ಟು ಬೆಲೆ ಕೊಟ್ಟಿದ್ದರು ಎಂದರೆ, ತಮ್ಮ ತವರು ಪದ್ಮನಾಭ ಕ್ಷೇತ್ರದ ಕಡೆ ಅಷ್ಟಾಗಿ ಗಮನ ಹರಿಸದೆ ಸಂಪೂರ್ಣವಾಗಿ ಕನಕಪುರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಕನಕಪುರದ ಪ್ರತಿ ಗಲ್ಲಿ ಸುತ್ತಿ ಮತ ಕೇಳಿದ್ದರು. ಆದರೆ ಅದರಲ್ಲವೂ ಗೆಲುವು ತಂದುಕೊಡಲಿಲ್ಲ, ಬದಲಾಗಿ ಮತ್ತೊಮ್ಮೆ ಡಿಕೆಶಿ ಭರ್ಜರಿ ಗೆಲುವು ಸಾಧಿಸಿ ಇದೀಗ ಕರ್ನಾಟಕ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆಯುತ್ತಿದ್ದಾರೆ. ಆದರೆ ಪ್ರತಿ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ BJP ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.
ಡಿಕೆ ಶಿವಕುಮಾರ್ ಕ್ಷೇತ್ರ ಮಾತ್ರವಲ್ಲ, ಬಿಜೆಪಿ ಈ ಬಾರಿ ಟಾರ್ಗೆಟ್ ಮಾಡಿದ್ದ ಬಹುತೇಕ ಕ್ಷೇತ್ರಗಳಲ್ಲಿ ಇದೇ ರೀತಿ ಭೀಕರ ಸೋಲು ಎದುರಾಗಿದೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಸೋಲು. ಮತ್ತೊಂದ್ಕಡೆ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ವಿರುದ್ಧ ಬಿಜೆಪಿಯ ಅಭ್ಯರ್ಥಿ ಸೋಲು. ಹೀಗೆ ಹಲವೆಡೆ ಬಿಜೆಪಿ ಟಾರ್ಗೆಟ್ ರೀಚ್ ಮಾಡಿಲ್ಲ. ಈಗ ಹೊಸ ಹೊಸ ಸವಾಲುಗಳು ಬಿಜೆಪಿ ವರಿಷ್ಠರಿಗೆ ಎದುರಾಗಿದ್ದು, ಸೋಲಿನ ಬಳಿಕ ಮತ್ತೆ ಹೇಗೆ ಕಂಬ್ಯಾಕ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications