ಚಿಕ್ಕಮಗಳೂರು ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರು

Subscribe to Oneindia Kannada

ಬೆಂಗಳೂರು, ಜನವರಿ , 15: ಚಿಕ್ಕಮಗಳೂರು ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರ ನೇಮಕವಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಗೃಹ ಸಚಿವರಾಗಿರುವ ಡಾ. ಜಿ ಪರಮೇಶ್ವರ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿದ್ದ ಸಚಿವ ಅಭಯಚಂದ್ರ ಜೈನ್ ಜಾಗಕ್ಕೆ ಇದೀಗ ಪರಮೇಶ್ವರ ನೇಮಕವಾಗಿದೆ.[ಡಾ. ಜಿ ಪರಮೇಶ್ವರ ಪರಿಚಯ]

congress

ಪರಮೇಶ್ವರ ಅವರು ಸಿದ್ದು ಸಂಪುಟಕ್ಕೆ ಸೇರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸ್ಥಾನ ಕೇಳಿದ್ದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಬಳಿ ತುಮಕೂರು ಉಸ್ತುವಾರಿ ಇರುವುದರಿಂದ ಅದನ್ನು ಬದಲಾವಣೆ ಮಾಡಲಾಗಿಲ್ಲ.[ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಜಯಭೇರಿ]

ಅಭಯಚಂದ್ರ ಜೈನ್ ಅವರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ತಮಗೆ ಬೇಡ ಎಂದಿದ್ದರು. ತುಮಕೂರು ಜಿಲ್ಲೆಯವರಾದ ಪರಮೇಶ್ವರ ತಮಗೆ ತವರು ಜಿಲ್ಲೆಯ ಹೊಣೆ ನೀಡುವಂತೆ ಕೇಳಿಕೊಂಡಿದ್ದರು. ಸಚಿವ ಸಂಪುಟ ವಿಸ್ತರಣೆಯಾದ ತಿಂಗಳುಗಳ ಬಳಿಕ ಪರಮೇಶ್ವರ ಅವರಿಗೆ ಚಿಕ್ಕಮಗಳೂರು ಹೊಣೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Home minister Dr.G.Parameshwara gets chikkamagaluru district in charge responsibility CM Siddaramaiah told on Thursday.
Please Wait while comments are loading...