ವಿಡಿಯೋ; ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಜನವರಿ 17; ತೀರ್ಥಹಳ್ಳಿ ಕ್ಷೇತ್ರದ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಬಹುಕಾಲದ ಸಂಕಲ್ಪವನ್ನು ಸಾಕಾರಗೊಳಿಸಿಕೊಂಡರು. ರಾಜಕೀಯ ಜಂಜಾಟದ ನಡುವೆ ದೇವರ ದರ್ಶನ ಪಡೆದರು.

ಆರಗ ಜ್ಞಾನೇಂದ್ರ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇರುಮುಡಿ ಹೊತ್ತು ದೇವಾಲಯಕ್ಕೆ ಭೇಟಿ ನೀಡುವ ವಿಡಿಯೋ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಸಚಿವರು, ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗುತ್ತಿದೆ' ಎಂದು ಹೇಳಿದ್ದಾರೆ.

Home Minister Araga Jnanendra Travel To Sabarimala Darshan With Irumudi

'ನಿನ್ನೆ ನನ್ನ ಕೆಲವು ಮಿತ್ರರೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲಾಯಿತು. ಸ್ವಾಮಿಯೇ ಶರಣಂ ಅಯ್ಯಪ್ಪ!' ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಕೇರಳದ ಶಬರಿಮಲೆ ದೇವಾಲಯಕ್ಕೆ ಕೋಟ್ಯಾಂತರ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಮಕರ ಜ್ಯೋತಿ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಭಾನುವಾರ ಈ ಬಾರಿಯ ಮಕರವಿಳಕ್ಕು ನಡೆದಿದ್ದು, ಲಕ್ಷಾಂಕತರ ಜನರು ಅಯ್ಯಪ್ಪನ ದರ್ಶನ ಪಡೆದರು. ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಶಬರಿಮಲೆಗೆ ಭೇಟಿ ನೀಡಿದ್ದರು.

ಶನಿವಾರ ಸಂಕ್ರಾಂತಿ ಪ್ರಯುಕ್ತ ಶಬರಿಮಲೆಯಲ್ಲಿ ವಿಶೇಷ ಪೂಜೆಗಳು ನಡೆದಿದ್ದವು. ಭಾನುವಾರ ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ, ಆರತಿ ಮಾಡಲಾಗಿತ್ತು. ಬಳಿಕ ಮಕರ ಜ್ಯೋತಿ ದರ್ಶನವಾಗಿತ್ತು.

ಶಬರಿಮಲೆ ದರ್ಶನಕ್ಕೆ ಗಣ್ಯರು ಹೋಗುತ್ತಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿವರ್ಷ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.

ಭಕ್ತರು ಸಂಕ್ರಾಂತಿ ಸಂದರ್ಭದಲ್ಲಿ ಅಯ್ಯಪ್ಪ ಮಾಲೆ ಧರಿಸಿ 18 ದಿನಗಳ ಕಠಿಣ ವೃತ ಆಚರಣೆ ಮಾಡಿ, ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+