ಎಚ್ಎಂಪಿವಿ ವೈರಸ್‌: ಮತ್ತೆ ಬರಲಿದೆಯೇ ಕಡ್ಡಾಯ ಮಾಸ್ಕ್‌ ನೀತಿ ?

ಕೋವಿಡ್ ಭಯಾನಕ ವೈರಸ್‌ ಸೃಷ್ಟಿ ಮಾಡಿದ ಅವಾಂತರ, ಸಾವು - ನೋವಿನ ಸಂಕಷ್ಟಗಳಿಂದ ಈಗಷ್ಟೇ ಜಗತ್ತು ಚೇತರಿಸಿಕೊಂಡಿದೆ. 2019 ಎನ್ನುವ ವರ್ಷವನ್ನು ನೆನಪಿಸಿಕೊಂಡರೆ ಇಂದಿಗೂ ಜನ ಬೆಚ್ಚಿ ಬೀಳುವುದಿದೆ. ಕೋವಿಡ್ ತಂದ ಸಂಕಷ್ಟಗಳಿಂದ ಜಗತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. 2019ರ ನಂತರ 2021ರ ವರೆಗೆ ಕೋವಿಡ್ ಆತಂಕದಲ್ಲೇ ಜಗತ್ತು ಕಾಲ ದೂಡಿತ್ತು. ಈಗ ಎಚ್‌ಎಂಪಿವಿ ವೈರಸ್‌ ಸೋಂಕಿನ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ಸೋಂಕು ದೃಢಪಟ್ಟಿದ್ದು. ಕೋವಿಡ್ ಕಾಲದಲ್ಲಿ ಇದ್ದ ಕಡ್ಡಾಯ ಮಾಸ್ಕ್‌ನಂತಹ ನೀತಿಗಳು ಮರು ಜಾರಿಯಾಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಆರೋಗ್ಯ ಇಲಾಖೆ ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ದೇಶದಲ್ಲಿ ಕೋವಿಡ್ ಸಮಯದಲ್ಲಿ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿತ್ತು. ಅದರಲ್ಲಿ ಕಡ್ಡಾಯ ಮಾಸ್ಕ್‌ ನೀತಿ ಸಹ ಪ್ರಮುಖವಾಗಿದೆ. ದೇಶದಲ್ಲಿ ಇದೀಗ ಮತ್ತೆ ಎಚ್‌ಎಂಪಿವಿ ವೈರಸ್‌ ರೂಪದಲ್ಲಿ ಕೋವಿಡ್ ಮಹಾಮಾರಿ ಬರಲಿದೆಯೇ ಎನ್ನುವ ಆತಂಕ ಜನರಲ್ಲಿ ಶುರುವಾಗುತ್ತಿದೆ. ಚೀನಾದಲ್ಲಿ ಈ ವೈರಸ್‌ ಪ್ರಭಾವ ತೀವ್ರವಾಗಿದೆ ಎನ್ನುವ ಸುದ್ದಿಗಳು ಬಂದಿದ್ದವು.ಇದಾದ ಮೇಲೆ ಭಾರತ ಸರ್ಕಾರ ಸಹ ಈ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿತ್ತು. ದೇಶದಲ್ಲಿ ಕಟ್ಟೆಚ್ಚರ ಹಾಗೂ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿತ್ತು.

HMPV Virus Will Mask-Wearing Policy Come Back

ಸಾಮಾನ್ಯವಾಗಿ ಕೋವಿಡ್‌ ಸಮಯದಲ್ಲಿ ಕೋವಿಡ್‌ ವೈರಸ್‌ ರೂಪಾಂತರ ಆಗುವುದಿದೆ. ವಿಶ್ವದಲ್ಲಿ ಕೋವಿಡ್‌ ಸೋಂಕು ವರದಿಯಾದ ಮೇಲೆ ಕೋವಿಡ್‌ ಹಲವು ರೂಪಾಂತರ ಪಡೆದುಕೊಂಡಿದೆ. ಈಗ ಬಂದಿರುವುದು ಎಚ್‌ಎಂಪಿವಿ ವೈರಸ್‌ ಅಥವಾ ಚೀನಾದ ತಳಿಯಾ ಎನ್ನುವುದು ಇನ್ನಷ್ಟೇ ದೃಢಪಡಬೇಕಿದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು, ಜನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಮತ್ತೆ ಬರಲಿದೆ ಮಾಸ್ಕ್‌: ಕೋವಿಡ್ ಸಮಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕಡ್ಡಾಯ ಮಾಸ್ಕ್‌ ನೀತಿ ಜಾರಿ ಮಾಡಲಾಗಿತ್ತು. ಕೋವಿಡ್ ಹಾಗೂ ಮಾಸ್ಕ್‌ ಎರಡನ್ನೂ ನೆನಪಿಸಿಕೊಂಡರೆ ಜಗತ್ತು ಈಗಲೂ ಬೆಚ್ಚಿ ಬೀಳುತ್ತೆ. ಆದರೆ, ಕೋವಿಡ್‌ನಂತಹ ಪ್ರಭಾವವನ್ನು ಈಗ ಬಂದಿರುವ ಎಚ್‌ಎಂಪಿವಿ ವೈರಸ್‌ ಬೀರುವುದಿಲ್ಲ ಎಂದೇ ಹೇಳಲಾಗುತ್ತಿದೆ.

ಇನ್ನು ಬೆಂಗಳೂರಿನಲ್ಲಿ ಮೊದಲ ಪ್ರಕರಣ ದೃಢಪಟ್ಟಿರುವುದರಿಂದ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅಗತ್ಯ ಮುಂಜಾಗ್ರಾತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಕೆಮ್ಮು, ಜ್ವರ ಹಾಗೂ ಕಫ ಇರುವವರು ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸುವಾಗ ಮಾಸ್ಕ್‌ ಧರಿಸಬೇಕು ಎಂದು ಔಪಚಾರಿಕವಾಗಿ ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಒಂದೊಮ್ಮೆ ಸೋಂಕು ಹೆಚ್ಚಳವಾದರೆ. ಮಾಸ್ಕ್‌ ಧರಿಸುವುದು ಕಡ್ಡಾಯವಾಗುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮದಿಂದ ಸಾರ್ವಜನಿಕ ಸಮೂಹ ಸಾರಿಗೆಗಳಾದ ಬಸ್‌, ಟ್ರೈನ್‌ ಹಾಗೂ ಜನನಿಬಿಡಿ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್‌ ಧರಿಸುವುದು ಉತ್ತಮವಾಗಿದೆ.

ಈ ಸೋಂಕು ನಿಯಂತ್ರಣ ಅಥವಾ ಬಂದರೆ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+