HMPV Virus: ಬೆಂಗಳೂರು ಮಗುವಿನಲ್ಲಿ ಪತ್ತೆ ಆದ HMPV ವೈರಸ್ ಲಕ್ಷಣಗಳು ಏನು? ಸುರಕ್ಷತೆ ವಹಿಸುವುದು ಹೇಗೆ?
ಬೆಂಗಳೂರು, ಜನವರಿ 06: ಕೋವಿಡ್ ಬಳಿಕ ಚೀನಾದಲ್ಲಿ ಸದ್ದು ಮಾಡಿದ್ದ ಎಚ್‌ಎಂಪಿವಿ ವೈರಸ್ (HMPV Viras) ಇದೀಗ ಭಾರತದಲ್ಲಿ ಮೊದಲ ಪ್ರಕರಣ ಅದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆ ಆಗಿದೆ. ಎಂಟು ತಿಂಗಳ ಮಗುವಿನಲ್ಲಿ ಈ ವೈರಸ್ ದೃಢವಾಗಿದೆ. ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಜನರಿಗೆ ಆತಂಕ ಬೇಡ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ಈ ವೈರಸ್ ಲಕ್ಷಣಗಳು ಏನು? ಏನೆಲ್ಲ ಆರೋಗ್ಯದ ಮೇಲೆ ಪರಿಣಾಮ ಭೀರುತ್ತದೆ? ಏನು ಮಾಡಬೇಕು, ಏನು ಮಾಡಬಾರದು? ಎಂಬುದರ ವಿವರ ಇಲ್ಲಿದೆ.
ಅರ್ಧ ದಶಕದ ಹಿಂದೆ ಕೊರೋನ ಹುಟ್ಟಿಗೆ ಕಾರಣವಾಗಿದ್ದ ಚೀನಾದ ಅದೇ ಪ್ರದೇಶದಲ್ಲಿಯೇ (ಬೀಜಿಂಗ್) ಮತ್ತೊಂದು ಭೀಕರ ವೈರಸ್ ಹುಟ್ಟಿಕೊಂಡಿದೆ. ಅದೇ HMPV ವೈರಸ್. ಇದು ಅಲ್ಲಿಂದ ಹುಟ್ಟಿ ಕೋವಿಡ್ ನಂತರ ಭಾರತಕ್ಕೆ ಹೆಜ್ಜೆ ಇಟ್ಟಿದೆ. ಕೋವಿಡ್ ಮೊದಲ ಪ್ರಕರಣ ಬೆಂಗಳೂರಿನಲ್ಲೇ ವರದಿ ಆಗಿತ್ತು. ಅದಾದ ಬಳಿಕ ಎಚ್‌ಎಂಪಿವಿ ವೈರಸ್ ಸಹ ಬೆಂಗಳೂರಿನ ಮಗುವಿನಲ್ಲಿ ಕಾಣಿಸಿಕೊಂಡಿದೆ. ಇದು ಮಹಿಳೆ, ಮಕ್ಕಳಲ್ಲಿ ಆತಂಕ ಮೂಡಿಸಿದೆ.

ಹೊಸ ವರ್ಷಕ್ಕೆ ರಾಜ್ಯಕ್ಕೆ ಹೊಸ ವೈರಸ್ ಪ್ರವೇಶವಾಗಿದೆ. ಈ ವೈರಸ್ ಪೂರ್ಣ ಹೆಸರು 'ಹ್ಯೂಮನ್ ಮೆಟಾನುಮ್ಯೊವೈರಸ್-HMPV' ಆಗಿದೆ. ಈ ವೈರಸ್ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅನಾರೋಗ್ಯ ತಂಡೊಡ್ಡುವ ವೈರಸ್ ಎಂದು ತಜ್ಞರು ತಿಳಿಸಿದ್ದಾರೆ.
HMPV ವೈರಲ್ ಲಕ್ಷಗಣಗಳು ಹೀಗಿವೆ
ಈ ವೈರಸ್ ಬಂದಾಗ ನಿರಂತರ ಕೆಮ್ಮು, ಸೀನುವುದು ಹೆಚ್ಚಾಗುತ್ತದೆ. ವೈದ್ಯರ ಬಳಿ ಹೋಗದೇ ನಿರ್ಲಕ್ಷಿಸಿದಲ್ಲಿ ಒಂದೇ ದಿನಕ್ಕೆ ಜ್ವರ, ನೆಗಡಿ, ಮೂಗು ಕಟ್ಟುವುದು, ಉಬ್ಬಸ ಉಂಟಾಗುತ್ತದೆ. ಇದು ನಿಮ್ಮನ್ನು ಮಲಗಲು ಬಿಡದಂತೆ ಬಾಧಿಸಲೂಬಹುದು. ಇದು ಶ್ಲಾಸಕೋಶಕ್ಕೆ ಸಂಬಂಧಿ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗೇಯೇ ಬಿಟ್ಟರೆ ನ್ಯುಮೋನಿಯಾಗೆ ಪರಿವರ್ತನೆಗೊಳ್ಳುವ ಸಂಭವವು ಇರುತ್ತದೆ.
ಆಯಾಸ ತೀವ್ರವಾದ ಪ್ರಕರಣಗಳಲ್ಲಿ, ಇದು ಬ್ರಾಂಕಿಯೋಲೈಟಿಸ್, ನ್ಯುಮೋನಿಯಾ, ಅಥವಾ ಆಸ್ತಮಾ ಹೆಚ್ಚಿಸುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಒಂದು ವೇಳೆ ಇದು ವಯಸ್ಕರಿಗೆ, ಹಿರಿಯರಿಗೆ ಬಂದಲ್ಲಿ, ಅವರಿಗೆ ಶ್ವಾಸಕೋಶ ಸಂಬಂಧ ಕಾಯಿಲೆಗಳು ಇದ್ದರೆ, ಮತ್ತಷ್ಟು ಅನರೋಗ್ಯ ಎದುರಾಗುವ ಸಾಧ್ಯತೆ ಇದೆ. ರೋಗಿಗೆ ಈ ಮೇಲಿನ ಎಲ್ಲ ಲಕ್ಷಣಗಳ ತೀವ್ರ ಆಧಾರದಲ್ಲಿ ಎಷ್ಟು ದಿನ ನಿಮ್ಮನ್ನು ಕಾಡಬಹುದು ಎಂದು ಹೇಳಬಹುದು.
HMPV ವೈರಸ್: ಏನು ಮಾಡಬಾರದು
* ಈ ವೈರಸ್ ಸೋಂಕಿತರ ಟವೆಲ್, ಬಟ್ಟೆ, ಬಳಸಿಟ್ಟ ಇನ್ನಿತರ ವಸ್ತುಗಳನ್ನು ಬೇರೆ ಯವರು ಬಳಸಬಾರದು.
* ಪದೇ ಪದೇ ಕೈ, ಕಣ್ಣು, ಮೂಗು, ಮುಖ ಮುಟ್ಟಿಕೊಳ್ಳಬಾರದು.
* ಆಗಾಗ ಕೈ, ಮುಖ ತೊಳೆದುಕೊಳ್ಳಬೇಕು, ಶುಚಿಯಾಗಿರಬೇಕು.
* ಒಮ್ಮೆ ಬಳಸಿದ ಟಿಶ್ಯೂ ಪೇಪರ್, ಕರವಸ್ತ್ರ ಮರುಬಳಿಕೆ ಮಾಡಬಾರದು.
* ವೈರಸ್ ಸಂಪರ್ಕಿತರಿಂದ ಅಂತರ ಕಾಯ್ದುಕೊಳ್ಳಬೇಕು.
HMPV ವೈರಸ್: ಏನು ಮಾಡಬೇಕು
* ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ನೀವೆ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ
* ಈ ಮೇಲಿನ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು.
* ಸ್ವಯಂ ಆಗಿ ನೀವೆ ಮಾತ್ರೆ, ಔಷಧಿ ಪಡೆಯದೇ ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು.
* ಶುಚಿ ಕರವಸ್ತ್ರ, ಬಟ್ಟೆ ಬಳಸುವುದ ಜೊತೆಗೆ ಸ್ವತಃ ನೀವು ಶುಚಿಯಾಗಿರಬೇಕು.
* ಮಕ್ಕಳಲ್ಲಿ, ಮಹಿಳೆ, ವೃದ್ಧರಲ್ಲಿ ಕೆಮ್ಮು, ನೆಗಡಿ, ಜ್ವರ, ಉಬ್ಬಸ, ಉಸಿರಾಟದಂತಹ ತೊಂದರೆ ಕಾಣಸಿಕೊಂಡಲ್ಲಿ ಆತಂಕ ಪಡದೇ ಕೂಡಲೇ ವೈದ್ಯರ ನೆರವು ಪಡೆಯಬೇಕು.












Click it and Unblock the Notifications