ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣಗೆ ಕೊಲೆ ಬೆದರಿಕೆ

Posted By:
Subscribe to Oneindia Kannada

ಬೆಂಗಳೂರು, ಮೇ 19 : ಕಾಂಗ್ರೆಸ್ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ತಮಗೆ ಕರೆ ಮಾಡಿ 10 ಕೋಟಿ ಹಣ ಕೇಳಿದ್ದಾನೆ ಎಂದು ರೇವಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿದ್ದಾಗ ಅನಾಮಧೇಯ ವ್ಯಕ್ತಿಯಿಂದ ರೇವಣ್ಣ ಅವರಿಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿದ್ದು, 10 ಕೋಟಿ ರೂ. ಹಣ ನೀಡುವಂತೆ ರೇವಣ್ಣ ಅವರಿಗೆ ಬೆದರಿಕೆ ಹಾಕಿದ್ದಾನೆ. [ಸಚಿವರಿಗೆ ಬಂದಿದ್ದು ಹುಸಿ ಬೆದರಿಕೆ ಕರೆಯಲ್ಲ]

hm revanna

ಜೀವ ಬೆದರಿಕೆ ಹಾಕಿರುವ ರವಿ ಪೂಜಾರಿ ಹಣ ಕೊಡದಿದ್ದರೆ ಮಗನ ಸಿನಿಮಾ ಬಿಡುಗಡೆಗೂ ಅಡ್ಡಿ ಪಡಿಸುವುದಾಗಿ ಹೇಳಿದ್ದಾನೆ. ರೇವಣ್ಣ ಅವರು ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದು, ಸೂಕ್ತ ರಕ್ಷಣೆ ನೀಡಬೇಕು ಮತ್ತು ದೂರವಾಣಿ ಕರೆ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. [ಹಿಂದೂ ವಿರೋಧಿಗಳನ್ನು ಕೊಲ್ಲದೆ ಬಿಡಲಾರೆ : ರವಿ ಪೂಜಾರಿ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರ ನಾಯಕರ ಪೈಕಿ ಎಚ್.ಎಂ.ರೇವಣ್ಣ ಅವರು ಒಬ್ಬರು. ರಾಜಕೀಯದ ಜೊತೆ ಚಿತ್ರ ನಿರ್ಮಾಣದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ರೇವಣ್ಣ ಪುತ್ರ ಅನೂಪ್ ನಾಯಕರಾಗಿರುವ ಚೊಚ್ಚಲ ಚಿತ್ರ 'ಲಕ್ಷ್ಮಣ' ತೆರೆಗೆ ಬರಲು ಸಿದ್ಧವಾಗಿದೆ. [ಆರ್.ಚಂದ್ರು ನಿರ್ದೇಶನದಲ್ಲಿ ರೇವಣ್ಣ ಪುತ್ರ ಅನೂಪ್ ಎಂಟ್ರಿ]

ಹಿಂದೆಯೂ ಕರೆ ಬಂದಿತ್ತು : ಕೆಲವು ತಿಂಗಳ ಹಿಂದೆ ಮೂಡಬಿದಿರೆ ಭಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ನಡೆದಾಗಲು ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಬೆದರಿಕೆ ಕರೆ ಬಂದಿತ್ತು. ಭೂಗತ ಪಾತಕಿ ರವಿ ಪೂಜಾರಿ ತಮಗೆ ಕರೆ ಮಾಡಿದ್ದ ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮೂಡಬಿದರೆ ಠಾಣೆಗೆ ದೂರು ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
received an extortion call from gangster Ravi Pujari and placed a demand of Rs 10 crore. Revanna lodged a police complaint.
Please Wait while comments are loading...