ಕರ್ನಾಟಕ ಪಠ್ಯದಲ್ಲಿ ಕನ್ನಡ ರಾಜರ ಇತಿಹಾಸ: ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದೇನು ?
ಕರ್ನಾಟಕದ ಪಠ್ಯಗಳಲ್ಲಿ ಕನ್ನಡ ರಾಜರ ಹಾಗೂ ಕರ್ನಾಟಕದ ಇತಿಹಾಸವನ್ನು ಸೇರಿಸಬೇಕು ಎನ್ನುವ ಒತ್ತಾಯವನ್ನು ಹೆಚ್ಚಾಗಿದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಸಂಬಂಧ ರವಿಕಿರಣ್ ಎನ್ನುವವರು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ರವಿಕಿರಣ್ ಅವರು, ನಮಗೆ ಬಾಬರ್ ಬೇಕಿಲ್ಲ ಅಕ್ಬರ್ ಬೇಕಿಲ್ಲ ನಮಗೆ ಬೇಕಾಗಿರುವುದು ನಾಡಪ್ರಭು ಕೆಂಪೇಗೌಡ ಅವರು, ಇಮ್ಮಡಿ ಪುಲಿಕೇಶಿ ಹಾಗೂ ಮಯೂರ ಅವರಂತಹ ರಾಜರು. ಎಲ್ಲಿಂದಲೋ ಬಂದವರನ್ನು ನಾವು ಮೆರೆಸುತ್ತಿದ್ದೇವೆ. ಅಶೋಕ ಗ್ರೇಟ್ ಅಂತ ಹೇಳುತ್ತಿದ್ದೇವೆ. ಇಮ್ಮಡಿ ಮಹಾನ್ ಸಾಧಕ ಅಂತ ನಾವು ಕನ್ನಡಿಗರು ಹೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಎಲ್ಲೋ ಒಂದು ಕಡೆ ನಮ್ಮವರನ್ನು ಕಡೆಗಣಿಸುತ್ತಿದ್ದೇವೆ ಎನಿಸುತ್ತದೆ. ಕರ್ನಾಟಕದ ಪಠ್ಯದಲ್ಲಿ ಕನ್ನಡದ ರಾಜರ ಬಗ್ಗೆ ಪಾಠ ಇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಜ್ಞಾನ್ ಕಲ್ಲಹಳ್ಳಿ ಅವರು, ಕನ್ನಡ ದೇಶವನ್ನು ಹುಟ್ಟಿಸಿದ ಮಯೂರನ ಬಗ್ಗೆ, ಹಿಗ್ಗಿಸಿ ಉತ್ತರ ದಂಡೆ, ಅರಬ್ ದಾಳಿ ತಡೆದ ಪುಲಿಕೇಶಿ ಬಗ್ಗೆ, ಅರಬ್ ಇಸ್ಲಾಂ ಅವನಿ ಜನಾಶ್ರಯ ಬಗ್ಗೆ, ಕರ್ನಾಟಕ ಮರು ನಿರ್ಮಾಣ ಮಾಡಿದ ಹಕ್ಕಾ ಬುಕ್ಕರ ಬಗ್ಗೆ ಪಠ್ಯದಲ್ಲಿ ಬರಬೇಕಿದೆ.
ಕೇಂದ್ರ ಒಟ್ಟಿಯಲ್ಲಿ ಕರ್ನಾಟಕದ ಇತಿಹಾಸ, ಭೂಗೋಳದ ಬಗ್ಗೆ ಕಡ್ಡಾಯ ಒಂದು ಭಾಗ ಸೇರಿಸಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇನೆ. ಇದನ್ನು ಬರಗೂರು ರಾಮಚಂದ್ರಪ್ಪ ಅವರು ಸಹ ಒಪ್ಪಿಕೊಂಡಿದ್ದಾರೆ.
ಈ ದಿಶೆಯಲ್ಲಿ ಪ್ರಾದೇಶಿಕತೆಯನ್ನು ಪ್ರಚಾರಿಸುವಲ್ಲಿ ಅನೇಕ ಅಭಿಯಾನ, ಕಾರ್ಯಕ್ರಮ ಮಾಡಿ ಈಗ ಸರ್ಕಾಕ್ಕೂ ಮನವಿ ಮಾಡುತ್ತಿದ್ದಾರೆ ವಿದ್ಯಾರ್ಥಿ ಮಿತ್ರ ರವಿಕಿರಣ್ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಮಾಡುತ್ತಿರುವುದು 💥🔥 🙂 ಹೀಗೆ ರಚನಾತ್ಮಕ ಪ್ರಾದೇಶಿಕತೆ ಹೆಚ್ಚಿಸುತ್ತಾ ಹೋಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ರಾಜರನ್ನು ಮೆರೆಸೋಣ: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡ ರಾಜರನ್ನು ಮೆರೆಸೋಣ. ಕರ್ನಾಟಕದಲ್ಲಿ ಕನ್ನಡಿಗನೇ ಮೊದಲು ಎನ್ನುವ ಅಭಿಯಾನವು ಜೋರಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಮೊದಲು ಎನ್ನುವುದನ್ನು ಕನ್ನಡಿಗರು ಸಾರಿ ಸಾರಿ ಹೇಳುತ್ತಿದ್ದಾರೆ. ಅದರಲ್ಲಿ ಕನ್ನಡದ ಇತಿಹಾಸ ಹಾಗೂ ಕನ್ನಡ ರಾಜರನ್ನು ಮೆರೆಸಬೇಕು ಎನ್ನುವ ಅಂಶವೂ ಸೇರಿದೆ.












Click it and Unblock the Notifications