ಅವನು ಯಾಸಿನ್ ಅಲ್ಲ, ಅಹ್ಮದ್: ಉಗ್ರ ಭಟ್ಕಳ್ ತಾಯಿ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20: ಅವನ ಹೆಸರು ಅಹ್ಮದ್ ಮತ್ತು ಅವನನ್ನು ಇಷ್ಟು ವರ್ಷ ಯಾಸಿನ್ ಭಟ್ಕಳ್ ಅಂತಲೇ ಕರೆಯುತ್ತಿದ್ದಾರೆ. ಅವರು ನಮಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ ಯಾಸಿನ್ ಭಟ್ಕಳ್ ನ ತಾಯಿ ಬಿಬಿ ರೆಹನಾ. ಹೈದರಾಬಾದ್ ದಿಲ್ ಸುಖ್ ನಗರ್ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಗೆ ಗಲ್ಲು ಶಿಕ್ಷೆಯಾಗಿದೆ.

ಕರ್ನಾಟಕದ ಕಡಲ ತೀರದಲ್ಲಿರುವ ಭಟ್ಕಳದಲ್ಲಿ ಈಗ ನೀರವ ಮೌನ. ಯಾಸಿನ್ ತಾಯಿ ಹಾಗೂ ಸೋದರಿ ಮರಿಯಾ ಸಿದ್ದಿ ಬಾಪ ಹೇಳುವಂತೆ, ಕಾನೂನು ಮರ ಮುಂದುವರಿಸಲಿದ್ದಾರೆ. ಹೈಕೋರ್ಟ್ ಗೆ ಮನವಿ ಸಲ್ಲಿಸುತ್ತೇವೆ ಎನ್ನುತ್ತಾರೆ. ನನ್ನ ಮಗನನ್ನು ಉಗ್ರನಂತೆ ಬಿಂಬಿಸಲಾಗಿದೆ. ಆತ ಅಮಾಯಕ ಮತ್ತು ಸೋಮವಾರ ಬಂದ ಕೋರ್ಟ್ ಆದೇಶ ನ್ಯಾಯಸಮ್ಮತವಲ್ಲ ಎನ್ನುತ್ತಾರೆ ಯಾಸಿನ್ ತಾಯಿ.[ಹಳೆ ನೋಟುಗಳಿಂದ ದಂಡ ಕಟ್ಬಹುದಾ ಅಂತಾನೆ ಯಾಸಿನ್!]

Yasin Bhatkal

ಇನ್ನು ಯಾಸಿನ್ ಸಹೋದರಿ ಮರಿಯಾ ಸಿದ್ದಿ ಪಾಪ, ಕೋರ್ಟ್ ಆದೇಶ ಹೊರಬಿದ್ದ ನಂತರ ನಮ್ಮ ಭರವಸೆ ನುಚ್ಚುನೂರಾಯಿತು. ಆದರೆ ದೇವರ ದಯೆಯಿಂದ ನಾವು ಮೇಲಿನ ಕೋರ್ಟ್ ಗೆ ಮನವಿ ಸಲ್ಲಿಸುವುದಕ್ಕೆ ಅವಕಾಶ ಇದೆ. ನನ್ನ ಸಹೋದರ ಅಮಾಯಕ ಅನ್ನೋದನ್ನ ಸಾಬೀತು ಮಾಡುತ್ತೇವೆ ಎಂಬ ಭರವಸೆ ಇದೆ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
His name was Ahmed and they have been calling him Yasin Bhatkal all these years. They have troubled us a lot said Bibi Rehna, Yasin Bhatkal's mother.
Please Wait while comments are loading...