ಟಿಬಿ ಡ್ಯಾಂ ಘಟನೆ ಬಳಿಕವೂ ಎಚ್ಚೆತ್ತುಕೊಳ್ಳದ ಸರ್ಕಾರ: ಹಿಪ್ಪರಗಿ ಬ್ಯಾರೇಜ್ ಗೇಟ್ ಕಟ್, ಅಪಾರ ನೀರು ಪೋಲು
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಪ್ಪರಗಿ ಬ್ಯಾರೇಜ್ ನ (Hipparagi Barrage Gate) 22 ಗೇಟ್ ತುಂಡಾಗಿ ಕೊಚ್ಚಿ ಹೋಗಿದೆ. ಪರಿಣಾಮ ಗೇಟ್ ಮೂಲಕ ಅಪಾರ ಪ್ರಮಾಣದ ನೀರು ಹರಿದು ಸಮುದ್ರ ಸೇರುತ್ತಿದೆ. ಇದೇ ಡ್ಯಾಂ ನೆಚ್ಚಿಕೊಂಡು ಹಿಂಗಾರು ಬೆಳೆ ಬೆಳೆದ ರೈತರಲ್ಲಿ ಆತಂಕ ಶುರುವಾಗಿದೆ. ಕಳೆದ ವರ್ಷ ತುಂಗಭದ್ರಾ ಅಣೆಕಟ್ಟಿನ (Tungabhadra Dam Gate) ಗೇಟ್ ಒಡೆದು ಹೋಗಿ ಸಾಕಷ್ಟು ಸಮಸ್ಯೆ ಆಗಿತ್ತು. ಅಪಾರ ನೀರು ಹರಿದು ಹೋಗಿತ್ತು. ಈ ದುರ್ಘಟನೆಯಿಂದ ಸರ್ಕಾರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ರೈತರ ಬಗ್ಗೆ ಕಾಳಜಿ ವಹಿಸಬೇಕಾದ ನಾಯಕರು ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ.
ಗರಿಷ್ಠ 6ಟಿಎಂಸಿ ಯಷ್ಟು ನೀರಿನ ಸಂಗ್ರಹ ಹೊಂದಿದ್ದ ಹಿಪ್ಪರಗಿ ಬ್ಯಾರೇಜ್ ಗೇಟ್ ನೀರಿನ ಒತ್ತಡದಿಂದ ಮಂಗಳವಾರ ತುಂಡಾಗಿ ಕೊಚ್ಚಿ ಹೋಗಿದೆ. ಇದರಿಂದ ಅಪಾರ ನೀರು (1 ಟಿಎಂಸಿಗೂ ಅಧಿಕ ನೀರು) ಹರಿದು ಪೋಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ನೀರಾವರಿ ಇಲಾಖೆ ಅಧಿಕಾರಿಗಳು ದುರಸ್ತಿ, ಗೇಟ್ ಅಳವಡಿಕೆ ಕಾರ್ಯ ನಡೆಸಿದ್ದಾರೆ. ಶೀಘ್ರವೇ ಸಮಸ್ಯೆ ಪರಿಹರಿಸಿ ನೀರು ನಿಲ್ಲಿಸುವುದಾಗಿ ತಿಳಿಸಿದ್ದಾರೆ. ತುಂಗಭದ್ರಾ ಡ್ಯಾಂ ಕ್ರೈಸ್ಟ್ ಗೇಟ್ ತುಂಡಾದಾಗ ಡ್ಯಾಂಗಳ ಹಳೇಯ ಗೇಟ್ ಪರಿಶೀಲಿಸಿ ಬೇರೆಲ್ಲೂ ಹೀಗಾಗದಂತೆ ಕ್ರಮ ವಹಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ನೀಡಿದ ಭರವಸೆ ನಡೆದುಕೊಂಡಿದ್ದರೆ ಹಿಪ್ಪರಗಿ ಅಣೆಕಟ್ಟು, ಈ ಭಾಗದ ರೈತರಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.

70 ವರ್ಷ ಹಳೆಯದಾದ ತುಂಗಭದ್ರಾ ನದಿಯ 19ನೇ ಗೇಟ್ 2024ರ ಆಗಸ್ಟ್‌ನಲ್ಲಿ ತುಂಡಾಗಿ ಕೊಚ್ಚಿ ಹೋಗಿತ್ತು, ಆಗಲೂ ಸಾಕಷ್ಟು ಸಮಸ್ಯೆ ಆಗಿತ್ತು. ಮೂಲಗಳ ಪ್ರಕಾರ 40 ಟಿಎಂಸಿ ನೀರು ಹರಿದು ಹೋಗಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ರೈತರು ಇದೇ ನೀರನ್ನು ಆಶ್ರಯಿಸಿದ್ದಾರೆ. ಈ ಡ್ಯಾಂ ದುರಸ್ತಿ ಕಾರ್ಯದ ಜೊತೆಗೆ ಇತರ ಗೇಟ್‌ಗಳು ಹಳೇಯದಾಗಿದ್ದು, ಅವುಗಳ ಗಾತ್ರದಲ್ಲಿ ಬದಲಾವಣೆ ಆಗಿದೆ. ಅವುಗಳನ್ನೂ ರಿಪೇರಿ ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಒಟ್ಟು 33 ಗೇಟ್‌ಗಳನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಈ ಗೇಟ್‌ಗಳ ದುರಸ್ತಿ ಕಾರ್ಯ 2026ರ ಏಪ್ರಿಲ್ ಒಳಗಾಗಿ ಮುಗಿಸುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ.
ಗೇಟ್‌ಗಳ ರಿಪೇರಿ ಕಾರ್ಯ ನಡೆಯುತ್ತಿರುವ ಕಾರಣ ಮಳೆಯಿಂದಾಗಿ ಸಂಗ್ರಹವಾಗಿದ್ದ ನೀರನ್ನು ಬಿಡುಗಡೆ ಮಾಡುವ ಅಗತ್ಯವಿದೆ. ಹೀಗಾಗಿ ಟಿಬಿ ಡ್ಯಾಂ ಜಲಾನಯನ ಪ್ರದೇಶಗಳ ರೈತರಿಗೆ ಎರಡನೇ ಬೆಳೆಗೆ (ಹಿಂಗಾರು ಬೆಳೆ) ನೀರು ಸಿಗಲ್ಲ ಎಂದು ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿತ್ತು. ಈ ಟಿಬಿ ಡ್ಯಾಂ ಗೇಟ್ ಮುರಿದಾಗಲೇ ಇತರ ಹಳೇಯ ಡ್ಯಾಂಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಅಗತ್ಯ ಮುಂಜಾಗೃತೆ ವಹಿಸಿದ್ದರೆ ಮತ್ತೊಂದು ಡ್ಯಾಂ (ಹಿಪ್ಪರಗಿ ಬ್ಯಾರೇಜ್) ನಲ್ಲಿ ಗೇಟ್ ಮುರಿತದ ಘಟನೆ ಮರುಕಳಿಸುತ್ತಿರಲಿಲ್ಲ.
2026ರ ಮಳೆಗಾ ಮುನ್ನ ಅಣೆಕಟ್ಟುಗಳ ಪರಿಶೀಲನೆ ಅಗತ್ಯ
ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಸೇರಿದಂತೆ ಇತರ ಭಾಗಗಳಲ್ಲಿ ಡ್ಯಾಂಗಳನ್ನು ಪರಿಶೀಲಿಸಬೇಕು. 2026ರ ಮಳೆಗಾಲದ ಹೊತ್ತಿಗೆ ಎಲ್ಲ ಅಣೆಕಟ್ಟು, ಗೇಟ್‌ಗಳನ್ನು ಪರಿಶೀಲಿಸಿ ತಾಂತ್ರಿಕ ತೊಂದರೆಗಳು, ಇತರ ಸಮಸ್ಯೆಗಳು ಕಂಡು ಬಂದಿಲ್ಲಿ ಕೂಡಲೇ ದುರಸ್ತಿ ಕ್ರಮ ಕೈಗೊಳ್ಳೂವುದು ಅತ್ಯವಶ್ಯವಾಗಿದೆ. ಇಲ್ಲವಾದರೆ 2025 ರಲ್ಲಿ ಅನೇಕ ಡ್ಯಾಂಗಳು, ನದಿಗಳು ಮೇ ತಿಂಗಳಲ್ಲೇ ಭರ್ತಿಯಾದಂತೆ ಈ ವರ್ಷವು ಮುಂಗಾರು ಮಳೆಗೆ ಒಳಹರಿವು ಹೆಚ್ಚಾಗಿ ನದಿ, ಡ್ಯಾಂಗಳು ತುಂಬಿದರೆ, ಆ ಸಂದರ್ಭದಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಅಪಾರ ಹಾನಿ ಸಂಭವಿಸುವ ಸಾಧ್ಯತೆ ಇದೆ. ಜಲಾನಯನ ಪ್ರದೇಶಗಳ ನಿವಾಸಿಗಳು, ರೈತರು ಮತ್ತು ಕೃಷಿ ಜಮೀನು ಗಮನದಲ್ಲಿಟ್ಟುಕೊಂಡು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರದ ನಿರ್ಲಕ್ಷ್ಯೆ: ಹಿಪ್ಪರಗಿ ಡ್ಯಾಂ ನೀರು ಪೋಲು
ಹಿಪ್ಪರಗಿ ಬ್ಯಾರೇಟ್ ನೀರು ಪೋಲಾಗಲು ಸರ್ಕಾರದ ನಿರ್ಲಕ್ಷ್ಯ ಕಾರಣವೆಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ನೇರ ವಾಗ್ದಾಳಿ ನಡೆಸಿದರು. ಭ್ರಷ್ಟ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ 'ಜೀವಜಲ' ಸಮುದ್ರ ಪಾಲಾಗುತ್ತಿದೆ. ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್ ಗೇಟ್ ಕೊಚ್ಚಿ ಹೋಗಿ 6 ಟಿಎಂಸಿಗೂ ಹೆಚ್ಚು ನೀರು ಪೋಲಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ರೈತರಿಗೆ ಡಿಕೆ ಶಿವಕುಮಾರ್ ಅನ್ಯಾಯ
ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಕಡೆಗಣನೆಯಿಂದ ಕಳೆದ ಆಗಸ್ಟ್‌ನಲ್ಲಿ ತುಂಗಭದ್ರಾ ಡ್ಯಾಂನ 40 ಟಿಎಂಸಿ ನೀರು ಪೋಲಾಗಿದ್ದನ್ನು ಇಡೀ ರಾಜ್ಯವೇ ನೋಡಿದೆ. ಈಗ ಹಿಪ್ಪರಗಿ ಬ್ಯಾರೇಜ್‌ನ 6 ಟಿಎಂಸಿ ನೀರು ಪೋಲಾಗಿದ್ದರೂ ಜಲಾಶಯಗಳ ಗೇಟ್ ರಿಪೇರಿ ಮಾಡಿಸದೇ ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಕುರ್ಚಿಗಾಗಿ ಹಗಲಿರುಳು ಹೋರಾಡುವ ಡಿಕೆ ಶಿವಕುಮಾರ್ ಅವರೇ, ನಿಮ್ಮ ಕಣ್ಣೆದುರೇ ಜಲಾಶಯಗಳು ಬರಿದಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ? ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದರೆ ಗೌರವಯುತವಾಗಿ ರಾಜೀನಾಮೆ ಕೊಡಿ! ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications