'ಹಿಜಾಬ್ ತಲೆಯನ್ನು ಆವರಿಸುತ್ತದೆ, ನಮ್ಮ ಮೆದುಳಲ್ಲ' ಅರ್ಜಿದಾರರು

ಬೆಂಗಳೂರು ಫೆಬ್ರವರಿ 9: 'ಹಿಜಾಬ್ ತಲೆಯನ್ನು ಆವರಿಸುತ್ತದೆ, ನಮ್ಮ ಮೆದುಳಿಗಲ್ಲ' ಎಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಅರ್ಜಿದಾರರು ಹೇಳಿದ್ದಾರೆ. ಇಂದು ಹಿಜಾಬ್ ವಿವಾದದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ಮಾಡಲಾಯಿತು. ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ಹಾಜ್ರಾ ಶಿಫಾ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಸಮರ್ಥಿಸಿಕೊಂಡರು.

ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅರ್ಜಿದಾರರಾದ ಹಾಜ್ರಾ ಶಿಫಾ, "ಹಿಜಾಬ್ ನಮ್ಮ ತಲೆಯನ್ನು ಆವರಿಸುತ್ತದೆ, ನಮ್ಮ ಮೆದುಳನ್ನು ಅಲ್ಲ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ. "ನಾವು ಕೇವಲ ನಮ್ಮ ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕುಗಳನ್ನು ನೀಡಬೇಕಾಗಿ ವಿನಂತಿಸುತ್ತಿದ್ದೇವೆ, ಅದು ಅಪರಾಧವಲ್ಲ. ಹಿಜಾಬ್ ಧರಿಸಿರುವಾಗ ನಾವು ನಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದು ಯಾರು ಹೇಳಿದರು?" ಎಂದು ಬಿ.ಸಿ.ನಾಗೇಶ್ ಅವರಿಗೆ ಕೇಳಿದರು.

"ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?" ಎಂಬ ಪ್ರಶ್ನೆಗೆ ಅವರು, ಕೆಲವು ಸಂಘಟನೆಗಳು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡುತ್ತಿವೆ. ಜೊತೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇಸ್ಲಾಮಿಕ್ ಸಂಘಟನೆಗಳ ಪ್ರಚೋದನೆಯ ಆರೋಪವನ್ನು ಅವರು ನಿರಾಕರಿಸಿದರು.

Hijab Row: Hijab Covers Head, Not Our Brain, Says Petitioner

ರಾಜ್ಯದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಕಿಡಿ ತಣ್ಣಗಾಗಲು ಇತ್ತ ರಾಜ್ಯ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ 8ನೇ ತರಗತಿಯಿಂದ ಹಿಡಿದು ರಜೆ ಘೋಷಣೆ ಮಾಡಲಾಗಿದೆ. ಇತ್ತ ಪ್ರಚೋದನೆ ಕೊಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ನಿರ್ಧರಿಸಲಾಗಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.ಯಾರೇ ಗೊಂದಲ, ಗಲಭೆ, ಗಲಾಟೆಗೆ ಪ್ರಚೋದನೆ ಕೊಟ್ಟಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಕೋರ್ಟ್ ನಲ್ಲಿ ಪ್ರಕರಣವಿದೆ, ತೀರ್ಪಿನ ಬಳಿಕ‌ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ನಿನ್ನೆ 47 ಕಡೆ ಮಾತ್ರ ಗಲಭೆ ನಡೆದಿದ್ದು, ಬೇರೆಡೆ ಪ್ರತಿಭಟನೆಗಳು ಮಾತ್ರ ನಡೆದಿದೆ.

ಪಿಯುಸಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕಾಲೇಜಗಳು ಇವೆ. ಡಿಗ್ರಿ ಜೊತೆ ಪಿಯು ಇರೋ ಕಡೆ ಗಲಾಟೆ ನಡೆದಿದೆ. SDPI ಬಗ್ಗೆ ನಮಗೆ ಅನುಮಾನ ಇದೆ ಅಷ್ಟೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಘಟನೆ ಬೇರೆ ಕಡೆ ಡೈವರ್ಟ್ ಮಾಡಲು ನೋಡಿದ್ರು. ಆದರೆ ಆಸೆ ಈಡೇರಲಿಲ್ಲ, ನಿನ್ನೆ ಘಟನೆ ನಡೆದ ಕಡೆ ಅರೆಸ್ಟ್ ಮಾಡಲಾಗಿದೆ ಎಂದರು.ಇನ್ನು ಪಿಯು ಬೋರ್ಡ್ ನ ನಿರ್ದೇಶಕಿ ಸ್ನೇಹಲ್​ರ ವರ್ಗಾವಣೆ ವಿಚಾರವಾಗಿ ಉತ್ತರಿಸಿದ ಸಚಿವರು, ಸ್ನೇಹಲ್ ವರ್ಗಾವಣೆ ಕಾಗೆ ಕೂರಕ್ಕೂ, ಕೊಂಬೆ ಮುರಿಯಕ್ಕೂ ಇರೋ ಸಂಬಂಧ ಅಷ್ಟೇ. ಪಿಯುಸಿಯಲ್ಲಿ ಸಾಕಷ್ಟು ದಿನ ಕೆಲ್ಸ ಮಾಡಿದ್ದೇನೆ, ಡಿಸಿ ಕೆಲಸಕ್ಕೆ ಉತ್ಸಾಹ ಹೊಂದಿದ್ದು, ಈ ಬಗ್ಗೆ CS ಬಳಿ ಕೂಡ ಚರ್ಚೆ ನಡೆಸಿದ್ದರು ಅನ್ನೋ ಮಾಹಿತಿ ನನ್ನ ಕಿವಿಗೆ ಬಿದಿದ್ದೆ. ಆ ಕಾರಣಕ್ಕೆ ವರ್ಗಾವಣೆಯಾಗಿದೇ ವಿನಃ ಸಮವಸ್ತ್ರ ವಿಚಾರಕ್ಕೂ ಇವರ ವರ್ಗಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ಇನ್ನೂ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಇದೀಗ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದೆ. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸಿಜೆಗೆ ವರ್ಗಾಹಿಸಿದ್ದು ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟರು.

Recommended Video

      ಹಿಜಾಬ್ ವಿವಾದದ ಬಗ್ಗೆ ಇಂದು ಹೈಕೋರ್ಟ್ ಹೇಳಿದ್ದೇನು? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+