ಚನ್ನಪಟ್ಟಣದ ಬಳಿ ಚಾಕು ತೋರಿಸಿ ಕೇರಳ ಪ್ರವಾಸಿಗರ ದರೋಡೆ

ಚನ್ನಪಟ್ಟಣ, ಆಗಸ್ಟ್ 31 : ಗುರುವಾರ ನಸುಕಿನ ವೇಳೆ ಚನ್ನಪಟ್ಟಣ ಬಳಿ ನಾಲ್ವರು ಮುಸುಕುದಾರಿಗಳು ಕೇರಳದ ಬಸ್ ಅಡ್ಡಗಡ್ಡಿ ಪ್ರಯಾಣಿಕರನ್ನು ಬೆದರಿಸಿ ಹಣ ದೋಚಿರುವ ಘಟನೆ ನಡೆದಿದೆ.

ಬುಧವಾರ ಸಾಯಾಂಕಾಲ ಕೋಳಿಕೋಡುದಿಂದ ಬೆಂಗಳೂರಿಗೆ ಹೊರಟಿದ್ದ 45 ಪ್ರಯಾಣಿಕರಿದ್ದ ಕೇರಳದ ಬಸ್ ವೊಂದನ್ನು ಗುರುವಾರ ಬೆಳಗ್ಗೆ ಚನ್ನಪಟ್ಟಣ ಬಳಿ ಎರಡು ಬೈಕ್ ನಲ್ಲಿ ಬಂದು ಚಾಕುವಿನಿಂದ ಪ್ರಾಯಾಣಿಕರನ್ನು ಬೆದರಿಸಿ ಹಣ ಹಾಗೂ ಇಬ್ಬರ ಮಹಿಳೆಯರ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Highway horror four men rob passengers Kerala bus at Channapatna

ಬಸ್ ಚಾಲಕ ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದನಾದರೂ ಅಷ್ಟೋತ್ತಿಗಾಗಲೇ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಆ ಕೂಡಲೇ ಬಸ್ ಚಾಲಕ ಬಸ್ಸನ್ನು ಚನ್ನಪಟ್ಟಣ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.

ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆಂಗಳೂರಿನ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದರೋಡೆಕೋರರು ಸುಮಾರು 23ರಿಂ 25 ವರ್ಷ ವಯೋಮಿತಿಯರಾಗಿದ್ದು, ಅವರೆಲ್ಲ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಬಸ್ ಕಂಡಕ್ಟರ್ ಮುಜೀಬ್ ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಕೇರಳ ಪ್ರಯಾಣಿಕರಿಗೆ ಭದ್ರತೆ ಒದಗಿಸುವಂತೆ ಕರ್ನಾಟಕ ಸರ್ಕಾರವನ್ನು ಕೇಳಿದ್ದಾರೆ.

ಆರೋಪಿಗಳ ಪತ್ತೆ ಬಂಧಿಸಿ. ಇಂತಹ ಘಟನೆಗಳು ಮುಂದೆ ಎಂದು ನಡೆಯದಂತೆ ಕೇರಳ-ಕರ್ನಾಟಕ ಗಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+