ಪತ್ರಕರ್ತರೊಂದಿಗೆ ಸಿಎಂ ಸಂವಾದ, ದೂರುಗಳ ಪ್ರವಾಹ

Written By:
Subscribe to Oneindia Kannada

ಬೆಂಗಳೂರು, ಜುಲೈ, 16: ಕರ್ನಾಟಕ ಮಾಧ್ಯಮ ಅಕಾಡೆಮಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಪತ್ರಕರ್ತರ ಸಂವಾದ'ದಲ್ಲಿ ಹಲವಾರು ವಿಚಾರಗಳು ಚರ್ಚೆಯಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರು ಸ್ಥಳೀಯ ಸಮಸ್ಯೆಗಳನ್ನು ಮುಖ್ಯಮಂತ್ರಿ ಮುಂದೆ ಇಟ್ಟರು.

ಸರ್ಕಾರ ಪತ್ರಕರ್ತರ ಹಿತ ಕಾಯಲು ಬದ್ಧವಿದೆ. ಅವು ಸಣ್ಣ ಪತ್ರಿಕೆ ಆಗಿರಬಹುದು ಇಲ್ಲವೇ ರಾಜ್ಯ ಮಟ್ಟದ ಪತ್ರಿಕೆ ಆಗಿರಬಹುದು. ಮಾಧ್ಯಮವನ್ನು ಸರ್ಕಾರ ಸಮಾನವಾಗಿ ಪರಿಗಣಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.[ಕೋಟಿ ವೃಕ್ಷ ಆಂದೋಲನಕ್ಕೆ ಮುಖ್ಯಮಂತ್ರಿಯಿಂದ ಚಾಲನೆ]

karnataka

ಹಾಸನ ಜಿಲ್ಲೆಯ ಪತ್ರಕರ್ತರು ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಸಮಸ್ಯೆ, ಮಹಿಳೆಯರು ಶೌಚಾಲಯಕ್ಕಾಗಿ ಸುಮ್ಮನೆ ಹಣ ವ್ಯರ್ಥಮಾಡುವಂತಾಗಿದೆ ಎಂಬ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

karnataka


ಗಮನ ಸೆಳೆದ ಜಿಲ್ಲಾವಾರು ಸಮಸ್ಯೆಗಳು

* ಚಿಕ್ಕಬಳ್ಳಾಪುರ ಜಿಲ್ಲೆ- ನಗರ ಸಭೆ ಅಧಿಕಾರಿಗಳ ಕಾರ್ಯಕ್ಷಮತೆ
* ಹುಬ್ಬಳ್ಳಿ-ಧಾರವಾಡ- ಬೆಣ್ಣಿಹಳ್ಳ ನೆರೆ ಸಮಸ್ಯೆ [ಆರು ತಿಂಗಳಲ್ಲಿ ಸಿದ್ದರಾಮಯ್ಯರನ್ನು ಕಾಡಿದ 8 ವಿವಾದಗಳು!]
* ವಿಜಯಪುರ-ಸರ್ಕಾರಿ ಶಾಲೆಗಳು, ರಸ್ತೆಗಳ ಸಮಸ್ಯೆ , ಐಬಿಸಿ ನಾಲೆ ಸಮಸ್ಯೆ, ಕೃಷಿ ಹೊಂಡ ನಿರ್ಮಾಣ ಪರಿಹಾರ
* ದಾವಣಗೆರೆ- ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ, ಭದ್ರಾ ಶುಗರ್ ಫ್ಯಾಕ್ಟರಿ, ಮೆಡಿಕಲ್ ಕಾಲೇಜ್
* ಹಾವೇರಿ- ಸರ್ಕಾರಿ ಶಾಲೆಗಳ ಸಮಸ್ಯೆ
karnataka


* ಬಾಗಲಕೋಟೆ ಜಿಲ್ಲೆ- ಬಾಗಲಕೋಟೆಯ ನವನಗರ ನಗರಾಭಿವೃದ್ಧಿ, ಕೂಡಲ ಸಂಗಮ ಅಭಿವೃದ್ಧಿ ಸಮಸ್ಯೆ
* ಮೈಸೂರು- ಮೈಸೂರು ನಗರಾಭಿವೃದ್ಧಿ, ಸರ್ಕಾರಿ ಶಾಲಾ ಸಮಸ್ಯೆ
* ಮಂಡ್ಯ ಜಿಲ್ಲೆ-ಮಂಡ್ಯ ಶುಗರ್ ಫ್ಯಾಕ್ಟರಿ
karnataka

* ಚಿತ್ರದುರ್ಗ ಜಿಲ್ಲೆಯ-371 ಜೆ(ವಿಶೇಷ ಮಾನ್ಯತೆ)ಕಾಯ್ದೆಗೆ ಚಿತ್ರದುರ್ಗ ಸೇರಿಸಿ, ಭದ್ರಾ ಮೇಲ್ದಂಡೆ ಯೋಜನೆಗೆ ತಮ್ಮ ಜಿಲ್ಲೆಯನ್ನು ಪರಿಗಣಣಿಸಿ
* ಬಳ್ಳಾರಿ- ಹೈದರಾಬಾದ್ ಕರ್ನಾಟಕ ಜೀವನಾಡಿ ತುಂಗಭದ್ರಾ ನದಿಯ ಹೂಳಿನ ಸಮಸ್ಯೆ, ಪ್ರಾಧಿಕಾರದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಿ
* ಮಂಗಳೂರು-ಮರಳು ದಂಧೆ, ಉನ್ನತ ಶಿಕ್ಷಣ ನೀತಿಗಳ, ಸರ್ಕಾರಿ ಮೆಡಿಕಲ್ ಕಾಲೇಜು ಪ್ರವಾಸೋಧ್ಯಮ ಮತ್ತು ಎತ್ತಿನಹೊಳೆ ಯೋಜನೆ
* ಶಿವಮೊಗ್ಗ-ಜನಸಂಖ್ಯೆಗನುಗುಣವಾಗಿ ಯೋಜನೆ ನಿರ್ಮಾಣದ ಆಗ್ರಹ
* ರಾಯಚೂರು- ಪತ್ರಕರ್ತರು ಬಾಲ ವಿಕಾಸ ಯೋಜನೆಯ ಸೌಕರ್ಯಗಳ ಕುರಿತು ಸರಿಯಾದ ಮಾಹಿತಿ ನೀಡಿ
* ಕೊಪ್ಪಳ - ಹಾಲಿನ ಪ್ರೋತ್ಸಾಹ ಧನದ ಸಮಸ್ಯೆ
* ಕಲ್ಬುರ್ಗಿ- ಸಾರಿಗೆ ಸೌಕರ್ಯಗಳ ಕುರಿತು ಜನರಿಗೆ ಸಮಗ್ರ ಮಾಹಿತಿ ನೀಡಲು ಒತ್ತಾಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Madhyama Academy conducted a seminar with Karnataka CM Siddaramaiah on 16th July, 2016. Many district journalists participated in the seminar and briefed him about the problems the media people are facing in Karnataka.
Please Wait while comments are loading...