ಉಡುಪಿ : ಹೆಲ್ಮೆಟ್ ಖರೀದಿ ಮಾಡಲು 10ದಿನಗಳ ಅವಕಾಶ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ 21 : ಉಡುಪಿ ಜಿಲ್ಲಾಡಳಿತ ಹೆಲ್ಮೆಟ್ ಖರೀದಿ ಮಾಡಲು ಜನರಿಗೆ 10 ದಿನಗಳ ಕಾಲಾವಕಾಶ ನೀಡಿದೆ. ಫೆಬ್ರವರಿ 1ರಿಂದ ಬೈಕ್ ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಜನವರಿ 20ರಿಂದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಬರಬೇಕಿತ್ತು. ಆದರೆ, ಸಾರ್ವಜನಿಕರು ಹೆಲ್ಮೆಟ್ ಖರೀದಿ ಮಾಡಲು ಕಾಲಾವಕಾಶ ನೀಡಿಬೇಕು ಎಂದು ಮನವಿ ಮಾಡಿರುವುದರಿಂದ 10 ದಿನಗಳ ಕಾಲ ಅವಕಾಶ ನೀಡಲಾಗಿದೆ. [ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

helmet

ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಿರುವಂತೆ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕರ್ನಾಟಕ ಮೋಟಾರು ವಾಹನ ನಿಯಮ 1989, ನಿಮಯ 230, ಉಪನಿಯಮ 1 ರ ಅನ್ವಯ ಹೆಲ್ಮೆಟ್ ಧರಿಸುವುದನ್ನು ಉಡುಪಿ ಜಿಲ್ಲೆಯಲ್ಲಿಯೂ ಕಡ್ಡಾಯಗೊಳಿಸಲಾಗಿದೆ. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]

ಬೈಕ್ ಸವಾರರಲ್ಲಿ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಹಲ್ಮೆಟ್ ಮಹತ್ವದ ಬಗ್ಗೆ ತಿಳಿಸಲಾಗುತ್ತಿದೆ.

ಹೆಲ್ಮೆಟ್ ಕಡ್ಡಾಯ ಸಿದ್ದರಾಮಯ್ಯ ಸ್ಪಷ್ಟನೆಗಳು : ದ್ವಿ-ಚಕ್ರ ವಾಹನ ಸವಾರರ ಜೊತೆಗೆ ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬುದು ಕರ್ನಾಟಕ ಸರ್ಕಾರದ ನಿರ್ಧಾರವಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಸರ್ಕಾರ ಪಾಲನೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಆರೋಪ ಮತ್ತು ಸರ್ಕಾರದ ವಿರುದ್ಧದ ಟೀಕೆಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಸ್ಪಷ್ಟನೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi district administration has extend compulsory helmet rule by 10 days. The rule will come to effect from February 1, 2015.
Please Wait while comments are loading...