• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಜಲಾಶಯಗಳ ನೀರಿನ ಮಟ್ಟ ಹೇಗಿದೆ?

|
Google Oneindia Kannada News

ಬೆಂಗಳೂರು, ಜುಲೈ 09: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.

   Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

   ಹೀಗಾಗಿ ಜಲಾಶಯದಲ್ಲಿ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಆಲಮಟ್ಟಿ ಅಣೆಕಟ್ಟಿನ ಕೆಳಭಾಗದ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ತಿಳಿಸಲಾಗಿದೆ.

   ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ, ಪ್ರವಾಹ ಭೀತಿಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ, ಪ್ರವಾಹ ಭೀತಿ

   ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದ್ದು, ತುಂಗಾನದಿ ಐತಿಹಾಸಿಕ ಮಂಟಪ ಮುಳುಗಲು ಇನ್ನು 2 ಅಡಿ ಬಾಕಿ ಇದೆ. ತುಂಗಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ನ್ಯಾಮತಿ, ಹೊನ್ನಾಳಿ, ದಾವಣೆಗೆರೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

   ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

   ಬಾಗಲಕೋಟೆಯಲ್ಲಿ ದಿನವಿಡೀ ಮಳೆ ಸುರಿದಿದೆ. ಉತ್ತರ ಕನ್ನಡ, ಧಾರವಾಡ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ಹೊಸಪೇಟೆಯಲ್ಲಿ ಉತ್ತಮ ಮಳೆಯಾಗಿದೆ.

   ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಗುರುವಾರ ಭರಿ ಮಳೆಯಾಗುವ ಸಾಧ್ಯತೆ ಇದೆ.ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ ನಿಭಾಯಿಸಲು ಹೋಂ ಗಾರ್ಡ್ ಹಾಗೂ ಮೋಟಾರ್ ಬೋಟ್ಸ್ ಗಳನ್ನು ನಿಯೋಜಿಸಲಾಗಿದೆ.

   ಕೆಆರ್‌ಎಸ್‌ಜಲಾಶಯದ ಗರಿಷ್ಠ ಮಟ್ಟ 124.80 ಇದ್ದು ಇಂದು 100.85ರಷ್ಟಿದೆ. ಒಳಹರಿವು 10,125 ಕ್ಯೂಸೆಕ್‌, ಹೊರ ಹರಿವು 421 ಕ್ಯೂಸೆಕ್‌ನಲ್ಲಿಷ್ಟಿದೆ.

   ಹಾರಂಗಿ ಜಲಾಶಯದಲ್ಲಿ 2,854 ಅಡಿ ಸಾಮರ್ಥ್ಯವಿದ್ದು, ಈಗ 2,847.32 ಅಡಿಗಳಷ್ಟು ನೀರು ತುಂಬಿದೆ. 3,968 ಕ್ಯೂಸೆಕ್ ಒಳಹರಿವು 30 ಕ್ಯೂಸೆಕ್‌ನಷ್ಟು ಹೊರಹರಿವಿದೆ.

   ಕಬಿನಿಯಲ್ಲಿ 2,284 ಅಡಿ ಸಾಮರ್ಥ್ಯವಿದೆ, 2,268.80 ರಷ್ಟು ಅಡಿ ನೀರು ತುಂಬಿದೆ. 11,000 ಕ್ಯೂಸೆಕ್ ಒಳಹರಿವಿದೆ. 1,500 ಕ್ಯೂಸೆಕ್ ಹೊರಹರಿವಿದೆ.

   ಹೇಮಾವತಿಯಲ್ಲಿ 2,922 ಅಡಿ ಸಾಮರ್ಥ್ಯವಿದ್ದು, 2.889 ಅಡಿಗಳಷ್ಟು ನೀರಿದೆ. 10,782 ಕ್ಯೂಸೆಕ್ ಒಳ ಹರಿವು, 200ಕ್ಯೂಸೆಕ್‌ನಷ್ಟು ಹೊರಹರಿವಿದೆ.

   ಲಿಂಗನಮಕ್ಕಿಯಲ್ಲಿ 1,819 ಅಡಿ ನೀರಿನ ಸಾಮರ್ಥ್ಯವಿದೆ, 1,761.25 ರಷ್ಟು ನೀರು ತುಂಬಿದೆ. 31,460 ಕ್ಯೂಸೆಕ್‌ನಷ್ಟು ಒಳಹರಿವಿದ್ದು, 2317.73 ಕ್ಯೂಸೆಕ್‌ನಷ್ಟು ಹೊರ ಹರಿವಿದೆ.

   ಭದ್ರಾ ಜಲಾಶಯದಲ್ಲಿ 186 ಅಡಿಗಳಷ್ಟು ಸಾಮರ್ಥ್ಯವಿದ್ದು, 140.3 ಅಡಿಯಷ್ಟು ನೀರು ತುಂಬಿದೆ.4,769 ಕ್ಯೂಸೆಕ್‌ನಷ್ಟು ಒಳ ಹರಿವು, 162ರಷ್ಟು ಹೊರಹರಿವಿದೆ.

   English summary
   Heavy rains have hit the coastal and Malenadu Regions of Karnataka.Thus the water level in the reservoir is also rising. People in the lower part of the Alamatti Dam have been told to move to a safer place.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X