Rain News: ಮಳೆ.. ರಣಮಳೆ.. ಭರ್ಜರಿ ಮಳೆ ಗ್ಯಾರಂಟಿ!

ಕರ್ನಾಟಕದಲ್ಲಿ ಮಳೆ ಕೊರತೆ ಕಾರಣ ಭೂಮಿ ಬಾಯಿ ಬಿಟ್ಟಿದ್ದು, ಜನ ಕೂಡ ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಅದ್ರಲ್ಲೂ ಮಳೆಯ ತವರು ಅಂತಾನೆ ಕರೆಸಿಕೊಳ್ಳುವ ನಮ್ಮ ರಾಜ್ಯದ ಮಲೆನಾಡು ಭಾಗದಲ್ಲೂ ಮಳೆಗೆ ಭಾರಿ ಕೊರತೆ ಉಂಟಾಗಿದೆ. ಹೀಗಿದ್ದಾಗ ಭರ್ಜರಿ ಮಳೆ ಅಬ್ಬರ ಶುರುವಾಗುತ್ತಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಈಗ ಮಳೆ ಅಬ್ಬರ ಶುರುವಾಗಿದೆ? ಎಲ್ಲೆಲ್ಲಿ ಜೋರು ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

ಕಳೆದ ಕೆಲ ದಿನಗಳಿಂದ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅದ್ರಲ್ಲೂ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಮಳೆ ಬಿದ್ದಿರುವ ಮಾಹಿತಿ ಹೊರಬಿದ್ದಿದೆ. ಈ ನಡುವೆ ಮುಂದಿನ ಕೆಲವು ದಿನ, ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆಯನ್ನ ನೀಡಿದೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆಯ ಸಿಂಚನ ಆಗುವುದು ಗ್ಯಾರಂಟಿ ಆಗಿದ್ದು, ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

Heavy Rain Will Start In Different Districts Of Karnataka State

ಕರ್ನಾಟಕದಲ್ಲಿ ಮಳೆ ಯಾವಾಗ?

ಏಪ್ರಿಲ್ 6 ರಂದು ಅಂದರೆ ನಾಳೆ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇದೀಗ ಮಾಹಿತಿ ನೀಡಿದೆ. ಇದರ ಜೊತೆಗೇ, ಏಪ್ರಿಲ್​ 8ಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಮತ್ತೊಂದ್ಕಡೆ, ರಾಜಧಾನಿ ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಬಳಿಕ ಅಂದ್ರೆ, ಏಪ್ರಿಲ್ 13 ಹಾಗೂ 14 ಕ್ಕೆ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.


ಬರದ ನಡುವೆ ಕರುಣೆ ತೋರಿಸು ವರುಣ!

2023 ಕರ್ನಾಟಕ ರಾಜ್ಯದ ಪಾಲಿಗೆ ದುರದೃಷ್ಟಕರ ವರ್ಷ ಎನ್ನಬಹುದು ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಸ್ಥಿತಿ ನಿರ್ಮಾಣವಾಗಿದೆ. ಈ ಪೈಕಿ ಮಳೆ ಆಶ್ರಯಿಸಿ, ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿ ಕರ್ನಾಟಕ ಸಾಕಷ್ಟು ಮಳೆ ಕೊರತೆ ಎದುರಿಸಿದೆ. ಕೆಲ ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಅಡಕೆ ಬೆಳೆಗಾರರು ಪರದಾಡುತ್ತಿದ್ದಾರೆ. ಹನಿ, ಹನಿ ನೀರಿಗಾಗಿ ಈಗ ಸಂಕಷ್ಟ ಅನುಭವಿಸಿದ್ದಾರೆ. ಇದೇ ಸಮಯದಲ್ಲಿ ಈಗ, ಮೆಲ್ಲಗೆ ಮಳೆಯ ಆರ್ಭಟವೂ ಶುರುವಾಗಿದೆ.

Heavy Rain Will Start In Different Districts Of Karnataka State

ಒಟ್ನಲ್ಲಿ ಸಂಕಷ್ಟದ ಸಮಯದಲ್ಲಿ ಮಳೆರಾಯ ಒಂದಷ್ಟು ಕರುಣೆ ತೋರಿಸುತ್ತಾನೆ ಎಂಬ ನಿರೀಕ್ಷೆ ಮೂಡಿದೆ. ಅದರಲ್ಲೂ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವುದು ಈಗ ಭಾರಿ ಕುತೂಹಲ ಕೆರಳಿಸಿದೆ. ಈ ಮೂಲಕ ಕರ್ನಾಟಕದ ಈಗಿನ ನೀರಿನ ಕೊರತೆ ನೀಗಿದರೆ ಸಾಕು ಅಂತಾ ಜನರು ಮಳೆಗಾಗಿ ಕಾದು ಕುಳಿತಿದ್ದಾರೆ. ನಿನ್ನೆ & ಮೊನ್ನೆ ಕೊಡಗು ಹಾಗೂ ನಮ್ಮ ಮಲೆನಾಡು ಭಾಗ ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಈಗ ಬಯಲುಸೀಮೆ ಜಿಲ್ಲೆ, ಮತ್ತು ಕನ್ನಡಿಗರ ರಾಜಧಾನಿ ಬೆಂಗಳೂರು ನಗರದಲ್ಲೂ ಉತ್ತಮ ಮಳೆ ಬೀಳಬೇಕಿದೆ.

ಮಳೆ ಬರುತ್ತಾ? ಮಳೆ ಬರಲ್ವಾ?

ಹೌದು, ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗ ಭರ್ಜರಿಯಾದ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಈಗಾಗಲೇ ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೊಂದು ಭಾರಿ ಮಳೆ ಬಿದ್ದಿದೆ. ಈಗ, ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಳೆದ ತಿಂಗಳು ಕೂಡ ಇದೇ ರೀತಿ ಮಳೆ ಬೀಳುವ ಮುನ್ಸುಚನೆ ಹವಾಮಾನ ತಜ್ಞರಿಂದ ಸಿಕ್ಕಿತ್ತು. ಆದರೂ ಮಳೆ ಬೀಳಲೇ ಇಲ್ಲ! ಈ ಬಾರಿ ಕೂಡ ಹಂಗೆ ಆಗುತ್ತಾ? ಕಾದು ನೋಡಬೇಕು.

ಕನ್ನಡಿಗರ ಆಸೆಯನ್ನ ವರುಣ ದೇವ...

ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ ಜನ. ಕನ್ನಡಿಗರ ಆಸೆಯನ್ನ ವರುಣ ದೇವ ಈಡೇರಿಸುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.

ನೀರು ಬೇಕೆಂದು ತಮಿಳುನಾಡು ಕಿರಿಕ್!

ಒಂದ್ಕಡೆ ಕಳೆದ ವರ್ಷ, ಅಂದ್ರೆ 2023ರಲ್ಲಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯೇ ಬಂದಿಲ್ಲ ಎಂಬ ಕೊರಗು ಕಾಡುತ್ತಿತ್ತು. ಈ ನಡುವೆಯು ತಮಿಳುನಾಡು ಬೇರೆ ನೀರಿಗಾಗಿ ಭಾರಿ ಕಿರಿ, ಕಿರಿ ಮಾಡಿತ್ತು. ಹೀಗಾಗಿ ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿತ್ತು. ಇಷ್ಟೆಲ್ಲದರ ಪರಿಣಾಮ ಇದೀಗ ಬೆಂಗಳೂರಿಗೂ ಮುಂದಿನ ದಿನಗಳಲ್ಲಿ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಕರ್ನಾಟಕದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ 3 ತಿಂಗಳಿಗೆ ಆಗುವಷ್ಟು ನೀರು ಇದೆ ಎಂದು ಸರ್ಕಾರದಿಂದ ಮಾಹಿತಿ ಸಿಗುತ್ತಿದೆ. ಹೀಗಾಗಿ ಬೆಂಗಳೂರಿಗರು ಸೇರಿದಂತೆ ಹಳೇ ಮೈಸೂರು ಭಾಗದ ಜನರು ಇದರಿಂದ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ

ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಜನರು ಕೂಡ ಫುಲ್ ಖುಷ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+