Heavy Rain: ಮಳೆ.. ಮಳೆ.. ಭರ್ಜರಿ ಮಳೆಗೆ ಸಜ್ಜಾಗಿ!

ಮಳೆ ಕರ್ನಾಟಕದಲ್ಲಿ ತನ್ನ ಅಸಲಿ ಅಬ್ಬರ ಶುರು ಮಾಡಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಅದರಲ್ಲೂ ಕಳೆದ ಒಂದು ವಾರದಲ್ಲಿ ಭಾರಿ ಸುಧಾರಣೆ ಕಾಣುತ್ತಿವೆ, ಕರ್ನಾಟಕದಲ್ಲಿ ಇರುವ ಜಲಾಶಯಗಳು. ಹೀಗಿದ್ದಾಗ ಮುಂದಿನ 24 ಗಂಟೆ ಅವಧಿಯಲ್ಲಿ ಕೂಡ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸಿಂಚನ ಆಗಲಿದೆ? ಮುಂದೆ ಓದಿ.

ಮುಂಗಾರು ಮಳೆಯ ಮಾರುತಗಳು ಕಳೆದ ತಿಂಗಳು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದವು. ಬಳಿಕ ಮಳೆ ಅಬ್ಬರ ಬಲು ಜೋರಾಗಿತ್ತು, ಹಾಗೇ ಒಣಗಿ ಹೋಗುತ್ತಿದ್ದ ನದಿಗಳಿಗೆ ಮತ್ತೊಮ್ಮೆ ಭರ್ಜರಿ ನೀರು ಹರಿದು ಬಂದಿದೆ. ಕೊನೆಗೆ ಜಲಾಶಯಗಳಿಗೆ ಕೂಡ ನೀರು ಹರಿದು ಬಂದು, ರಾಜ್ಯದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಕೂಡ ಒಂದು ಪರಿಹಾರ ಸಿಗುವಂತಾಗಿದೆ. ಹೀಗಿದ್ದಾಗ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

Heavy Rain Will Continue In Karnataka For Next 24 Hours From June 12 Of 2024

ಯಾವ ಜಿಲ್ಲೆಗಳಿಗೆ ಭರ್ಜರಿ ಮಳೆ?

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಕರಾವಳಿ ಪ್ರದೇಶ & ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಬಲು ಜೋರಾಗಲಿದೆ. ಉಡುಪಿ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಭರ್ಜರಿ ಮಳೆ ಬೀಳಲಿದೆ. ಹಾಗೇ ಮಲೆನಾಡು ಪ್ರದೇಶ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೂ ಭಾರಿ ಮಳೆಯಾಗುವ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಕೂಡ ಭಾರಿ ಮಳೆಯಾಗುವ ಲಕ್ಷಣ ಇದೆ. ಹಾಗಾದ್ರೆ ಬೆಂಗಳೂರಿನ ಕಥೆ ಏನು? ಬೆಂಗಳೂರಿನಲ್ಲೂ ಮಳೆ ಅಬ್ಬರಿಸುತ್ತಾ? ಮುಂದೆ ಓದಿ.

ಬೆಂಗಳೂರಿನಲ್ಲಿ ಇಂದು ಮಳೆ...

ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಮಳೆ ಬಿದ್ದಿದೆ. ಆದ್ರೆ ಇಂದು ಬೆಂಗಳೂರಲ್ಲಿ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದ್ದು, ಮೋಡಗಳು ಮುಸುಕಿದ ವಾತಾವರಣ ಕಂಡರೆ ಹೆಚ್ಚು ಎನ್ನಲಾಗಿದೆ. ಇದನ್ನೂ ಮೀರಿ, ವಾತಾವರಣದಲ್ಲಿ ಬದಲಾವಣೆ ಉಂಟಾದರೆ ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಮುಂಗಾರು ಮಳೆಯ ಮಾರುತಗಳು ಕರ್ನಾಟಕದಲ್ಲಿ ಫುಲ್ ಆಕ್ಟಿವ್ ಆಗಿವೆ. ಹೀಗಾಗಿ ರಾಜ್ಯದಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಯಾವುದಕ್ಕೂ ಸೇಫ್ಟಿಗೆ ಹೊರಗೆ ಹೋಗುವಾಗ ಕೊಡೆ & ರೈನ್‌ಕೋಟ್ ಮರೆಯದೆ ತೆಗೆದುಕೊಂಡು ಹೋಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+