ಮುಂದಿನ 7 ದಿನ ಭಾರಿ ಮಳೆ, ಎಚ್ಚರಿಕೆ ವಹಿಸಲು ಸೂಚನೆ!
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ನದಿಗಳು & ತೊರೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆ ಕಾರಣಕ್ಕೆ ಈಗಾಗಲೇ ಅಗತ್ಯವಾದ ಕ್ರಮಗಳನ್ನ ಕೂಡ ಕೈಗೊಳ್ಳಲಾಗಿದೆ. ಇದೀಗ ಮುಂದಿನ 7 ದಿನ ಭಾರಿ ಮಳೆ ಬೀಳುವ ಬಗ್ಗೆ ಭಾರಿ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಆ ಬಗ್ಗೆ ತಿಳಿಯೋಣ ಮುಂದೆ ಓದಿ.
ಮಳೆಯ ಬಗ್ಗೆ ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಆರ್ಭಟ ನಿಲ್ಲಿಸಿದ್ದು, ಮೇ ತಿಂಗಳ 3ನೇ ವಾರ ಮುಂಗಾರು ಮಳೆ ಅಬ್ಬರಕ್ಕೆ ಮೊದಲೇ ಮಳೆಯ ಬಗ್ಗೆ ಚಿಂತೆ ಮಾಡುವಂತೆ ಆಗಿತ್ತು. ಹೀಗಿದ್ದಾಗ ಮತ್ತೆ ಭರ್ಜರಿ ಮಳೆ ಸುರಿಯಲು ಆರಂಭಿಸಿದೆ. ಈ ಪೈಕಿ ಮುಂದಿನ 7 ದಿನಗಳ ಕಾಲ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಲಾಗಿದೆ. ಅಲ್ಲದೆ ಕರ್ನಾಟಕದ ಜಲಾಶಯಗಳ ಒಳಹರಿವು ಕೂಡ ಈ ಮೂಲಕ ಭಾರಿ ಏರಿಕೆ ಕಾಣಲಿದೆ ಎಂದು ಎಚ್ಚರಿಸಲಾಗಿದೆ.

ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಬೀಳಲಿದೆ. ಈ ಮೂಲಕ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇದೀಗ ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ. ಜೂನ್ 6 ರಿಂದ 8 ರವರೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಜೂನ್ 8 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮಲೆನಾಡು ಜಿಲ್ಲೆ ಪ್ರದೇಶಗಳಲ್ಲಿ ಕೂಡ ಮಳೆ ಅಬ್ಬರ ತೋರಿಸಲಿದೆ. ಹೀಗಾಗಿ ಹೈ ಅಲರ್ಟ್ ಘೋಷಿಸಿರುವ, ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ತಿಳಿಸಿದ್ದಾರೆ.
ಮುಂಗಾರು ಮಳೆಗೆ ಭರ್ಜರಿ ಸ್ವಾಗತ!
ಮಳೆ ವಿಚಾರದಲ್ಲಿ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಪ್ರವೇಶ ಆಗಿದೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಮತ್ತೊಂದ್ಕಡೆ ಈ ರೀತಿಯಾಗಿ ಮಳೆ ಇನ್ನೂ ಕೆಲವು ದಿನಗಳ ಕಾಲ ಅಬ್ಬರಿಸುವ ಮುನ್ಸೂಚನೆ ಇದ್ದು, ಗ್ರಾಮೀಣ ಭಾಗದಲ್ಲು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ನಗರ ಭಾಗದಲ್ಲಿ ಮಳೆಯ ಸಮಸ್ಯೆ ನಿಭಾಯಿಸೋಕೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಇಡೀ ಕರ್ನಾಟಕ ಈಗ ಮುಂಗಾರು ಮಳೆಯನ್ನ ವೆಲ್‌ಕಂ ಮಾಡಿದೆ. ಹಾಗೇ ಉತ್ತಮವಾಗಿ ಮಳೆ ಕೂಡ ಸುರಿಯುತ್ತಿದೆ.












Click it and Unblock the Notifications