Rain Alert: ಕರ್ನಾಟಕದಲ್ಲಿ ಭರ್ಜರಿ ಮಳೆ ಗ್ಯಾರಂಟಿ: ಮುಂದಿನ 24 ಗಂಟೆಯಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ!
ಕರ್ನಾಟಕದಲ್ಲಿ ಮಳೆಯ ಅಬ್ಬರ ಶುರುವಾಗಿದೆ, ಯುಗಾದಿ ಹಬ್ಬದ ಖುಷಿ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಭರ್ಜರಿ ಮಳೆ ಬಿದ್ದಿದೆ. ಇದೇ ಸಮಯದಲ್ಲಿ ಈಗ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಭಾರಿ ಮಳೆ ಬೀಳಲಿದೆ ಎಂಬ ನಿರೀಕ್ಷೆಯಲ್ಲಿ ಕನ್ನಡಿಗರು ಇದ್ದಾರೆ. ಕನ್ನಡಿಗರ ನಿರೀಕ್ಷೆ ಈಗ ನಿಜವಾಗುತ್ತಿದೆ! ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು & ಸಿಡಿಲು ಸಹಿತ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ.
ಬಾರೋ ಬಾರೋ ಮಳೆರಾಯ.. ಹುಯ್ಯೋ ಹುಯ್ಯೋ ಮಳೆರಾಯ.. ಅಂತಾ ಕನ್ನಡಿಗರೆಲ್ಲಾ ಪದ ಹಾಡುವಂತಾಗಿದೆ. ಯಾಕಂದ್ರೆ ಮಳೆ ಇಲ್ಲದೆ, ಕನ್ನಡಿಗರು ನರಳಿ ಹೋಗಿದ್ದಾರೆ. ಒಂದು ಕಡೆ ಕೆರೆ, ಕಟ್ಟೆ, ಡ್ಯಾಂ ಸೇರಿದಂತೆ ನೀರಿನ ಮೂಲಗಳಾದ ನದಿಗಳು ಬತ್ತಿವೆ. ಈ ಸಮಯದಲ್ಲಿ ಒಂದು ಭರ್ಜರಿ ಮಳೆ ಬೀಳಲೇಬೇಕಿದೆ ಅಂತಾ ವರುಣ ದೇವನ ಬಳಿ ಕನ್ನಡಿಗರು ಬೇಡುತ್ತಾ ಕೂತಿದ್ದರು. ಇದೇ ಸಮಯದಲ್ಲಿ ನಿನ್ನೆ, ಅಂದರೆ ಯುಗಾದಿ ಹಬ್ಬದ ಶುಭ ದಿನವೇ ಭಾರಿ ಮಳೆ ಬಿದ್ದಿದೆ.

ಮುಂದಿನ 24 ಗಂಟೆಯಲ್ಲಿ ಮಳೆ!
ಹಾವೇರಿ ಜಿಲ್ಲೆಯಲ್ಲಿ ಹಬ್ಬದ ದಿನವೇ ಮಳೆಯಾಗಿ ಖುಷಿ ಹೆಚ್ಚಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲೂ ಯುಗಾದಿ ಹಬ್ಬದ ದಿನ ಮಳೆ ಸುರಿದಿದೆ. ಹೀಗೆ ಜನರ ಖುಷಿ ಡಬಲ್ ಆಗಿದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ, ನ್ಯಾಮತಿ ಸೇರಿದಂತೆ ವಿಜಯಪುರ, ಹಾವೇರಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆ ಬಿದ್ದಿದೆ. ಈಗ ಕರ್ನಾಟಕದ ಇನ್ನಷ್ಟು ಜಿಲ್ಲೆ ಜನರಿಗೆ ಮಳೆ ಸಿಹಿ ಸುದ್ದಿ ಕೊಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಮುಂದಿನ 24 ಗಂಟೆಯಲ್ಲಿ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು? ಮುಂದೆ ಓದಿ.
ಗುಡುಗು ಸಹಿತ ಭರ್ಜರಿ ಮಳೆ
ಈಗ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ, ಮುಂದಿನ 24 ಗಂಟೆ ಅವಧಿಯ ಒಳಗಾಗಿ ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ ಎನ್ನಲಾಗಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಭರ್ಜರಿ ಮಳೆಯಾಗುತ್ತೆ ಅಂತಾ ಹೇಳಲಾಗುತ್ತಿದೆ. ಆ ಪ್ರಕಾರ ಗುಡುಗು ಸಹಿತ ಭರ್ಜರಿ ಮಳೆ ಬೀಳುವ ಬಗ್ಗೆ ಇದೀಗ ಮುನ್ಸೂಚನೆ ಸಿಗುತ್ತಿದ್ದು, ಜನರು ಕೂಡ ಬಿಸಿಲಿನ ಬೇಗೆಯಿಂದ ಒಂದಷ್ಟು ರಿಲೀಫ್ ಅನ್ನ ಪಡೆಯುತ್ತಿದ್ದಾರೆ
Thunderstorms very likely to occur at isolated places over Bagalakote, Belagavi, Bidar, Vijayapura & Kalaburagi districts in next 24 hours
— Karnataka Weather (@Bnglrweatherman) April 10, 2024
Source: IMD Bengaluru
Issued by: Karnataka SDMA
Issued on: 10 Apr, 13:30
Validity Time: 11 Apr, 13:30
Alert via CAP-SACHET #KarnatakaRains pic.twitter.com/MWOwYz7VCW
ನಿಟ್ಟುಸಿರು ಬಿಟ್ಟ ಕನ್ನಡಿಗರು
ಮನುಷ್ಯನ ಅತಿಯಾದ ಆಸೆ, ಪ್ರಕೃತಿ ಮೇಲೆ ಮನುಷ್ಯ ನಡೆಸಿರುವ ನಿರಂತರ ದೌರ್ಜನ್ಯದಿಂದ ಭೂಮಿ ಮೇಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಕಾರಣಕ್ಕೆ ಮಳೆ ಸರಿಯಾಗಿ ಬರುತ್ತಿಲ್ಲ ಎಂಬುದು ವಿಜ್ಞಾನಿಗಳ ವಾದ. ಇದೆಲ್ಲಾ ಏನೇ ಇರಲಿ ನಮಗೆ ಮಳೆ ಬರಬೇಕು ಅಷ್ಟೇ ಅಂತಿದ್ದ ಜನರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಕರ್ನಾಟಕದಲ್ಲಿ ಈಗ ಭರ್ಜರಿ ಮಳೆ ಆರಂಭವಾಗಿದೆ, ಹಾಗೇ ಇನ್ನೂ ಹಲವು ಪ್ರದೇಶದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲೇ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಇಷ್ಟು ದಿನ ಭೀಕರ ಬಿಸಿಲಿಗೆ ಬೆಚ್ಚಿಬಿದ್ದಿದ್ದ ಜನ ಇದೀಗ ಒಂದಷ್ಟು ನಿಟ್ಟುಸಿರು ಬಿಟ್ಟು ಕೂತಿದ್ದಾರೆ.
ಮೋಡ ಬಿತ್ತನೆ ಮಾಡುತ್ತಾ ಸರ್ಕಾರ?
ಈಗಿನ ಸ್ಥಿತಿ ನೋಡುತ್ತಿದ್ದರೆ ಅಕಸ್ಮಾತ್ ಮಳೆಯ ಕೊರತೆ ಹೀಗೆಯೇ ಮುಂದುವರಿದಿದ್ದೇ ಆದರೆ, ಪರಿಸ್ಥಿತಿ ಕೈಮೀರಿ ಹೋಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ವ್ಯವಸ್ಥೆ ಮಾಡುತ್ತಾ? ಅನ್ನೋ ಕುತೂಹಲ ಕೂಡ ಕಾಡುತ್ತಿದೆ. ಕುತೂಹಲ ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ. ಮತ್ತೊಂದು ಕಡೆ, ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಈ ಬಾರಿ ಕರ್ನಾಟಕದಲ್ಲಿ ಉತ್ತಮವಾಗಿ ಮುಂಗಾರು ಮಳೆ ಬೀಳಲಿದೆ ಎನ್ನಲಾಗಿದೆ. ಇದು ಕನ್ನಡಿಗರಿಗೆ ಒಂದಷ್ಟು ಹರ್ಷ ನೀಡಿದ್ದು, ಬೇಸಿಗೆ ಕಾಲದಲ್ಲೂ ಒಂದಷ್ಟು ಮಳೆ ಬಿದ್ದರೆ ಅದೇ ಲಾಟರಿ ಎಂಬಂತಾಗಿದೆ. ಈ ಮಾತಿನಂತೆ ಈಗ ಮಳೆರಾಯ ಅಬ್ಬರದಲ್ಲಿ ಎಂಟ್ರಿ ಕೊಟ್ಟು, ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದಾನೆ.
ನೀರಿಗಾಗಿ ಶುರುವಾಗಿದೆ ಯುದ್ಧ!
ನೀರು.. ನೀರು.. ನೀರು.. ಹೀಗೆ ಜನ ಇದೀಗ ರೋಡಲ್ಲಿ ಚಿನ್ನ ಸಿಕ್ಕಿದರೂ ತಲೆಕೆಡಿಸಿಕೊಂಡು ನಿಲ್ಲೋದಿಲ್ಲ ಅಂತ ಕಾಣುತ್ತೆ. ಅದೇ ನೀರು ಸಿಕ್ಕರೆ ಎಂತಹ ಗಲಾಟೆ ಆದ್ರೂ ಬಿಡಲ್ಲ ಅಂತಾನೂ ಕಾಣುತ್ತೆ. ಯಾಕಂದ್ರೆ ನೀರಿಗೆ ಫೈಟಿಂಗ್ ಆ ರೇಂಜ್‌ಗೆ ಇದೆ. ಮಳೆ ಬರಲಿಲ್ಲ, ಸರಿಯಾಗಿ ಕೆರೆ, ಕುಂಟೆ, ನದಿ & ಡ್ಯಾಂ ತುಂಬಿಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಸಂಕಷ್ಟ ಎದುರಿಸುವಂತಾಗಿದೆ. ಆದರೆ ಇದೇ ಸಮಯದಲ್ಲಿ ಮಳೆ ವಿಚಾರವಾಗಿ ಸಿಹಿಸುದ್ದಿ ಕನ್ನಡದ ಜನರಿಗೆ ಸಿಕ್ಕಿದೆ. ಅದ್ರಲ್ಲೂ ನೀರಿನ ಸಮಸ್ಯೆ ಕಾರಣಕ್ಕೆ ವಿಲವಿಲ ಒದ್ದಾಡಿರುವ ನಮ್ಮ ಬೆಂಗಳೂರಿಗೆ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗಲಿದ್ದು, ಇನ್ನೇನು ಕೆಲವೇ ದಿನದಲ್ಲಿ ಭರ್ಜರಿ ಮಳೆ ಬೀಳಲಿದೆ ಅಂತಿದೆ ಹವಾಮಾನ ಇಲಾಖೆ.
ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ
ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ.
ಬರದ ನಡುವೆ ಭರ್ಜರಿ ಮಳೆ
ಮಳೆ ಇಲ್ಲದೆ ಕನ್ನಡಿಗರು ನರಳಾಡಿ ಹೋಗಿದ್ದಾರೆ, ಅದರಲ್ಲೂ ಹಳ್ಳಿಗಳಲ್ಲಿ ಕೆರೆ & ಕುಂಟೆ ಬತ್ತಿ ಹೋಗಿ ಬರಡು ಭೂಮಿಯಾಗಿ ಬದಲಾಗಿವೆ. ಇದರ ಜೊತೆಗೆ ಬಿಸಿಲಿನ ಝಳವೂ ಹೆಚ್ಚಾಗಿ ಏನು ಮಾಡಬೇಕು ಅಂತ ಕನ್ನಡಿಗರು ಪರಿತಪಿಸುವ ಸಮಯದಲ್ಲಿ ಭರ್ಜರಿ ಮಳೆ ಬಂದಿದ್ದು ಭೂಮಿ ತಂಪಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನರು ಪರದಾಡಿದ್ದಾರೆ. ಈಗ ಬೇಸಿಗೆ ಮಳೆ ಒಂದಷ್ಟು ನೆಮ್ಮದಿ ನೀಡಿದ್ದು, ರೈತರು ಬೆಳೆ ಉಳಿಸಿಕೊಳ್ಳುವ ಚಡಪಡಿಕೆಯಲ್ಲಿ ಕೂತಿದ್ದಾರೆ.












Click it and Unblock the Notifications