Heavy Rain: ಮಳೆ ಬಗ್ಗೆ ಕನ್ನಡಿಗರಿಗೆ ಸಿಕ್ಕಿದೆ ಭರ್ಜರಿ ಸಿಹಿಸುದ್ದಿ!
ಮಳೆ ಇಲ್ಲ ಅಂತಾ ಕೊರಗುತ್ತಿದ್ದ ಕನ್ನಡಿಗರಿಗೆ ಈ ವರ್ಷದ ಆರಂಭದಲ್ಲೇ ವರುಣ ಕರಣೆಯನ್ನ ತೋರಿಸಿದ್ದ. ಪ್ರತಿನಿತ್ಯ ಪರದಾಡುತ್ತಿದ್ದ ರೈತರು, ಹಳ್ಳಿಗಳ ಜನರಿಗೆ ಮುಂಗಾರು ಪೂರ್ವ ಮಳೆ ಒಂದಷ್ಟು ನೆಮ್ಮದಿ ನೀಡಿದೆ. ಹೀಗಿದ್ದಾಗ ಮತ್ತೆ ಯಾಕೋ ಮಳೆ ಸೈಲೆಂಟ್ ಆಗಿದೆ ಅನ್ನುವಾಗಲೇ ಮತ್ತೊಮ್ಮೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ, ಅದರಲ್ಲೂ ಮುಂದಿನ 1 ವಾರಗಳ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭರ್ಜರಿ ಮುಂಗಾರು ಮಳೆ ಗ್ಯಾರಂಟಿ ಅಂತೆ!
ಮನುಷ್ಯನ ಅಹಂಕಾರ ಹೆಚ್ಚಾಗಿದ್ದು, ಮರಗಳನ್ನು & ಪರಿಸರವನ್ನೂ ಹಾಳು ಮಾಡುತ್ತಿದ್ದಾನೆ. ಮಳೆ ಬೀಳದೆ ಇದ್ದರೆ ಏನಾಗುತ್ತೆ? ಅನ್ನೋದನ್ನ 2023 ರಲ್ಲಿ ಕನ್ನಡ ನಾಡಿನ ಜನರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಮನುಷ್ಯ ಪ್ರಕೃತಿ ಮಾತೆ ಮೇಲೆ ನಡೆಸುತ್ತಿರುವ ದೌರ್ಜನ್ಯದ ಫಲ ಎನ್ನುವಂತೆ ಮಳೆ ಕೈಕೊಟ್ಟು ಹೋಗಿತ್ತು, ಜನರು ಕೂಡ ಹನಿ ಹನಿ ನೀರಿಗೂ ಬಿಂದಿಗೆ ಹಿಡಿದು ಊರೆಲ್ಲಾ ಅಲೆಯುತ್ತಾ ಪರದಾಡಿದ್ದರು.

ಅದರಲ್ಲೂ ಈ ವರ್ಷದ ಆರಂಭದಲ್ಲಿ ಅಂದ್ರೆ 2024ರ ಜನವರಿ, ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಹನಿ ಹನಿ ನೀರಿಗೂ ಕರ್ನಾಟಕದ ಮೂಲೆ ಮೂಲೆಯಲ್ಲಿ ಪರದಾಟ ಶುರುವಾಗಿತ್ತು. ಕನ್ನಡಿಗರ ರಾಜಧಾನಿ ಬೆಂಗಳೂರು ಕೂಡ ನೀರಿನ ಸಮಸ್ಯೆಗೆ ಸಿಲುಕಿ ನಲುಗಿ ಹೋಗಿತ್ತು. ಹೀಗೆ ಸಂಕಷ್ಟದ ಸಮಯದಲ್ಲಿ ಮಳೆ ದೇವರು ಕೈಹಿಡಿದು ನಡೆಸಿದ್ದು, ಇದೀಗ ಮತ್ತೆ ಭರ್ಜರಿ ಮಳೆ ಶುರುವಾಗುವ ಹಿಂಟ್ ಸಿಕ್ಕಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳಲಿದೆ? ಮುಂದೆ ಓದಿ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ!
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಜೂನ್ 21 ರಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಮಲೆನಾಡಿನ ಪ್ರದೇಶಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗೆ ರಾಜಧಾನಿ ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಭರ್ಜರಿ ಮಳೆ ಬೀಳಲಿದೆ ಎನ್ನಲಾಗಿದೆ. ಜೂನ್ 21 ರಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಆರಂಭ ಆಗಲಿದ್ದು, ಜುಲೈ ಮೊದಲ ವಾರದವರೆಗೂ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ
ಹಾಗೇ ಜೂನ್ 22ರ ನಂತರ ಮುಂಗಾರು ಮಾರುತಗಳು ಮತ್ತಷ್ಟು ಬಲವಾಗಿ ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಸಲಿವೆ ಎನ್ನಲಾಗಿದೆ. ಪಶ್ಚಿಮ ಘಟ್ಟಗಳು & ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿ, ಬೊಬ್ಬಿರಿಯಲಿದೆ. ಈ ಮೂಲಕ ಕರ್ನಾಟಕದ ನದಿಗಳು ತುಂಬಿ ಹರಿಯಲಿದ್ದು ಕರ್ನಾಟಕದ ಡ್ಯಾಂಗಳಿಗೆ ಕೂಡ ಭಾರಿ ನೀರು ಹರಿದು ಬರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದಲ್ಲಿ ಕೂಡ ಮಳೆ ಅಬ್ಬರಿಸಲಿದ್ದು, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜೂನ್ 18 ರಿಂದ 26 ರವರೆಗೂ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ. ಹಾಗೇ, ಕಾವೇರಿ ಕೊಳ್ಳದಲ್ಲಿ ಕೂಡ ಭಾರಿ ಮಳೆ ಬೀಳುವ ನಿರೀಕ್ಷೆ ಇದ್ದು ಕನ್ನಡ ನಾಡಿನ ರೈತರು ನಿಟ್ಟುಸಿರು ಬಿಡುತ್ತಿದ್ದಾರೆ.












Click it and Unblock the Notifications