Rain Alert: ಮಳೆ.. ಮಳೆ.. 2011ರ ದಾಖಲೆ ಉಡೀಸ್, ತೇಲಿ ಹೋಗುತ್ತಿದೆ ನಮ್ಮ ಬೆಂಗಳೂರು!
ಬೆಂಗಳೂರಲ್ಲಿ ಭಾರಿ ಮಳೆಗೆ ಎಲ್ಲಾ ಹಾಳಾಗಿ ಹೊಗಿದೆ, ಲಕ್ಷ ಲಕ್ಷ ಕೊಟ್ಟು ತೆಗೆದುಕೊಂಡಿದ್ದ ಕಾರುಗಳು... ಸಾಲ ಮಾಡಿ ಖರೀದಿ ಮಾಡಿದ್ದ ಬೈಕ್‌ಗಳು... ಹೀಗೆ ಎಲ್ಲವೂ ಹಾಳಾಗಿದ್ದು ಜನರು ಹಿಡಿಶಾಪ ಹಾಕುವ ಪರಿಸ್ಥಿತಿ ಇದೆ. ಆದರೆ ಒಂದು ವಿಷಯ ಮಾತ್ರ ಇದೀಗ ಇಡೀ ಬೆಂಗಳೂರಿನ ಜನರಿಗೆ ಎದೆ ನಡುಗುವಂತೆ ಮಾಡಿದೆ. ಮುಂದಿನ ಕೆಲವು ದಿನಗಳ ಕಾಲ ಈ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ!
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಸುರಿದ ಮಳೆ ಇಡೀ ವರ್ಷ ಸುರಿಯಬೇಕಿತ್ತು, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ನರಳಾಡುವ ಸ್ಥಿತಿ ಬಂದೆರಗಿದೆ. ಇಂತಹ ಸಮಯದಲ್ಲೇ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಜನರನ್ನು ಇನ್ನಷ್ಟು & ಮತ್ತಷ್ಟು ಭಯಪಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ 2011ರ ದಾಖಲೆ ಉಡೀಸ್ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ಪ್ರತಿಯೊಂದು ಏರಿಯಾಗೂ ಜಲ ಕಂಟಕ ಎದುರಾಗುವಂತೆ ಮಾಡಿದೆ.

ಮಳೆ.. ಮಳೆ.. ಮಳೆ..
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬಂದ ಕಾರಣಕ್ಕೆ 2011ರ ದಾಖಲೆ ಮುರಿದಿದ್ದು, ಇದೀಗ ಹತ್ತಾರು ಏರಿಯಾಗಳ ಜನರು ಮನೆಗೆ ನೀರು ನುಗ್ಗಿರುವ ಕಾರಣಕ್ಕೆ ಪರದಾಡ್ತಿದ್ದಾರೆ. ಇನ್ನು 2011ರ ಸಮಯದಲ್ಲಿ ಈ ರೀತಿ ಮೇ ತಿಂಗಳಲ್ಲಿ ಭರ್ಜರಿ ಮಳೆ ಸುರಿದಿತ್ತು. ಆದರೆ ಈ ಬಾರಿ ಆ ದಾಖಲೆ ಮುರಿದು ಹೋಗಿದ್ದು, ಭಾರಿ ಮಳೆಗೆ ಜನರು ನರಳಾಡುತ್ತಿದ್ದಾರೆ. ನಗರ ಭಾಗದಲ್ಲಿ ಮನೆಗೆ ನುಗ್ಗಿರುವ ನೀರು ಹೊರಗೆ ಹಾಕುವುದೇ ದೊಡ್ಡ ಸವಾಲಿನ ಕೆಲಸ ಆಗಿದೆ.












Click it and Unblock the Notifications