ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಮತ್ತೆ ನಿವಾರ್ ಅಬ್ಬರ, ಡಿಸೆಂಬರ್ 1ರಿಂದ ಮಳೆ

|
Google Oneindia Kannada News

ಬೆಂಗಳೂರು, ನವೆಂಬರ್ 29 : ಕರ್ನಾಟಕದಲ್ಲಿ 'ನಿವಾರ್' ಚಂಡಮಾರುತದ ಅಬ್ಬರ ಮತ್ತೆ ಹೆಚ್ಚಾಗಲಿದೆ. ಡಿಸೆಂಬರ್ 1ರಿಂದ 4ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ. ಎಸ್. ಪ್ರಕಾಶ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ಮೋಡದಲ್ಲಿ ಮುಚ್ಚಿಹೋದ ಬೆಂಗಳೂರು: ಮಳೆ ಸಂಭವಮೋಡದಲ್ಲಿ ಮುಚ್ಚಿಹೋದ ಬೆಂಗಳೂರು: ಮಳೆ ಸಂಭವ

ನಿವಾರ್ ಚಂಡಮಾರುತದ ಪರಿಣಾಮ ಚೆನ್ನೈ, ಪುದುಚೇರಿಯಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ಡಿಸೆಂಬರ್ 1 ರಿಂದ ಮಳೆಯಾಗುವ ನಿರೀಕ್ಷೆ ಇದೆ.

'ನಿವಾರ್' ಚಂಡಮಾರುತ: ಹೇಗಿರಲಿದೆ ಮಳೆ ಆರ್ಭಟ?'ನಿವಾರ್' ಚಂಡಮಾರುತ: ಹೇಗಿರಲಿದೆ ಮಳೆ ಆರ್ಭಟ?

Cyclone

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ನಾಲ್ಕು ದಿನ ಮಳೆಯಾಗಬಹುದು. ನಿವಾರ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.

ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಭೂಸ್ಪರ್ಶವಾದ ಚಂಡಮಾರುತ ದುರ್ಬಲಗೊಳ್ಳಬೇಕಿತ್ತು. ಆದರೆ, ಅದು ಮತ್ತೆ ಸಮುದ್ರಕ್ಕೆ ಧಾವಿಸಿರುವುದರಿಂದ ಮತ್ತೊಂದು ವಾಯುಭಾರಕುಸಿತ ಉಂಟಾಗುವ ನಿರೀಕ್ಷೆ ಇದೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ.

English summary
Karnataka State Natural Disaster Monitoring Centre (KSNDMC) warned that state may receive rain due to cyclone Nivar from December 1 to 4, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X