School Holiday: ರಣಮಳೆ ಮುನ್ಸೂಚನೆ: ರಾಜ್ಯದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆ

School Holiday: ರಾಜ್ಯದಲ್ಲಿ 2025ರ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಒಂದಲ್ಲ ಒಂದು ವಿಚಾರಕ್ಕೆ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇನ್ನು ಇದೀಗ ಭಾರೀ ಮಳೆ ಮುನ್ಸೂಚನೆ ಇರುವುದರಿಂದ ವಿದ್ಯಾರ್ಥಿಗಳ ದೃಷ್ಟಿಯಿಂದ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ. ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ ಹಾಗೂ ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನೂ ಇದೀಗ ಬೇಸಿಗೆಗೂ ಮುನ್ನ ರಣ ಬಿಸಿಲು ಮುಂದುವರೆದಿದ್ದು, ಪರೀಕ್ಷೆಗಳನ್ನು ಬೇಗ ಮುಗಿಸಿ ಅವಧಿಗೂ ಮುನ್ನ ರಜೆ ಘೋಷಣೆ ಮಾಡುವ ಸಾಧ್ಯತೆಯದೆ ಎಂದು ಹೇಳಲಾಗಿತ್ತು.

Heavy Rain Alert School Holidays Announcement Possibility in These Districts of State

ಮತ್ತೊಂದೆಡೆ ಇದೀಗ ಬಂಗಾಳಕೊಳ್ಳಿಯಲ್ಲಿ ಚಂಡಮಾರುತದ ಪರಿಚಲನೆ ಹಿನ್ನೆಲೆ ಭಾರತದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಮಳೆ ಸುರಿಯುವ ಮುನ್ಸೂಚನೆಯನ್ನು ನೀಡಿದೆ. ಅಷ್ಟೇ ಅಲ್ಲದೆ, ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಇನ್ನೊಂದೆಡೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿದ್ದ ವೈಪರಿತ್ಯ ಕೊನೆಗೊಂಡಿದೆ. ಇದೀಗ ತಮಿಳುನಾಡು ಕರಾವಳಿ ಸಮೀಪ ಸಮುದ್ರ ಮಟ್ಟಕ್ಕಿಂತ 0.9 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿ ಬೀಸುತ್ತಿದ್ದು, ಇದು ಪೂರ್ವ ಮುಂಗಾರು ಮಳೆ ಆರಂಭದ ಮುನ್ಸೂಚನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ಮೂರ್ವ ಮಳೆ ಮಾರ್ಚ್‌ 12ರಿಂದ ಆರಂಭವಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆಯೇ ನಿನ್ನೆ ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ರಣಮಳೆ ಸುರಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಇರುವ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಾರ್ಚ್‌ 12 ಅಂದರೆ ಇಂದಿನಿಂದ ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಆರಂಭ ಆಗಲಿದ್ದು, ದಕ್ಷಿಣ ಭಾಗದ ತಮಿಳುನಾಡು, ಆಂಧ್ರ ಪ್ರದೇಶ, ಓಡಿಶಾ, ಕೇರಳದ ಮೇಲೂ ಇದರ ಪ್ರಭಾವ ಬೀರಲಿದೆ. ಮಾರ್ಚ್ ತಿಂಗಳ ಮಧ್ಯದಲ್ಲಿ ಆರಂಭ ಆಗುವ ಪೂರ್ವ ಮುಂಗಾರು ಮಳೆ, ಏಪ್ರಿಲ್ ಮತ್ತು ಮೇ ಅಂತ್ಯದವರೆಗೆ ಇರಲಿದೆ. ಬಳಿಕ ಜೂನ್ ಆರಂಭಕ್ಕೆ ಆರಂಭಕ್ಕೆ ಮುಂಗಾರು ಎಂಟ್ರಿ ಕೊಡಲಿದೆ. ಇದು ಕೇರಳ ಮೂಲಕ ಕರ್ನಾಟಕಕ್ಕೆ ಪ್ರವೇಶಿಸಲಿದೆ ಎನ್ನುವ ಮುನ್ಸೂಚನೆ ಇದೆ.

ಪೂರ್ವ ಮುಂಗಾರು ಮಳೆ ಹಿನ್ನೆಲೆ ರಾಜ್ಯದ ಹಲವೆಡೆ ತಾಪಮಾನ ಇಳಿಕೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಬಳ್ಳಾರಿ, ಮಂಡ್ಯ, ಹಾಸನ, ಕೋಲಾರ, ತುಮಕೂರು, ಕೊಡಗು, ಚಾಮರಾಜನಗರ ಜಿಲ್ಲೆಗಳು ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಮಾರ್ಚ್ 14ರವರೆಗೆ ರಣಭೀಕರ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮಳೆಯ ತೀವ್ರತೆ ಗಮನಿಸಿ ಅದರ ಆಧಾರದ ಮೇಲೆ ಆಯಾ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈಗಾಗಲೇ ಚಳಿಗಾಲದಲ್ಲಿ ದೇಶದ ಉತ್ತದ ಭಾಗದ ಹಲವಯ ರಾಜ್ಯಗಳಲ್ಲಿ ರಣಭೀಕರ ಚಳಿ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಿಂಗಳುಗಟ್ಟಲೇ ರಜೆ ಘೋಷಣೆ ಮಾಡಿದ ಉದಾಹರಣೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+